ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ರವಿಶಾಸ್ತ್ರಿ ವ್ಯಕ್ತಿ ವಿಶೇಷ

Posted By:
Subscribe to Oneindia Kannada

ಹಲವರ ನಿರೀಕ್ಷೆಯಂತೆ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು, ಭಾರತೀಯ ಪುರುಷರ ಕ್ರಿಕೆಟ್ ತಂಡದ ನೂತನ ತರಬೇತುದಾರರಾಗಿ ನೇಮಕಗೊಂಡಿದ್ದಾರೆ.

ಟೀಂ ಇಂಡಿಯಾ ಕೋಚ್ ಹುದ್ದೆಗೆ ಈ ಬಾರಿಯೂ ಹಿಂದಿನಂತೆ ಉತ್ತಮ ಪೈಪೋಟಿ ಏರ್ಪಟ್ಟಿತ್ತು. ರವಿಶಾಸ್ತ್ರಿ ಸೇರಿದಂತೆ ಇತರ ಮಾಜಿ ಕ್ರಿಕೆಟರ್ ಗಳಾದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ಕರ್ನಾಟಕದ ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್, ಲ್ಯಾನ್ಸ್ ಕ್ಲುಸ್ನರ್, ರಾಕೇಶ್ ಶರ್ಮ(ಒಮಾನ್ ತಂಡದ ಕೋಚ್), ಫಿಲ್ ಸಿಮನ್ಸ್ ಹಾಗೂ ಉಪೇಂದ್ರ ಬ್ರಹ್ಮಚಾರಿ (ಕ್ರಿಕೆಟ್ ಹಿನ್ನಲೆಯಿಲ್ಲದ ಇಂಜಿನಿಯರ್) ಒಟ್ಟು 10 ಅರ್ಜಿ ಸಲ್ಲಿಕೆಯಾಗಿದ್ದವು.

ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್; ಜಹೀರ್ ಬೌಲಿಂಗ್ ಕೋಚ್

ಈ ಪೈಕಿ ಬಿಸಿಸಿಐ 6 ಮಂದಿಯ ಅರ್ಜಿಯನ್ನು ಸಂದರ್ಶನಕ್ಕೆ ಅಂತಿಮಗೊಳಿಸಲಾಗಿತ್ತು. ಇದೀಗ, ಅಂತಿಮವಾಗಿ, ರವಿ ಶಾಸ್ತ್ರಿಯವರಿಗೆ ಈ ಅವಕಾಶ ಲಭಿಸಿದೆ. ಕ್ರಿಕೆಟ್ ಲೋಕದ ಈ ಹಿರಿಯ ವ್ಯಕ್ತಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕೋಚ್ ಹುದ್ದೆಗೆ 10 ಜನ ಫೈನಲ್, ರವಿಶಾಸ್ತ್ರಿ ರೇಸಿನಲ್ಲಿ ಮುಂದೆǃ

ಕ್ರಿಕೆಟ್ ನಲ್ಲೇ ಬದುಕು

ಕ್ರಿಕೆಟ್ ನಲ್ಲೇ ಬದುಕು

ರವಿ ಶಾಸ್ತ್ರಿ ಹುಟ್ಟಿದ್ದು ಮುಂಬೈನಲ್ಲಿ. ಓದಿದ್ದು ಬೆಳೆದಿದ್ದೂ ಅಲ್ಲೇ. ಜನ್ಮ ದಿನಾಂಕ ಮೇ 27, 1962.ಅವರ ಪೂರ್ತಿ ಹೆಸರು ರವಿ ಶಂಕರ್ ಜಯಂದ್ರಿತ ಶಾಸ್ತ್ರಿ. ಭಾರತೀಯ ಕ್ರಿಕೆಟ್ ನಲ್ಲಿ ಅವರು ಆಲ್ರೌಂಡರ್ ಆಗಿ ಹೆಸರು ಮಾಡಿದ್ದರು. ಬೌಲಿಂಗ್ ಶೈಲಿ ಸ್ಪಿನ್ನರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಆಗಿದ್ದಾರೆ. ಮೊದಲ ಟೆಸ್ಟ್- 1981ರ ಫೆಬ್ರವರಿ 21ರಿಂದ ಶುರುವಾಗಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯ (ವೆಲ್ಲಿಂಗ್ಟನ್). ಮೊದಲ ಏಕದಿನ - 1981ರ ನವೆಂಬರ್ 25ರಂದು ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯ (ಅಹ್ಮದಾಬಾದ್).

