ಏಕದಿನ ಶ್ರೇಯಾಂಕ: ಎಬಿಡಿ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಕೊಹ್ಲಿ

Posted By:
Subscribe to Oneindia Kannada

ನವದೆಹಲಿ, ಜೂನ್ 13 : ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ.

ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 862 ರೇಟಿಂಗ್ ಪಾಯಿಂಟ್‌ ಗಳೊಂದಿಗೆ ವಿರಾಟ್‌ ಕೊಹ್ಲಿ ಏಕದಿನ ಬ್ಯಾಟ್ಸ್ ಮನ್‌ ಪಟ್ಟಿಯಲ್ಲಿ ಆಗ್ರಸ್ಥಾನಕ್ಕೇರಿದ್ದಾರೆ. ಇನ್ನು ಬೌಲರ್ ಗಳ ಶ್ರೇಯಾಂಕದಲ್ಲಿ ಆಸೀಸ್ ವೇಗಿ ಹ್ಯಾಜಲ್ ವುಡ್ ನಂ.1ಸ್ಥಾನ ಅಲಂಕರಿಸಿದ್ದಾರೆ.

VIDEO: ಭಾರತ ವಿರುದ್ಧ ಸೋತಿದ್ದು ನಿರಾಸೆ ತಂದಿದೆ: ಎಬಿಡಿ

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್‌ ವಾರ್ನರ್‌ 861 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 847 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಟಾಪ್ 10 ಬೌಲರ್ ಹಾಗೂ ಬ್ಯಾಟ್ಸ್ ಮನ್ ಗಳ ಪಟ್ಟಿಗಾಗಿ ಮುಂದೆ ಓದಿ...

10ನೇ ಸ್ಥಾನದಲ್ಲಿ ಶಿಖರ್ ಧವನ್

10ನೇ ಸ್ಥಾನದಲ್ಲಿ ಶಿಖರ್ ಧವನ್

ಆಗ್ರ 10 ಸ್ಥಾನಗಳ ಪೈಕಿ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಶಿಖರ್ ಧವನ್ 10ನೇ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದರಿಂದ ಧವನ್ ಶ್ರೇಯಾಂಕ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ

ಏಕದಿನ ಶ್ರೇಯಾಂಕದ ಟಾಪ್ 10 ಬ್ಯಾಟ್ಸ್ ಮನ್ ಗಳು

ಏಕದಿನ ಶ್ರೇಯಾಂಕದ ಟಾಪ್ 10 ಬ್ಯಾಟ್ಸ್ ಮನ್ ಗಳು

1 ವಿರಾಟ್ ಕೊಹ್ಲಿ(862), 2 ಡೇವಿಡ್ ವಾರ್ನರ್(861), 3 ಎಬಿಡಿ ವಿಲಿಯರ್ಸ್(847), 4 ಜೋ ರೂಟ್(798), 5 ಕೇನ್ ವಿಲಿಯಮ್ಸನ್(779), 6 ಕ್ವಿಂಟನ್ ಡಿಕಾಕ್(769), 7 ಫಾಫ್ ಡ್ಯು ಪ್ಲೆಸಿಸ್(768), 8 ಬಾಬರ್ ಅಜಂ(763), 9 ಮಾರ್ಟಿನ್ ಗುಫ್ತಿಲ್(749), 10 ಶಿಖರ್ ಧವನ್(746).

ಏಕದಿನ ಶ್ರೇಯಾಂಕದ ಟಾಪ್ 10 ಬೌಲರ್ ಗಳು

ಏಕದಿನ ಶ್ರೇಯಾಂಕದ ಟಾಪ್ 10 ಬೌಲರ್ ಗಳು

1 ಹ್ಯಾಜಲ್ ವುಡ್(732), 2 ಇಮ್ರಾನ್ ತಹೇರ್(718), 3 ಮಿಚೆಲ್ ಸ್ಟಾರ್ಕ್(701), 4 ಕಗಿಸೋ ರಬಾಡ(685), 5 ಸುನಿಲ್ ನರೇನ್(683), 6 ಟ್ರೆಂಟ್ ಬೌಲ್ಟ್(665), 7 ರಶೀದ್ ಖಾನ್(674), 8 ಕ್ರಿಸ್ ವೋಕ್ಸ್(630), 9 ಪ್ಲಂಕೆಟ್(624), 10 ಮೊಹ್ಮದ್ ನಬೀ(618).

ಐಸಿಸಿ ಏಕದಿನ ಆಲ್ ರೌಂಡರ್ ಶ್ರೇಯಾಂಕ

ಐಸಿಸಿ ಏಕದಿನ ಆಲ್ ರೌಂಡರ್ ಶ್ರೇಯಾಂಕ

ಐಸಿಸಿ ಏಕದಿನ ಆಲ್ ರೌಂಡರ್ ಟಾಪ್ 5 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಲಾಗಿಲ್ಲ. ಶಕೀಬ್ ಹಲ್ ಹಸನ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ ಭಾರತದ ರವೀಂದ್ರ ಜಡೇಜಾ ಮೂರು ಸ್ಥಾನಗಳನ್ನು ಏರಿಕೆ ಕಂಡಿದ್ದು 10ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India skipper Virat Kohli has reclaimed the top spot in batting, while Australian pacer Josh Hazlewood has achieved the number-one position in the bowlers' rankings for the first time in his career in the latest ICC ODI Player Rankings.
Please Wait while comments are loading...