ಕಾವೇರಿ ಗಲಭೆ: ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು

Posted By:
Subscribe to Oneindia Kannada

ಬೆಂಗಳೂರು, ಸೆ.14: ಕಾವೇರಿಗಾಗಿ ಕರ್ನಾಟಕದಲ್ಲಿ ಗಲಭೆ ನಡೆದ ಹಿನ್ನಲೆಯಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಗಳ ವೇಳೆಯನ್ನು ಬದಲಾಯಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ನಿರ್ಧರಿಸಿದೆ.

ಮ್ಯೆಸೂರಿನಲ್ಲಿ ಕಾವೇರಿ ಹೋರಾಟದ ಬಿಸಿ ಐದನೇ ಆವೃತ್ತಿಯ ಕರ್ನಾಟಕಕ ಪ್ರೀಮಿಯರ್ ಲೀಗ್ ಟಿ20 ವೇಳಾಪಟ್ಟಿಗೆ ತಟ್ಟಿದೆ.[ಐದನೇ ಕೆಪಿಎಲ್ ಸಮರ ಸಂಪೂರ್ಣ ವೇಳಾಪಟ್ಟಿ]

ಮ್ಯೆಸೂರಿನಲ್ಲಿ ಆರ೦ಭವಾಗಬೇಕಾಗಿದ್ದ ಟೂರ್ನಿಗೆ ಈಗ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಕೆಎಸ್ ಸಿಎ ಪ್ರಕಟಿಸಿದೆ. ಕೆಎಸ್ ಸಿಎ ಮಂಗಳವಾರ ತುರ್ತು ಸಭೆ ನಡೆಸಿ ವೇಳಾಪಟ್ಟಿಯಲ್ಲಿ ಬದಲಾವಣೆ ಬಗ್ಗೆ ನಿಧಾ೯ರ ಮಾಡಿದೆ.[ಕೆಪಿಎಲ್: ಚಾಂಪಿಯನ್ ಬಿಜಾಪುರ್ ಬುಲ್ಸ್ ಪರಿಚಯ]

Cauvery Dispute: Karnataka Premier League matches will be played in Hubballi

ಸೆ. 16ರ೦ದು ಆರ೦ಭವಾಗಬೇಕಿದ್ದ ಟೂರ್ನಿ ಸೆಪ್ಟೆಂಬರ್ 17 ರಿಂದ ಆರ೦ಭವಾಗಲಿದ್ದು, ಅಕ್ಟೋಬರ್ 1 ರ ಬದಲು 2ರ೦ದು ಮುಕ್ತಾಯಗೊಳ್ಳಲಿದೆ.

ಈ ಮುಂಚಿನ ವೇಳಾಪಟ್ಟಿಯಂತೆ ಮೈಸೂರಿನಲ್ಲಿ ಸೆ. 16ರಿ೦ದ 25ರವರೆಗೆ ಮೊದಲ ಲೀಗ್(22 ಪಂದ್ಯಗಳು) ನಡೆಯಬೇಕಿತ್ತು. ಆದರೆ, ಕಾವೇರಿ ಆಕ್ರೋಶದಿ೦ದಾಗಿ ಸೆ. 17ರಿ೦ದ 26ರವರೆಗೆ ಹುಬ್ಬಳ್ಳಿಯಲ್ಲಿ ಮೊದಲ ಲೀಗ್ ನಡೆಯಲಿದ್ದು, ಸೆ. 27 ವಿಶ್ರಾ೦ತಿ ದಿನವಾಗಿರಲಿದೆ.[ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]

ಸೆ.28ರಿ೦ದ ಅ. 2ರವರೆಗೆ ಮೈಸೂರಿನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಸೇರಿದ೦ತೆ 2ನೇ ಲೀಗ್ ನಡೆಯಲಿದೆ. ಉಳಿದಂತೆ ತ೦ಡದ ಮುಖಾಮುಖಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ನಮ್ಮ ಶಿವಮೊಗ್ಗ ವಿರುದ್ಧ ನಡೆಯಲಿದೆ ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In the wake of Cauvery agitation across the state, including Mysuru, the venue of the first phase of Karnataka Premier League (KPL) has been shifted. The matches planned from September 16 to 25 at SDNRW ground in Mysuru will now be played in Hubballi said KSCA.
Please Wait while comments are loading...