ಭಾರತ, ಪಾಕಿಸ್ತಾನ ಫೈನಲ್ ಪಂದ್ಯಕ್ಕೆ ಭಾರೀ ಬೆಟ್ಟಿಂಗ್

Posted By:
Subscribe to Oneindia Kannada

ನವದೆಹಲಿ, ಜೂನ್ 17 : ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಸದೆಬಡಿದಿರುವ ಭಾರತ ಫೈನಲ್ ಪಂದ್ಯದಲ್ಲಿ ಭಾನುವಾರ, ಜೂನ್ 18ರಂದು ಮತ್ತೆ ತನ್ನ ಬದ್ಧವೈರಿಯ ವಿರುದ್ಧ ಎದುರಾಳಿಯಾಗಿದೆ. ಆದರೆ, ಅದಕ್ಕೂ ಮುನ್ನ ನಿರೀಕ್ಷಿಸಿದಂತೆ ಭಾರೀ ಬೆಟ್ಟಿಂಗ್ ನಡೆಯುತ್ತಿದೆ.

ಒಂದು ವರದಿಯ ಪ್ರಕಾರ, 2000 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಬೆಟ್ಟಿಂಗ್ ನಲ್ಲಿ ಹೂಡಲಾಗಿದೆ ಎಂದು ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ತಿಳಿಸಿದೆ. ಜೂನ್ 4ರಂದು ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಅನಾಯಾಸವಾಗಿ ಸೋಲಿಸಿರುವ ವಿರಾಟ್ ಕೊಹ್ಲಿ ಪಡೆ ಫೈನಲ್ ಪಂದ್ಯದಲ್ಲಿಯೂ ಫೆವರಿಟ್ ತಂಡವಾಗಿದೆ.

ಓವಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಜಯಶಾಲಿಯಾಗಲಿದೆ ಎಂದು ಬೆಟ್ಟಿಂಗ್ ಕಟ್ಟಲಾಗಿದೆ. ಬೆಟ್ ಫೇರ್ ವೆಬ್ ಸೈಟ್ ಪ್ರಕಾರ, ಭಾರತದ ಮೇಲೆ ಬೆಟ್ಟಿಂಗ್ ಕಟ್ಟಿದರೆ 100 ರು.ಗೆ 147 ರು. ಸಿಗಲಿದೆ. ಪಾಕಿಸ್ತಾನದ ಮೇಲೆ ಬೆಟ್ಟಿಂಗ್ ಕಟ್ಟಿದರೆ 100 ರು.ಗೆ 300 ರು. ಸಿಗಲಿದೆ.

Champions Trophy betting: Rs 2,000 crore put on India-Pakistan final, says report

ಐಸಿಸಿ ಟೂರ್ನಾಮೆಂಟ್ ಫೈನಲ್ ವೊಂದರಲ್ಲಿ ಹತ್ತು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಎದುರಾಳಿಯಾಗಿವೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೈನವಿರೇಳಿಸುವ ಪಂದ್ಯದಲ್ಲಿ ಭಾರತ ಜಯಶಾಲಿಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India and Pakistan are set to face off in the ICC Champions Trophy 2017 final tomorrow (June 18) in London and Virat Kohli's men are favourites in the betting market. Champions Trophy betting: Rs 2,000 crore put on India-Pakistan final, says report.
Please Wait while comments are loading...