ಟೆಸ್ಟ್, ಏಕದಿನ ಬ್ಯಾಟಿಂಗ್

ಟೆಸ್ಟ್, ಏಕದಿನ ಬ್ಯಾಟಿಂಗ್

ಬ್ಯಾಟ್ಸ್ ಮನ್ ಆಗಿ ರವಿಶಾಸ್ತ್ರಿ ಸಾಧನೆ ಹೀಗಿದೆ. ತಮ್ಮ ವೃತ್ತಿಜೀವನದಲ್ಲಿ 80 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, ಒಟ್ಟು 3830 ರನ್ ಗಳಿಸಿದ್ದಾರೆ. ಇವುಗಳಲ್ಲಿ 11 ಶತಕ, 12 ಅರ್ಧ ಶತಕ ಇವೆ. ಇನ್ನು, ಏಕದಿನ ಮಾದರಿಯಲ್ಲಿ ಒಟ್ಟು 150 ಪಂದ್ಯಗಳನ್ನು ಆಡಿರುವ ಅವರು, 3108 ರನ್ ಕಲೆಹಾಕಿದ್ದಾರೆ. ಇವುಗಳಲ್ಲಿ 4 ಶತಕ ಹಾಗೂ 18 ಅರ್ಧ ಶತಕ ಇವೆ.

ಟೆಸ್ಟ್, ಏಕದಿನದಲ್ಲಿ ಅವರ ಪರಿಣಿತಿ

ಟೆಸ್ಟ್, ಏಕದಿನದಲ್ಲಿ ಅವರ ಪರಿಣಿತಿ

ಬೌಲರ್ ಆಗಿ ರವಿಶಾಸ್ತ್ರಿಯವರ ಸಾಧನೆ ಹೀಗಿದೆ. ಒಟ್ಟು 80 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಅವರು, 151 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯವೊಂದರಲ್ಲಿ 75 ರನ್ ನೀಡಿ 5 ವಿಕೆಟ್ ಕಬಳಿಸಿದ್ದು ಅವರ ಬೌಲಿಂಗ್ ವೃತ್ತಿಜೀವನದ ಅತ್ಯುತ್ತಮ ಸಾಧನೆಯಾಗಿದೆ.
ಇನ್ನು, 136 ಏಕದಿನ ಪಂದ್ಯಗಳಲ್ಲಿ ಬೌಲ್ ಮಾಡಿರುವ ಅವರು, 129 ವಿಕೆಟ್ ಕಬಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೊಂದರಲ್ಲಿ ಕೇವಲ 15 ರನ್ ನೀಡಿ 5 ವಿಕೆಟ್ ಗಳಿಸಿದ್ದ ಅವರ ಏಕದಿನ ಬೌಲಿಂಗ್ ಜೀವನದ ಶ್ರೇಷ್ಠ ಪ್ರದರ್ಶನವಾಗಿದೆ.

ವೀಕ್ಷಕ ವಿವರಣೆಕಾರನ ಅವತಾರ

ವೀಕ್ಷಕ ವಿವರಣೆಕಾರನ ಅವತಾರ

1992ರಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಅವರು ಆನಂತರ ಕಾಮೆಂಟೇಟರ್ ಆಗಿಯೇ ಹೆಚ್ಚು ಗಮನ ಸೆಳೆದರು. ಪ್ರತಿ ಪಂದ್ಯದಲ್ಲಿ ಅವರು ನೀಡುವ ವೀಕ್ಷಕ ವಿವರಣೆ ಹಾಗೂ ವಿಶ್ಲೇಷಣೆಗಳು ಇಂದಿಗೂ ಸರ್ವ ಸಮ್ಮತವಾಗಿವೆ.

ನಿರ್ದೇಶಕರಾಗಿಯೂ ಅನುಭವ

ನಿರ್ದೇಶಕರಾಗಿಯೂ ಅನುಭವ

2007ರಲ್ಲಿ ಅಂದಿನ ಟೀಂ ಇಂಡಿಯಾ ಕೋಚ್ ಗ್ರೇಗ್ ಚಾಪೆಲ್, ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾಗ ಹಂಗಾಮಿ ಕೋಚ್ ಆಗಿ ತಂಡ ಮುನ್ನಡೆಸಿದ್ದರು. 2014ರಲ್ಲಿ ಟೀಂ ಇಂಡಿಯಾದ ನಿರ್ದೇಶಕರಾಗಿ ನೇಮಕಗೊಂಡ ನಂತರ, 2016 ಟಿ20 ವಿಶ್ವಕಪ್ ವರೆಗೆ ಅವರು ಅದೇ ಹುದ್ದೆಯಲ್ಲಿ ಮುಂದುವರಿದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Cricket Ravi Shastri named as Indian Cricket team's new coach by BCCI on July 11, 2017. The born and brought-up Mumbai talent has so many achievements in his kitty not only as a cricketer but also as a commentator, coach and director of Indian cricket team.
Please Wait while comments are loading...