'ಅಪ್ಪ ಯಾರು?' ಎಂದಿದ್ದಕ್ಕೆ ಮೊಹಮ್ಮದ್ ಶಮಿ ಕೆರಳಿದ್ದೇಕೆ?

Posted By:
Subscribe to Oneindia Kannada

ಲಂಡನ್, ಜೂನ್ 20: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಅನುಭವಿಸಿ ಪೆವಿಲಿಯನ್ ಗೆ ಹಿಂತಿರುಗುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಪಾಕಿಸ್ತಾನದ ಅಭಿಮಾನಿಗಳು ಕಿಚಾಯಿಸಿದ ಘಟನೆ ವರದಿಯಾಗಿದೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ.

ಶಮಿ ಹಂಚಿಕೊಂಡ ಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿ?

ಫ್ಯಾನ್ಸ್ ಮಾತಿಗೆ ಕಿವಿಗೊಡದೆ ಎಲ್ಲರೂ ತೆರಳಿದ್ದಾರೆ. ಆದರೆ, ವೇಗಿ ಮೊಹಮ್ಮದ್ ಶಮಿ ಮಾತ್ರ ಕೆರಳಿದ್ದಾರೆ. ಅಪ್ಪ ಯಾರು? ಎಂದು ಪಾಕಿಸ್ತಾನ ಪರ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಕ್ಕೆ ಉತ್ತರಿಸಲು ಶಮಿ ಮುನ್ನುಗ್ಗಿದ್ದಾಗ ಧೋನಿ ಅವರನ್ನು ತಡೆದಿದ್ದಾರೆ.

Champions Trophy 2017: Angry Mohammed Shami reacts to Pakistani fan's 'baap kaun hai' provocations

ಈ ವಿಡಿಯೋ ಫೇಸ್ ಬುಕ್ ನಲ್ಲಿ ಸರಿಸುಮಾರು 2.5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ, ಸಾವಿರಾರು ಮಂದಿ ಹಂಚಿಕೊಂಡಿದ್ದು, ಕಾಮೆಂಟ್ ಮಾಡಿದ್ದಾರೆ.

ಓವಲ್ ಮೈದಾನದಲ್ಲಿ 180ರನ್ ಗಳ ಅಂತರದ ಸೋಲು ಕಂಡು ಡ್ರೆಸಿಂಗ್ ರೂಮ್ ನತ್ತ ತೆರಳುತ್ತಿದ್ದ ವಿರಾಟ್ ಕೊಹ್ಲಿ ಪಡೆಗೆ ನಿಂದನೆಯ ಸ್ವಾಗತ ಸಿಕ್ಕಿದೆ. ಡ್ರೆಸ್ಸಿಂಗ್ ರೂಮ್‌ ಗೆ ಹೋಗುವ ಹಾದಿಯಲ್ಲಿ ವಿರಾಟ್‌ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರನ್ನು ಕಿಚಾಯಿಸಲಾಗಿದೆ. ಇದನ್ನು ವಿಡಿಯೋ ಮಾಡಿ ಫೇಸ್ ಬುಕ್ ಗೆ ಹಾಕಲಾಗಿದೆ.

ಮೊಹಮ್ಮದ್ ಶಮಿಗೆ ಮುಸ್ಲಿಂ ಎಂದು ಕರೆದ ಶೋಯೆಬ್ ಗೆ ಬೈಗುಳ

'ಕೊಹ್ಲಿ ಸರ್‌ ನಿಮ್ಮ ಜಂಭ ಇಳಿಯಿತೇ?' ಎಂದಿದ್ದಾರೆ. ನಂತರ ಶಮಿ ಹೋಗುವಾಗ ಬಾಪ್ ಕೌನ್ ಹೈ? ಎಂದು ಪ್ರಶ್ನಿಸಿದ್ದಾರೆ. ಸುಮ್ಮನೆ ಹೋಗುತ್ತಿದ್ದ ಶಮಿ, ಮಾರ್ಗ ಮಧ್ಯದಲ್ಲಿ ನಿಂತು, ಅ ಆ ಪ್ರಶ್ನೆಗೆ ಉತ್ತರಿಸಲು ಧಾವಿಸಿದ್ದಾರೆ. ಆದರೆ, ಹಿಂದೆ ಬರುತ್ತಿದ್ದ ಧೋನಿ ಅವರು ಶಮಿಯನ್ನು ತಡೆದಿದ್ದಾರೆ.

ಶಮಿ ಅವರು ತಮ್ಮ ತಂದೆಯನ್ನು ಹಾಗೂ ದೇಶವನ್ನು ಬಹುವಾಗಿ ಪ್ರೀತಿಸುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಅಪ್ಪನನ್ನು ಕಳೆದುಕೊಂಡಿದ್ದು, ಗೋರಿ ತೋಡಿದ್ದು ಎಲ್ಲವನ್ನು ಫೇಸ್ ಬುಕ್ ನಲ್ಲಿ ಹಾಕಿ ನೋವು ಹಂಚಿಕೊಂಡಿದ್ದರು. ಹೀಗಾಗಿ, ಸಹಜವಾಗಿ ಕೆರಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India cricketer Mohammed Shami was infuriated by the taunts of an enthusiastic Pakistani fan at the stadium after losing in final against Pakistan in the ICC Champions Trophy 2017.
Please Wait while comments are loading...