ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟಿಗೆ ಭರ್ಜರಿ ಬಹುಮಾನ ಘೋಷಿಸಿದ ಐಸಿಸಿ

ದುಬೈ, ಮೇ 14 : ಮುಂದಿನ ತಿಂಗಳು ಜೂನ್‌ 1ರಿಂದ ಇಂಗ್ಲೆಂಡ್‌ ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನಲ್ಲಿ ವಿಜೇತವಾಗುವ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾನುವಾರ ಭರ್ಜರಿ ನಗದು ಬಹುಮಾನ ಘೋಷಿಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೇರಿದಂತೆ 8 ಪ್ರಮುಖ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದ್ದು ಐಸಿಸಿ ಒಟ್ಟು 4.5 ಮಿಲಿಯನ್ ಡಾಲರ್ ನಗದು ಬಹುಮಾನ ಘೋಷಿಸಿದೆ. [ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಟೀಂ ಇಂಡಿಯಾ ಪ್ರಕಟ]

ಚಾಂಪಿಯನ್ ತಂಡ (ವಿಜೇತ) ತಂಡ 2.2 ಮಿಲಿಯನ್ ಡಾಲರ್ ಹಾಗೂ ರನ್ನರ್ ಅಪ್ (2ನೇ ಸ್ಥಾನ) ತಂಡ 1.1 ಮಿಲಿಯನ್ ಡಾಲರ್ ನಗದು ಬಹುಮಾನವನ್ನು ಬಾಚಿಕೊಳ್ಳಲಿವೆ. [ಭಾರತ-ಪಾಕ್ ಪಂದ್ಯದ ಎಲ್ಲಾ ಟಿಕೆಟ್ ಸೋಲ್ಡ್ ಔಟ್!]

Champions Trophy 2017: ICC announce $2.2 million as prize money for the winning team

ಇನ್ನು ಸೆಮಿಫೈನಲ್ ನಲ್ಲಿ ಕಾದಾಡುವ ಉಭಯ ತಂಡಗಳಿಗೆ ತಲಾ 450,000 ಡಾಲರ್, ಗುಂಪಿನಲ್ಲಿ ಅಗ್ರ ಮೂರನೇ ಸ್ಥಾನದಲ್ಲಿರುವ ತಂಡಗಳು 90,000 ಡಾಲರ್ ಮತ್ತು ಕೊನೆಯ ಸ್ಥಾನದಲ್ಲಿರುವ ತಂಡಗಳು ತಲಾ 60,000 ಡಾಲರ್ ನಗದು ಬಹುಮಾನ ಪಡೆಯಲಿವೆ.

2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ತಂಡ 1.70 ಡಾಲರ್ ಬಹುಮಾನವನ್ನು ಪಡೆದುಕೊಂಡಿತ್ತು. ಧೋನಿ ನಾಯಕತ್ವದಲ್ಲಿ ಭಾರತ ಈಗಾಗಲೇ ಮೂರು ಚಾಂಪಿಯನ್ಸ್ ಟ್ರೋಫಿ ಗೆದ್ದು ಸಾಧನೆ ಮಾಡಿದೆ.

ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ಚಾಂಪಿಯನ್ಸ್ ಟ್ರೊಫಿಯಲ್ಲಿ ಆಡುತ್ತಿದ್ದು ಮೇ 28 ಮತ್ತು ಮೇ 30ರಂದು ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

ಜೂನ್ 1ರಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಸೆಣಸಾಟ ನಡೆಸಲಿದ್ದು ಜೂನ್ 4ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X