ಟೀಂ ಇಂಡಿಯಾ ನೂತನ ಬೌಲಿಂಗ್ ಕೋಚ್ ಜಹೀರ್ ವ್ಯಕ್ತಿ ವಿಶೇಷ

Posted By:
Subscribe to Oneindia Kannada

ಮಾಜಿ ವೇಗದ ಬೌಲರ್ ಜಹೀರ್ ಖಾನ್, ಭಾರತೀಯ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ವೇಗಿಯಾಗಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಅವರು ಮೂಡಿಸಿರುವ ಛಾಪು ಅನನ್ಯ. ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿರುವ ಅವರು, ಹಲವಾರು ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನೂ ತಕ್ಕಮಟ್ಟಿಗೆ ಹೊರಹಾಕಿದ್ದಾರೆ.

ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್; ಜಹೀರ್ ಬೌಲಿಂಗ್ ಕೋಚ್

ಟೆಸ್ಟ್ ಕ್ರಿಕೆಟ್ ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಸಾಧನೆ ಅವರ ಹಿಂದಿದೆ. ಅಲ್ಲದೆ, ಕಪಿಲ್ ದೇವ್ ಅವರ ನಂತರ ವೇಗಿಗಳ ಸಾಲಿನಲ್ಲಿ ನಿಲ್ಲಬಲ್ಲ ಭಾರತದ ಕೆಲವೇ ಕೆಲವು ವೇಗಿಗಳಲ್ಲಿ ಜಹೀರ್ ಕೂಡಾ ಒಬ್ಬರು. ಅವರ ವ್ಯಕ್ತಿ ಪರಿಚಯ ಇಲ್ಲಿದೆ.

ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ರವಿಶಾಸ್ತ್ರಿ ವ್ಯಕ್ತಿ ವಿಶೇಷ

ಮೊದಲ ಪಂದ್ಯ ಬಾಂಗ್ಲಾ ವಿರುದ್ಧ

ಮೊದಲ ಪಂದ್ಯ ಬಾಂಗ್ಲಾ ವಿರುದ್ಧ

ಜಹೀರ್ ಖಾನ್, ಮಹಾರಾಷ್ಟ್ರದ ಅಹ್ಮದ್ ನಗರದ ಶ್ರೀರಾಮಪುರದವರು. ಆರು ಅಡಿ 2.5 ಅಂಗುಲವಿರುವ ಇವರಿಗೆ ವೇಗಿಗಳಿಗೆ ಹೇಳಿ ಮಾಡಿಸಿದಂಥ ಮೈಕಟ್ಟು. 2000ರ ನವೆಂಬರ್ 10ರಂದು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಇವರ ಮೊದಲ ಅಂತಾರಾಷ್ಟ್ರೀಯ ಪಂದ್ಯ. 2012ರ ಆಗಸ್ಟ್ 4ರಂದು ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯ ಇವರ ಮೊದಲ ಅಂತಾರಾಷ್ಟ್ರೀಯ ಏಕದಿನ.

ಎಲ್ಲರ ನಿರೀಕ್ಷೆ ಮುಟ್ಟಿದ ಪ್ರತಿಭಾವಂತ

ಎಲ್ಲರ ನಿರೀಕ್ಷೆ ಮುಟ್ಟಿದ ಪ್ರತಿಭಾವಂತ

2000ನೇ ಇಸವಿ... ಅದು ಭಾರತ ಕಂಡ ಅತ್ಯುತ್ತಮ ವೇಗಿಗಳಲ್ಲೊಬ್ಬರಾದ ಜವಾಗಲ್ ಶ್ರೀನಾಥ್ ಅವರು ನಿವೃತ್ತಿಯ ಅಂಚಿನಲ್ಲಿದ್ದ ಕಾಲ. ಅವರ ನಂತರ ಯಾರು ಆ ಸ್ಥಾನ ತುಂಬಬಲ್ಲರು ಎಂಬ ಆತಂಕ ಹಲವರಲ್ಲಿದ್ದ ಆ ಸಂದರ್ಭದಲ್ಲಿ ಬಂದಿದ್ದು ಜಹೀರ್ ಖಾನ್. ಎಲ್ಲರ ನಿರೀಕ್ಷೆಯಂತೆ ಶ್ರೀನಾಥ್ ಅವರ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ಹೆಗ್ಗಳಿಕೆ ಇವರದ್ದು.

