ಮನೀಶ್ ಗೆ ಅವಕಾಶ ಸಿಕ್ಕರೂ, ಕೈ ಕೊಟ್ಟ ಅದೃಷ್ಟ, ತಂಡದಿಂದ ಹೊರಕ್ಕೆ!

Posted By:
Subscribe to Oneindia Kannada

ಬೆಂಗಳೂರು, ಮೇ 19:ಕರ್ನಾಟಕದ ಮನೀಶ್ ಪಾಂಡೆ ಅವರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾದ ಬೆನ್ನಲ್ಲೇ ಗಾಯದ ಸಮಸ್ಯೆಯಿಯಿಂದ ಇಂಗ್ಲೆಂಡ್ ಟೂರ್ ಮಿಸ್ ಮಾಡಿಕೊಂಡಿದ್ದಾರೆ.

ಮನೀಶ್ ಬದಲಿಗೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ.[15 ಸದಸ್ಯರ ಟೀಂ ಇಂಡಿಯಾ ಪ್ರಕಟ]

Champions Trophy 2017: Dinesh Karthik replaces injured Manish Pandey in India squad

ಐಪಿಎಲ್ 10ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿ ಮನೀಶ್ ಪಾಂಡೆ ಅವರು 14 ಪಂದ್ಯಗಳಿಂದ 396 ರನ್ ಗಳಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಿದಾಗಲೇ ಐವರು ಮೀಸಲು ಆಟಗಾರರ ಹೆಸರನ್ನು ಸೂಚಿಸಿತ್ತು. ಯುವ ಪ್ರತಿಭೆ ರಿಷಬ್ ಪಂತ್ ಬದಲಿಗೆ ತಮಿಳುನಾಡಿನ ಹಿರಿಯ ಆಟಗಾರ ದಿನೇಶ್ ಗೆ ಬಿಸಿಸಿಐ ಮಣೆ ಹಾಕಿದೆ. [ಸ್ಟಾಂಡ್ ಬೈ ಆಟಗಾರರಾಗಿ ಇರಬೇಕೆಂದು ಧೋನಿ ಹೇಳಿದ ಆ ಐವರು]

2013ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಅನುಭವ ಹೊಂದಿರುವ ದಿನೇಶ್ ಅವರು ಈ ಬಾರಿ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ಪರ ಆಡಿ 361ರನ್ ಕಲೆ ಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior wicketkeeper-batsman Dinesh Karthik has replaced middle-order batsman Manish Pandey in Indian squad for the upcoming Champions Trophy 2017.
Please Wait while comments are loading...