ಕಾವೇರಿ ಗಲಾಟೆ ಹಿನ್ನೆಲೆ : ಕೆಪಿಎಲ್ ಹುಬ್ಬಳ್ಳಿಯಲ್ಲಿಯೇ ಮುಂದುವರಿಕೆ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಸೆ 22 : ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯಬೇಕಿದ್ದ 5ನೇ ಆವೃತ್ತಿ ಕೆಪಿಎಲ್ ಮೊದಲ ಹಂತದ ಕ್ರಿಕೆಟ್ ಪಂದ್ಯಗಳು ಫೈನಲ್ ಪಂದ್ಯದವರೆಗೂ ಹುಬ್ಬಳ್ಳಿಯಲ್ಲಿಯೇ ಜರುಗಲಿವೆ ಎಂದು ಕರ್ನಾಟಕ ಕ್ರಿಕೆಟ್ ನಿಯಂತ್ರಣ ಮಂಡಳಿ ಉಪಾಧ್ಯಕ್ಷ ಸುಧಾಕರ ರಾವ್ ಹೇಳಿದ್ದಾರೆ.

[ಗ್ಯಾಲರಿ: ಕರ್ನಾಟಕ ಪ್ರೀಮಿಯರ್ ಲೀಗ್ 2016]

ಅವರು ನಗರದ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಈಗಾಗಲೇ ಪಂದ್ಯಾವಳಿ ನಡೆಸಲು ಎಲ್ಲ ಸಿದ್ಧತೆಗಳು ಸಿದ್ಧವಾಗಿಯೇ ಇವೆ. ಹೀಗಾಗಿ ಮೈಸೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಹುಬ್ಬಳ್ಳಿಯಲ್ಲಿ ಮುಂದುವರೆಸಲಾಗುವುದು ಎಂದರು. [ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]

Cauvery dispute : Mysuru KPL matches shifted to Hubballi

ಕಾವೇರಿ ಗಲಾಟೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎಂಬ ಆತಂಕ ರಾಜ್ಯದ ಜನತೆಯಲ್ಲಿದೆ. ಅಲ್ಲದೇ ಎಲ್ಲರ ಸುರಕ್ಷತೆಯು ನಮಗೆ ಮುಖ್ಯ. ಆದ್ದರಿಂದ ಪಂದ್ಯಾವಳಿಗಳನ್ನು ಹುಬ್ಬಳ್ಳಿಯಲ್ಲಿ ಮುಂದುವರೆಸಲು ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.[ಕಾವೇರಿ ಗಲಭೆ: ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು]

ಸೆ. 17ರಿ೦ದ 26ರವರೆಗೆ ಹುಬ್ಬಳ್ಳಿಯಲ್ಲಿ ಮೊದಲ ಲೀಗ್ ನಡೆಯಲಿದೆ. ಸೆ.28ರಿ೦ದ ಅ. 2ರವರೆಗೆ ಮೈಸೂರಿನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಸೇರಿದ೦ತೆ 2ನೇ ಲೀಗ್ ನಡೆಸಲು ನಿಗದಿಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹುಬ್ಬಳ್ಳಿಯಲ್ಲೇ ಕೆಪಿಎಲ್ ಫೈನಲ್ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Premier League fifth edition matches scheduled to be held in Mysuru has been shifted to Hubballi in view of the situation prevailing in this part of the region due to Cauvery dispute said Sudhakar Rao, KSCA.
Please Wait while comments are loading...