ಕ್ಯಾಪ್ಟನ್ ಕೊಹ್ಲಿ ದ್ವಿಶತಕ, 84 ವರ್ಷಗಳ ಕಾಯುವಿಕೆ ಅಂತ್ಯ!

Posted By:
Subscribe to Oneindia Kannada

ನಾರ್ಥ್ ಸೌಂಡ್ (ಆಂಟಿಗ್ವಾ), ಜುಲೈ 22: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ನಾಯಕನಾಗಿ ವಿದೇಶಿ ನೆಲದಲ್ಲಿ ದ್ವಿಶತಕ ಬಾರಿಸಿದ್ದಾರೆ. ಈ ಮೂಲಕ 84 ವರ್ಷಗಳ ಕಾಯುವಿಕೆಗೆ ಅಂತ್ಯವಾಗಿದೆ. ಭಾರತದ ನಾಯಕನೊಬ್ಬ ವಿದೇಶಿ ನೆಲದಲ್ಲಿ ಪ್ರಪ್ರಥಮ ಬಾರಿಗೆ ದ್ವಿಶತಕ ಬಾರಿಸಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ಕೊಹ್ಲಿ ಅವರು ನಾಯಕನಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ (ಶುಕ್ರವಾರ) ದಲ್ಲಿ ಈ ಸಾಧನೆ ಕಂಡು ಬಂದಿದೆ.[ವಿರಾಟ್ ಕೊಹ್ಲಿ ಮತ್ತೊಂದು ವಿಕ್ರಮ, ಚೊಚ್ಚಲ ದ್ವಿಶತಕ]

ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಮೊದಲ ದಿನದ ಅಂತ್ಯಕ್ಕೆ 143 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕೊಹ್ಲಿ ಅವರು ವೆಸ್ಟ್ ಇಂಡೀಸ್ ನಲ್ಲಿ ದ್ವಿಶತಕ ಗಳಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.

ಅಲ್ಲದೆ, ವಿದೇಶಿ ನೆಲದಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಕ್ಯಾಪ್ಟನ್ ಎಂಬ ಸಾಧನೆ ಮಾಡಿದ್ದಾರೆ. 281 ಎಸೆತಗಳಲ್ಲಿ ಕೊಹ್ಲಿ ಅವರು ಪ್ರಪ್ರಥಮ ಬಾರಿಗೆ 200 ರನ್ ಗಡಿ ದಾಟಿದರು.

Captain Virat Kohli hits double ton to end India's 84-year wait

ಅಂಕಿ ಅಂಶಗಳ ಅಚ್ಚರಿ: 27 ವರ್ಷದ ಕೊಹ್ಲಿ ಅವರು ಪ್ರಥಮ ದರ್ಜೆಯಲ್ಲೂ ದ್ವಿಶತಕ ಗಳಿಸಿರಲಿಲ್ಲ. ಈ ಹಿಂದೆ 2008ರಲ್ಲಿ ದೆಹಲಿ ಪರ ಮೊಹಮ್ಮದ್ ನಿಸ್ಸಾರ್ ಟ್ರೋಫಿಯಲ್ಲಿ ಪಾಕಿಸ್ತಾನ ಸೂಯಿ ನಾರ್ಥನ್ ಗ್ಯಾಸ್ ಪೈಪ್ ಲೈನ್ ಲಿಮಿಟೆಡ್ ವಿರುದ್ಧ 197 ರನ್ ಗಳಿಸಿದ್ದೇ ಗರಿಷ್ಠ ಸಾಧನೆಯಾಗಿತ್ತು. [ರನ್ ಯಂತ್ರ' ವಿರಾಟ್ ಕೊಹ್ಲಿ 3 ಸಾವಿರ ರನ್ ಗಳ ಸರದಾರ]

* ಭಾರತದ ನಾಯಕರಾಗಿ ಮೊಹಮ್ಮದ್ ಅಜರುದ್ದೀನ್ ಅವರು ನ್ಯೂಜಿಲೆಂಡ್ ವಿರುದ್ಧ ಅಕ್ಲೆಂಡ್ ನಲ್ಲಿ 1990ರಲ್ಲಿ 192ರನ್ ಗಳಿಸಿದ್ದೆ ಸಾಧನೆಯಾಗಿತ್ತು.
* ಭಾರತ ಇಲ್ಲಿ ತನಕ ವಿದೇಶದಲ್ಲಿ 247 ಟೆಸ್ಟ್ ಪಂದ್ಯಗಳನ್ನಾಡಿದ್ದರೂ ಇಲ್ಲಿ ತನಕ ಯಾವೊಬ್ಬ ನಾಯಕನು 200 ರನ್ ಗಡಿ ದಾಟಿರಲಿಲ್ಲ.
* 1932ರಲ್ಲಿ ಇಂಗ್ಲೆಂಡ್ ನಲ್ಲಿ ಲಾರ್ಡ್ಸ್ ನಲ್ಲಿ ಸಿಕೆ ನಾಯ್ಡು ನಾಯಕತ್ವದಲ್ಲಿ ಭಾರತ ತನ್ನ ಚೊಚ್ಚಲ ಪಂದ್ಯವಾಡಿತು.

Kohli Kiss

ವಿರಾಟ್ ಕೊಹ್ಲಿ ದ್ವಿಶತಕಕ್ಕೂ ಮುನ್ನ ದ್ವಿಶತಕ ಸಾಧನೆ ಮಾಡಿದವರು:
* ಮಹೇಂದ್ರ ಧೋನಿ 224 vs ಆಸ್ಟ್ರೇಲಿಯಾ, ಚೆನ್ನೈ, 2013
* ಸಚಿನ್ ತೆಂಡೂಲ್ಕರ್ 217 vs ನ್ಯೂಜಿಲೆಂಡ್, ಅಹಮದಾಬಾದ್,199
* ಸುನಿಲ್ ಗವಾಸ್ಕರ್ 205 vs ವೆಸ್ಟ್ ಇಂಡೀಸ್, ಮುಂಬೈ, 1978
* ಮನ್ಸೂರ್ ಆಲಿ ಖಾನ್ ಪಟೌಡಿ 203 ಅಜೇಯ vs ಇಂಗ್ಲೆಂಡ್, ದೆಹಲಿ, 1964

ಭಾರತ ಎರಡನೇ ದಿನದ ಭೋಜನ ವಿರಾಮದ ವೇಳೆಗೆ 404/4 ಸ್ಕೋರ್ ಮಾಡಿದ್ದು, 200 ಅಜೇಯ ಗಳಿಸಿ ಆಡುತ್ತಿದ್ದರು. ಇಲ್ಲಿ ತನಕ 12 ಶತಕಗಳನ್ನು ಗಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Captain Virat Kohli ended India's 84-year wait in an overseas Test when he hit his maiden double century against West Indies here today (July 22).
Please Wait while comments are loading...