ಟೆಸ್ಟ್ ನಲ್ಲಿ 311, ಏಕದಿನದಲ್ಲಿ 197 ವಿಕೆಟ್

ಟೆಸ್ಟ್ ನಲ್ಲಿ 311, ಏಕದಿನದಲ್ಲಿ 197 ವಿಕೆಟ್

ಜಹೀರ್ ಖಾನ್ ಅವರ ಬೌಲಿಂಗ್ ರೆಕಾರ್ಡ್ ಹೀಗಿದೆ. ಒಟ್ಟು 165 ಟೆಸ್ಟ್ ಗಳಿಂದ 311 ವಿಕೆಟ್ ಕಬಳಿಸಿರುವ ಅವರು, ಏಕದಿನ ದಲ್ಲಿ ಒಟ್ಟು 197 ಪಂದ್ಯಗಳಿಂದ 282 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ 87 ರನ್ ನೀಡಿ 7 ವಿಕೆಟ್ ಪಡೆದಿದ್ದು ಟೆಸ್ಟ್ ನಲ್ಲಿ ಇವರ ಶ್ರೇಷ್ಠ ಪ್ರದರ್ಶನವಾದರೆ, ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲಿ 42 ರನ್ ನೀಡಿ 5 ವಿಕೆಟ್ ಗಳಿಸಿದ್ದು ಇವರ ಏಕದಿನ ಮಾದರಿಯಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನವಾಗಿದೆ.

ಟೆಸ್ಟ್ ನಲ್ಲಿ 1231 ರನ್, ಏಕದಿನದಲ್ಲಿ 792 ರನ್

ಟೆಸ್ಟ್ ನಲ್ಲಿ 1231 ರನ್, ಏಕದಿನದಲ್ಲಿ 792 ರನ್

ಜಹೀರ್ ಅವರ ಬ್ಯಾಟಿಂಗ್ ರೆಕಾರ್ಡ್ ಹೀಗಿದೆ. ತಮ್ಮ ವೃತ್ತಿಜೀವನದಲ್ಲಿ 92 ಟೆಸ್ಟ್ ಆಡಿರುವ ಅವರು, 1231 ರನ್ ಕಲೆಹಾಕಿದ್ದಾರೆ. ಇದರಲ್ಲಿ 3 ಅರ್ಧ ಶತಕ ಸೇರಿವೆ. ಇನ್ನು, ಏಕದಿನ ಮಾದರಿಯಲ್ಲಿ 200 ಪಂದ್ಯಗಳಿಂದ 792 ರನ್ ಕಲೆಹಾಕಿದ್ದಾರೆ.

ಸ್ಪೀಡ್ ಯಾರ್ಕರ್ ಕೂಡ ಅವರಿಗೆ ಕರಗತ

ಸ್ಪೀಡ್ ಯಾರ್ಕರ್ ಕೂಡ ಅವರಿಗೆ ಕರಗತ

ಜಹೀರ್ ಖಾನ್ ಅಂದರೆ ಸಾಕು ನೆನಪಿಗೆ ಬರುವುದು ಅವರ ರಿವರ್ಸ್ ಸ್ವಿಂಗ್ ಬೌಲಿಂಗ್ ಶೈಲಿ. ಅದು ಅವರ ಸ್ಪೆಷಾಲಿಟಿ. ಇದರ ಜತೆಗೆ ಫಾಸ್ಟ್ ಯಾರ್ಕರ್ ಗಳನ್ನು ಎಸೆಯುವುದರಲ್ಲಿ ಅವರು ನಿಷ್ಣಾತರು. ಜಹೀರ್ ನಂತರದ ಅವಧಿಯಲ್ಲಿ ಟೀಂ ಇಂಡಿಯಾ ಇಂಥ ಒಬ್ಬ ರಿವರ್ಸ್ ಸ್ವಿಂಗ್ ವೇಗಿಯನ್ನು ಕಂಡಿಲ್ಲ ಎಂದರೆ ಅದು ಅತಿಶಯೋಕ್ತಿಯೇನಲ್ಲ. ಟೀಂ ಇಂಡಿಯಾವಲ್ಲದೆ ಐಪಿಎಲ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಜಹೀರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Speedster Zaheer Khan has appointed as new bowling coach of Indian cricket team by BCCI on July 11, 2017. Reverse swing and fast yorker are his special skills.
Please Wait while comments are loading...