ಬಾಂಗ್ಲಾ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ 5 ಅಂಶ

Posted By:
Subscribe to Oneindia Kannada

ಅಂತೂ ಇಂತು, ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಸಡ್ಡು ಹೊಡೆಯಲು ಸಜ್ಜಾಗಿದೆ. ಗುರುವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು, ಬಾಂಗ್ಲಾದೇಶದ ವಿರುದ್ಧ 9 ವಿಕೆಟ್ ಜಯ ಸಂಪಾದಿಸಿ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟಿದೆ.

ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ

ಇಲ್ಲಿನ ಎಡ್ಗ್ ಬಾಸ್ಟನ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ಸ್ಕೋರ್ ಬೋರ್ಡ್ ನಲ್ಲಿ 264 ರನ್ ಗಳ (50 ಓವರ್, 7 ವಿಕೆಟ್) ಸ್ಪರ್ಧಾತ್ಮಕ ಮೊತ್ತವನ್ನೇನೋ ಪೇರಿಸಿತ್ತು. ಆದರೆ, ಭಾರತವು ಉತ್ತಮ ಆಟವಾಡಿ (40.1 ಓವರ್, 1 ವಿಕೆಟ್) 265 ರನ್ ಪೇರಿಸುವ ಮೂಲಕ ಗೆಲುವು ಸಾಧಿಸಿತು.

ಮುಕ್ಕಾಲು ಭಾಗ ಪಂದ್ಯದ ಮುಗಿದ ಮೇಲೆ ಈ ಪಂದ್ಯ ಏಕಪಕ್ಷೀಯವಾಯಿತು. ಆದರೆ, ಅದಕ್ಕೂ ಮುನ್ನ ಜಯದ ಮಾಲೆ ಯಾರಿಗೆ ಎಂಬ ಆತಂಕ ಎಲ್ಲರಲ್ಲೂ ಇತ್ತು.

ಕೊಹ್ಲಿ ನಾಲಗೆ ಹೊರಹಾಕಿ ಸಂಭ್ರಮಿಸಿದ್ದಕ್ಕೆ ಏನರ್ಥ?

ಅದೇನೇ ಇರಲಿ. ಈ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ನೆರವಾದ ಐದು ಅಂಶಗಳು ಯಾವುವು? ಯಾವ ಕಾರಣಗಳಿಂದ ಭಾರತ ತಂಡಕ್ಕೆ ಯಶಸ್ಸು ದಕ್ಕಿತು ಎಂಬುದರ ಒಂದು ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.

ಈ ಜೋಡಿ ಮುರಿದಿದ್ದು ಒಳಿತೇ ಆಯಿತು

ಈ ಜೋಡಿ ಮುರಿದಿದ್ದು ಒಳಿತೇ ಆಯಿತು

ಆರಂಭಿಕ ತಮೀಮ್ ಇಕ್ಬಾಲ್, ಮುಷ್ಫೀಕರ್ ರಹಮಾನ್ ಅವರ ಶತಕದ ಜತೆಯಾಟಕ್ಕೆ ಬ್ರೇಕ್ ಹಾಕಿದ್ದು ಭಾರತ ಪಾಲಿಗೆ ದೊಡ್ಡ ಸಾಧನೆ. ಆ ಜೋಡಿಯನ್ನು ಹಾಗೆಯೇ ಆಡಲು ಬಿಟ್ಟಿದ್ದರೆ, ಬಾಂಗ್ಲಾದೇಶದ ಮೊತ್ತ 300 ರನ್ ಗಡಿ ದಾಟುತ್ತಿದ್ದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಹಾಗಾಗಿದ್ದರೆ, ಅದು ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಇಳಿಯಬೇಕಿದ್ದ ಭಾರತ ತಂಡದ ಮೇಲೆ ಹೆಚ್ಚು ಒತ್ತಡ ಹೇರಿದಂತಾಗುತ್ತಿತ್ತು.

ಧೋನಿ-ಕೊಹ್ಲಿ ಆಲೋಚನೆಯ ಫಲ

ಧೋನಿ-ಕೊಹ್ಲಿ ಆಲೋಚನೆಯ ಫಲ

ಪಂದ್ಯದ ನಂತರ ಕೊಹ್ಲಿ ಹೇಳಿದಂತೆ, ಧೋನಿ ಐಡಿಯಾದಂತೆ ಆ ಹೊತ್ತಿನಲ್ಲಿ ಆಫ್ ಸ್ಪಿನ್ನರ್ ಅನ್ನು ದಾಳಿಗೆ ಇಳಿಸಿದ್ದು ಭಾರತದ ಪಾಲಿಗೆ ಹೊಸ ತಿರುವು ಕೊಟ್ಟಿತು. ತಮ್ಮ ಮೇಲೆ ಧೋನಿ ಹಾಗೂ ಕೊಹ್ಲಿ ಇಟ್ಟ ನಂಬಿಕೆಯನ್ನು ಕೇದಾರ್ ಜಾಧವ್ ಉಳಿಸಿಕೊಂಡರು. ಕ್ರೀಸ್ ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಇಕ್ಬಾಲ್ ಹಾಗೂ ಮುಷ್ಫೀಕರ್ ಜೋಡಿಯನ್ನು ಮುರಿಯುವಲ್ಲಿ ಅವರು ಯಶಸ್ವಿಯಾದರು. ಆನಂತರ, ಬಾಂಗ್ಲಾದೇಶದ ಇನಿಂಗ್ಸ್ ಬೇಗನೇ ಕುಸಿಯಿತು.

