ಕ್ವಿಕ್ ಆಗಿ 11 ಸಾವಿರ ರನ್ ಗಳಿಸಿದ ಕುಕ್ ಸಾಧನೆ!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 17: ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ನ ಮೊದಲ ದಿನದಂದೇ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ವಿಶಿಷ್ಟ ಸಾಧನೆ ಮಾಡಿದರು. ಎರಡನೇ ದಿನದ ಚಹಾ ವಿರಾಮದ ನಂತರ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 477ಸ್ಕೋರಿಗೆ ಆಲೌಟ್ ಆಗಿದೆ.

ಇದಕ್ಕೂ ಮುನ್ನ ಕುಕ್ ಅವರು ಅತ್ಯಂತ ತ್ವರಿತಗತಿಯಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಗಳಿಸಿದ ವಿಶ್ವದ ಪ್ರಥಮ ಆಟಗಾರ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರು 13 ವರ್ಷ 199ನೆ ದಿನದಲ್ಲಿ 122 ಪಂದ್ಯಗಳ 208 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು.

ಈಗ ಕುಕ್ ಅವರು 10 ವರ್ಷ, 290 ದಿನಗಳಲ್ಲೇ ಈ ಸಾಧನೆ ಮಾಡಿದ್ದಾರೆ.ಕುಕ್ ಇದುವರೆಗೆ 140 ಟೆಸ್ಟ್, 252 ಇನ್ನಿಂಗ್ಸ್ ಗಳಿಂದ 11008 ರನ್ ಗಳನ್ನು ಗಳಿಸಿದ್ದಾರೆ. ಆದರೆ, ಭಾರತ ವಿರುದ್ಧದ ಸರಣಿಯಲ್ಲಿ ಕುಕ್ ಅವರು 9 ಇನ್ನಿಂಗ್ಸ್ ಗಳಿಂದ ಕೇವಲ 320 ರನ್ ಗಳನ್ನು ಮಾತ ಗಳಿಸಿದ್ದಾರೆ.

30 ಶತಕ ಹಾಗೂ 53 ಅರ್ಧಶತಕಗಳನ್ನು ಬಾರಿಸಿರುವ ಕುಕ್ ಅವರು ಇಂಗ್ಲೆಂಡ್ ಪರ 9,000 ಹಾಗೂ 10,000ರನ್ ಗಳಿಸಿದ ಮೊದಲ ಆಟಗಾರ ಕೂಡಾ ಹೌದು. 2006 ಮಾರ್ಚ್ ನಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧವೇ ಟೆಸ್ಟ್ ವೃತ್ತಿ ಬದುಕು ಆರಂಭಿಸಿದ ಕುಕ್ ಅವರು ಬಿರ್ಮಿಂಗ್ ಹ್ಯಾಮ್ ನಲ್ಲಿ 2011ರಲ್ಲಿ ಭಾರತ ವಿರುದ್ಧ ಗಳಿಸಿದ 294 ಅವರ ಗರಿಷ್ಠ ಮೊತ್ತವಾಗಿದೆ.

Captain Alastair Cook becomes 1st Englishman to cross 11,000 Test runs

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Skipper Alastair Cook on Friday (December 16) became the first Englishman to surpass the 11,000 Test run-mark during the first day of the fifth Test against India here.
Please Wait while comments are loading...