ದಾಖಲೆಗಳ ವೀರ ಎಬಿಡಿ ವಿಲಿಯರ್ಸ್ 'ತ್ರಿಬ್ಬಲ್ ಸೊನ್ನೆ'

Posted By:
Subscribe to Oneindia Kannada

ಸೆಂಚೂರಿಯನ್, ಜ. 25: ಕ್ರಿಕೆಟ್ ಜಗತ್ತಿನಲ್ಲಿ ಹತ್ತು ಹಲವು ದಾಖಲೆಗಳನ್ನು ಬರೆದಿರುವ ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿ ವಿಲಿಯರ್ಸ್ ಗೆ ಯಾಕೋ ಸೊನ್ನೆ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಸೋಮವಾರ (ಜನವರಿ 25) ರಂದು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಸೊನ್ನೆ ಸುತ್ತಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್ ನೋಡಿ

ಮತ್ತೊಮ್ಮೆ ಸೊನ್ನೆಗೆ ಔಟಾಗುವ ಮೂಲಕ ಎಬಿ ಡಿ ವಿಲಿಯರ್ಸ್ ಅವರು ಕಳೆದ ಮೂರು ಇನ್ನಿಂಗ್ಸ್ ಗಳಿಂದ ಒಂದು ರನ್ ಕೂಡಾ ಗಳಿಸಿಲ್ಲ. ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲೂ ಕೂಡಾ ಡಿ ವಿಲಿಯರ್ಸ್ ಅವರು ಡಕ್ ಹೊಡೆದಿದ್ದರು. [ನಿವೃತ್ತಿ ಬಗ್ಗೆ ಎಬಿಡಿ ವಿಲಿಯರ್ಸ್ ಬಿಚ್ಚಿಟ್ಟ ಸತ್ಯವೇನು?]

Captain AB de Villiers bags a pair, hat-trick of ducks

31 ವರ್ಷ ವಯಸ್ಸಿನ ಎಬಿ ಡಿ ವಿಲಿಯರ್ಸ್ ಅವರು ವೇಗಿ ಜೇಮ್ಸ್ ಆಂಡರ್ಸನ್ ಅವರ ಎಲ್ ಬಿ ಬಲೆಗೆ ಬಿದ್ದರು. ಹಾಕ್ ಐ ಮೂಲಕ ಅಂಪೈರ್ ನಿರ್ಣಯ ನೀಡಿ ಔಟ್ ಎನ್ನುತ್ತಿದ್ದಂತೆ 132 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣದ ದಾಖಲೆ ಎಬಿಡಿ ಪಾಲಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ಜೋರೂಟ್ ಗೆ ಕ್ಯಾಚಿತ್ತು ಔಟಾಗಿದ್ದರು. 106 ಟೆಸ್ಟ್ ಪಂದ್ಯಗಳಲ್ಲಿ ಒಟ್ಟಾರೆ 7 ಡಕ್ ಬಾರಿಸಿದ್ದಾರೆ. [ಸಚಿನ್ ಗಿಂತ ಎಬಿ ಡಿ ಜನಪ್ರಿಯತೆ ಹೆಚ್ಚಾಗಲಿದೆಯಂತೆ!]

ಡಕ್ ದಾಖಲೆ: ಟೆಸ್ಟ್ ರಂಗಕ್ಕೆ ಕಾಲಿಟ್ಟ ಬಳಿಕ ಸುಅಮರು 79 ಇನ್ನಿಂಗ್ಸ್ ಗಳ ತನಕ ಡಕ್ ಗೆ ಔಟಾಗದೆ ಉಳಿದು ದಾಖಲೆ ಬರೆದಿದ್ದರು. ಇದೇ ಮೈದಾನದಲ್ಲಿ 2008ರಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಬಾರಿಗೆ ಡಕ್ ಗೆ ಔಟಾಗಿದ್ದರು. ಟೆಸ್ಟ್ ಕ್ರಿಕೆಟ್ ನಿಂದ ಎಬಿ ಡಿವಿಲಿಯರ್ಸ್ ಅವರು ನಿವೃತ್ತಿ ಹೊಂದುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪ್ರತಿಯಾಗಿ ನಾನು ಟೆಸ್ಟ್ ಕ್ರಿಕೆಟ್ ಅಷ್ಟು ಎಂಜಾಯ್ ಮಾಡುತ್ತಿಲ್ಲ ಎಂದು ಎಬಿಡಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Centurion: It is not the best of the times for batsman AB de Villiers. The South African captain on Monday (January 25) bagged a pair in the 4th and final Test against England here.
Please Wait while comments are loading...