ಬಾಂಗ್ಲಾ ಮಣಿಸಿದ ಭಾರತಕ್ಕೆ ಕ್ರಿಕೆಟ್ ಲೋಕದ ಶುಭ ಹಾರೈಕೆ

ಇನಿಂಗ್ಸ್ ಗೆ ಉತ್ತಮ ಅಡಿಪಾಯ

ಇನಿಂಗ್ಸ್ ಗೆ ಉತ್ತಮ ಅಡಿಪಾಯ

ಆರಂಭಿಕರ ಜೋಡಿಯ ಆಟ ತಂಡದ ಯಾವುದೇ ಇನಿಂಗ್ಸ್ ಗೆ ಭದ್ರ ಅಡಿಪಾಯ. ಇದರಲ್ಲಿ ಭಾರತ ತಂಡದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಯಶಸ್ವಿಯಾಗಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. 15 ಓವರ್ ಗಳಾಗುವಷ್ಟರಲ್ಲಿ ತಂಡದ ಮೊತ್ತವನ್ನು 90 ರನ್ ಗಳ ಆಜುಬಾಜಿಗೆ ತಂದು ನಿಲ್ಲಿಸುವ ಮೂಲಕ ಉತ್ತಮ ರನ್ ರೇಟ್ ಕಾಪಾಡಿಕೊಂಡಿದ್ದು, ಇದರ ಜತೆಗೆ, ಬಾಂಗ್ಲಾದೇಶದ ಆರಂಭಿಕ ಬೌಲಿಂಗ್ ನ ರಭಸವನ್ನು ಯಶಸ್ವಿಯಾಗಿ ಎದುರಿಸಿದ್ದು ಶ್ಲಾಘನೀಯ.

ಚಾಂಪಿಯನ್ಸ್ ಟ್ರೋಫಿ : ಗಂಗೂಲಿ ದಾಖಲೆ ಬದಿಗೊತ್ತಿದ ಧವನ್

ಜವಾಬ್ದಾರಿಯುತ ಆಟ

ಜವಾಬ್ದಾರಿಯುತ ಆಟ

ಕೆಲವೊಮ್ಮೆ ಆರಂಭಿಕ ಜೋಡಿ ಮುರಿದ ಕೂಡಲೇ ಒಂದೆರಡು ವಿಕೆಟ್ ಬಿದ್ದು ತಂಡವು ಅಪಾಯದಂಚಿಗೆ ಬಂದು ನಿಲ್ಲುವ ಪ್ರಮೇಯಗಳಿರುತ್ತವೆ. ಆದರೆ, ಭಾರತ ತಂಡದ ಇನಿಂಗ್ಸ್ ನಲ್ಲಿ ಹಾಗಾಗಲಿಲ್ಲ. ಶಿಖರ್ ಧವನ್ ಅವರ ವಿಕೆಟ್ ಉರುಳುತ್ತಲೇ ಇನಿಂಗ್ಸ್ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡ ರೋಹಿತ್ ಶರ್ಮಾ (ಅಜೇಯ 123, 129 ಎಸೆತ, 15 ಬೌಂಡರಿ, 1 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ(ಅಜೇಯ 96 ರನ್, 78 ಎಸೆತ, 13 ಬೌಂಡರಿ) ತಂಡವನ್ನು ಯಶಸ್ವಿಯಾಗಿ ಜಯದ ಗುರಿಯ ಕಡೆಗೆ ಕೊಂಡೊಯ್ದರು.

ಕೊಹ್ಲಿ ಶತಕದಂಚಿನ ಆಟವೂ ಅದ್ಭುತ

ಕೊಹ್ಲಿ ಶತಕದಂಚಿನ ಆಟವೂ ಅದ್ಭುತ

ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಅಂತೂ ಅದ್ಭುತ. ಆರಂಭಿಕರಾಗಿ ಕಣಕ್ಕಿಳಿದು ಇನಿಂಗ್ಸ್ ಕಟ್ಟಿದ ರೀತಿ ಮನೋಜ್ಞ. ಇನ್ನು, ಕೊಹ್ಲಿ ಬಿಡಿ. ಅವರ ಬಗ್ಗೆ ಹೆಚ್ಚು ಹೇಳುವುದೇ ಬೇಡ. ಎಂದಿನಂತೆ, ಸ್ಫೂರ್ತಿದಾಯಕ ಇನಿಂಗ್ಸ್ ಅವರದ್ದು.

ಎಬಿಡಿ ಏಕದಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finally India got success to step into the on-going Champions trophy 2017 final to face Pakistan again. In the semi final match India managed to win against Bangladesh. Here are the 5 points which have helped India to win against Bangladesh.
Please Wait while comments are loading...