ಸರಳತೆಗೆ ಮತ್ತೊಂದು ಹೆಸರು ಎಂಎಸ್ ಧೋನಿ

Written By:
Subscribe to Oneindia Kannada

ಆತ ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಸದ್ಯ ಏಕದಿನ ಮತ್ತು ಟಿ-20 ತಂಡ ಮುನ್ನಡೆಸುತ್ತಿರುವ ನಾವಿಕ, ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಟಿ-20 ವಿಶ್ವ ಕಪ್, ಏಷ್ಯಾ ಕಪ್ ಗಳನ್ನು ಭಾರತಕ್ಕೆ ಗೆದ್ದು ಕೊಟ್ಟ ಏಕೈಕ ನಾಯಕ.

ಹೌದು,, ನಾವು ಹೇಳುತ್ತಿರುವುದು ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆಯೇ. ಎಂಎಸ್ ಮೊದಲಿನಿಂದಲೂ ಸರಳತೆಗೆ ಹೆಸರು. ಆಗಾಗ ತಮ್ಮ ಕೇಶ ವಿನ್ಯಾಸ ಬದಲು ಮಾಡಿ ಸುದ್ದಿ ಮಾಡುತ್ತಿದ್ದ ಫಿನಿಶರ್ ಈ ಬಾರಿ ಸುದ್ದಿ ಮಾಡಿರುವುದು ಸರಳತೆಗೆ.[ಹೇರ್ ಕಟಿಂಗ್ ಸ್ವಾರಸ್ಯಗಳನ್ನು ತಿಳಿದುಕೊಳ್ಳಿ]

dhoni

ಯಾವುದೋ ಫೈ ಸ್ಟಾರ್ ರೇಂಜಿನ ಕಟಿಂಗ್ ಶಾಪ್ ಗೆ ಹೋಗಿ ಎಂ ಎಸ್ ಕಟಿಂಗ್ ಮಾಡಿಸಿಕೊಂಡರೆ ನಮಗೇನು? ಎಂದು ಸುಮ್ಮನಾಗಬೇಡಿ. ಈ ಬಾರಿ ನಾಯಕ ಧೋನಿ ತಮ್ಮ ಹೇರ್ ಕಟ್ ಗೆ ತೆರಳಿದ್ದು ಸಾಮಾನ್ಯ ಶಾಪ್ ವೊಂದಕ್ಕೆ.[ವಿರಾಟ್ ಕೊಹ್ಲಿ ಕೇಶ ವಿನ್ಯಾಸ ಬದಲಾಗಿದೆ ನೋಡಿದಿರಾ?]

ಇದೇ ಕಾರಣಕ್ಕೆ ಧೋನಿ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟ ಆಗುತ್ತಾರೆ. ಹೇರ್ ಕಟ್ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನು ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಧೋನಿ ಹರಿಯಬಿಟ್ಟಿದ್ದಾರೆ. ಈ ಫೋಟೋಕ್ಕೆ ಆರು ಲಕ್ಷ ಲೈಕ್ ಗಳು ಬಂದಿದ್ದರೆ 8 ಸಾವಿರಕ್ಕೂ ಅಧಿಕ ಶೇರ್ ಕಂಡಿದೆ.[ರಿಕಿ ಪಾಂಟಿಂಗ್ ದಾಖಲೆ ಸಮಕ್ಕೆ ಎಂಎಸ್ ಧೋನಿ]

ಪ್ರತಿ ಬಾರಿ ತಂಡ ಕಪ್ ಗೆದ್ದಾಗ ಹೊಸ ಹುಡುಗರ ಕೈಗೆ ಕಪ್ ನೀಡಿ ಪ್ರೋತ್ಸಾಹ ಇಮ್ಮಡಿಗೊಳಿಸುವ ಎಂಎಸ್ ಈ ಬಾರಿ ಸರಳತೆ ಮೆರೆದು ಸುದ್ದಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian ODI and T20 skipper Mahendra Singh Dhoni does know how to stay down to earth inspite of having all the worldly pleasures. Recently he had posted a selfie with the Indian team during the Zimbabwe tour where the whole contingent was seen having their food while sitting on the ground and now the maverick wicket-keeper batsman has gone one step further and posted a picture of him having a hair cut in total 'desi' style.
Please Wait while comments are loading...