ಎಲ್ಲಕ್ಕಿಂತ ಹೆಚ್ಚಿನ ಮೋಹ ಯಾವುದದು, ಈ ಜಾಹೀರಾತು ನೋಡಿ!

Posted By:
Subscribe to Oneindia Kannada

ನವದೆಹಲಿ, ಮೇ 18: ಎಲ್ಲಕ್ಕಿಂತ ಹೆಚ್ಚಿನ ಮೋಹ ಯಾವುದದು, ಈ ಜಾಹೀರಾತು ನೋಡಿ! ತಿಳಿದುಕೊಳ್ಳಿ, ಐಷಾರಾಮಿ ಬದುಕಿಗೆ ವಿದಾಯ ಹೇಳಿ ಇನ್ನೇನು ಸನ್ಯಾಸಿಯಾಗಲು ಹೊರಟ್ಟಿದ್ದ ವ್ಯಕ್ತಿಗೆ ಕಾಣಿಸಿದ್ದು ಏನು? ಬದಲಾಗಿದ್ದು ಏಕೆ? ಮುಂದೆ ಓದಿ...

ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆಯಲ್ಲಿ 'ಮೌಕಾ ಮೌಕಾ' ಜಾಹೀರಾತು ಪ್ರೇಕ್ಷಕರನ್ನು ಸೆಳೆದಿತ್ತು. ಈಗ ಚಾಂಪಿಯನ್ ಟ್ರೋಫಿ 2017ರ ಭಾರತ ಹಾಗೂ ಪಾಕಿಸ್ತಾನದ ಹಣಾಹಣಿಗೆ ಮುನ್ನುಡಿಯಂತೆ ಹೊಸ ಜಾಹೀರಾತೊಂದನ್ನು ಸ್ಟಾರ್ ಸ್ಫೋಟ್ಸ್ ಹೊರ ಬಿಟ್ಟಿದೆ.[ಚಾಂಪಿಯನ್ಸ್ ಟ್ರೋಫಿ ಕ್ರಿಕೆಟಿಗೆ ಭರ್ಜರಿ ಬಹುಮಾನ ಘೋಷಿಸಿದ ಐಸಿಸಿ]

Champions Trophy 2017: 'Sabse Bada Moh' ad on India-Pakistan clash is a must watch

ಹಾಲಿ ಚಾಂಪಿಯನ್ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಜೂನ್ 04ರಂದು ಎಜ್ ಬಾಸ್ಟನ್ ನಲ್ಲಿ ಪಂದ್ಯ ನಡೆಯಲಿದೆ. ಈ ಟೂರ್ನಿಗಾಗಿ #SabseBadaMoh ಎಂಬ ಜಾಹೀರಾತು ಎಲ್ಲರ ಗಮನ ಸೆಳೆಯುತ್ತಿದೆ. ಇದಲ್ಲದೆ, #ChampionsKaWorldCup ಹೆಸರಿನಲ್ಲಿ ಅಭಿಯಾನ ಕೂಡಾ ಆರಂಭವಾಗಿದೆ.[ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು]

ಈ ವಿಡಿಯೋದಲ್ಲಿ ಉತ್ತಮ ಮನೆ, ಕಾರು, ಉದ್ಯೋಗ ಎಲ್ಲವನ್ನು ಹೊಂದಿದ್ದ ವ್ಯಕ್ತಿಯೊಬ್ಬ ಎಲ್ಲಾ ಮೋಹಗಳನ್ನು ತೊಡೆದು ಹಾಕಿ, ಸನ್ಯಾಸಿಯಾಗಲು ಬೌದ್ಧ ಮಂದಿರಕ್ಕೆ ಹೋಗುತ್ತಾನೆ.[ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಟೀಂ ಇಂಡಿಯಾ ಪ್ರಕಟ]

ಇನ್ನೇನು ಆತನ ತಲೆ ಕೂದಲನ್ನು ಬೋಳಿಸಬೇಕು ಎನ್ನುವಷ್ಟರಲ್ಲಿ ಆತನ ಕಣ್ಣಿಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಜಾಹೀರಾತು ಇರುವ ದಿನಪತ್ರಿಕೆ ಕಾಣಿಸುತ್ತದೆ. ತಕ್ಷಣವೇ ಅಲ್ಲಿಂದ ಎದ್ದು ಹೊರಡುತ್ತಾನೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the highly popular 'Mauka-Mauka' advertisements during T20I and ODI World Cups, broadcasters have now released another ad campaign on India-Pakistan rivalry ahead of Champions Trophy 2017.
Please Wait while comments are loading...