ಮಾಜಿ ಕ್ರಿಕೆಟರ್ ಅಜಯ್ ಅವರ ಸೋದರ ನಿಗೂಢ ಸಾವು

Posted By:
Subscribe to Oneindia Kannada

ನವದೆಹಲಿ, ಮೇ 23: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಅಜಯ್ ಶರ್ಮ ಅವರ ಸೋದರ ಜುಗಲ್ ಶರ್ಮ ಅವರು ದೆಹಲಿಯ ಶಕ್ತಿನಗರದಲ್ಲಿರುವ ಅವರ ಮನೆಯಲ್ಲಿಸಾವನ್ನಪ್ಪಿದ್ದಾರೆ. ಭಾನುವಾರ ಅವರ ಶವ ಪತ್ತೆಯಾದರೂ, ಎರಡು ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಶಕ್ತಿನಗರದ ಬಹುಮಹಡಿ ಕಟ್ಟಡವೊಂದರ ಎರಡನೇ ಮಹಡಿಯ ಮನೆಯಲ್ಲಿ ಜುಗಲ್ ವಾಸವಾಗಿದ್ದರು. 48 ವರ್ಷ ವಯಸ್ಸಿನ ಜುಗಲ್ ಅವರು ಇನ್ನೂ ಮದುವೆಯಾಗಿರಲಿಲ್ಲ. ಜುಗಲ್ ಜೊತೆ ಅವರ ತಾಯಿ ಇರುತ್ತಿದ್ದರು. ಆದರೆ, ಕಳೆದ ವಾರದಿಂದ ಜುಗಲ್ ಅವರ ತಾಯಿ ಅನಾರೋಗ್ಯದ ಕಾರಣದಿಂದ ಅಜಯ್ ಅವರ ಮನೆಗೆ ಹೋಗಿದ್ದರು.

Brother of former cricketer Ajay Sharma found dead at home

ಭಾನುವಾರದಂದು ನೆರೆಮನೆಯವರಿಗೆ ಜುಗಲ್ ಮನೆಯಿಂದ ಕೊಳತ ವಾಸನೆ ಬಂದಿದೆ. ಜೊತೆಗೆ ಅವರ ಮನೆ ನಾಯಿ ಬೊಗಳಿದ್ದು ಕೇಳಿಸಿದೆ. ಪೊಲೀಸರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ಬಾಗಿಲು ತೆರೆದು ಒಳಹೊಕ್ಕಾಗ ಶವದ ಬಳಿ ಮದ್ಯದ ಬಾಟಲ್​ಗಳು ಪತ್ತೆಯಾಗಿದೆ. ಜುಗಲ್ ಶವದ ಬಳಿ ನಾಯಿ ಕಂಡು ಬಂದಿದೆ. ಮೇಲ್ನೋಟಕ್ಕೆ ಇದು ಸಹಜ ಸಾವು ಎಂದು ಕಂಡು ಬಂದಿದೆ. ಆದರೆ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಅಜಯ್ ಶರ್ಮ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬಹು ದೊಡ್ಡ ಹೆಸರು, ದೆಹಲಿ ಪರ ಆಡುತ್ತಿದ್ದ ಅಜಯ್ ಶರ್ಮ ಅವರು 10 ಸಾವಿರ ರನ್ 31 ಶತಕಗಳನ್ನು ಬಾರಿಸಿದ್ದಾರೆ. ಟೀಂ ಇಂಡಿಯಾ ಪರ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ, 31 ಏಕದಿನ ಪಂದ್ಯಗಳನ್ನಾಡಿದ್ದರು.

2000 ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಅಜಯ್ ಶರ್ಮ ವಿರುದ್ಧ ಶಾಶ್ವತ ನಿಷೇಧ ಹೇರಲಾಗಿತ್ತು. ಈ ಸಂದರ್ಭದಲ್ಲಿ ಜುಗಲ್ ಸೇರಿದಂತೆ ಅಜಯ್ ಅವರ ಆಪ್ತರ ವಿಚಾರಣೆಯೂ ನಡೆಸಲಾಗಿತ್ತು. 2014ರಲ್ಲಿ ಅಜಯ್ ಮೇಲಿನ ನಿಷೇಧವನ್ನು ಬಿಸಿಸಿಐ ತೆರವುಗೊಳಿಸಿತ್ತು. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jugal Sharma , brother of former cricketer Ajay Sharma, was found dead at his residence in north Delhi's Shakti Nagar area on Sunday. The incident came to light in the morning, when locals complained of stench emanating from his second floor apartment and called up police.
Please Wait while comments are loading...