ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ ಬ್ರೆಂಡನ್ ಮೆಕಲಮ್

By: ರಮೇಶ್ ಬಿ
Subscribe to Oneindia Kannada

ಹ್ಯಾಮಿಲ್ಟನ್, ಫೆ. 08: ನ್ಯೂಜಿಲೆಂಡಿನ ಬಲಗೈ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಮ್ ಸೋಮವಾರ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಸರಣಿ ಗೆಲುವಿನೊಂದಗೆ ನ್ಯೂಜಿಲೆಂಡ್ ಸಹ ಆಟಗಾರರು ಬ್ರೆಂಡನ್ ಮೆಕಲಮ್ ಅವರಿಗೆ ಬಿಳ್ಕೋಟ್ಟರು.

ಮೆಕಲಮ್ ಅವರು 2002 ರಲ್ಲಿ ಆಸ್ಟ್ರೇಲಿಯ ವಿರುದ್ದ ಆಡುವುದರ ಮೂಲಕ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. 254 ಏಕದಿನ ಪಂದ್ಯಗಳನ್ನು ಆಡಿ 5,909 ರನ್ ಗಳನ್ನು ಗಳಿಸಿದ್ದಾರೆ. 5 ಶತಕ ಮತ್ತು 31 ಅರ್ಧಶತಕಗಳನ್ನು ಗಳಿಸಿ 30.30 ರನ್ ಸರಾಸರಿಯನ್ನು ಹೊಂದಿದ್ದಾರೆ. 166 ಇವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. [ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದು ಮೆಕಲಮ್ ವಿದಾಯ]

Brendon McCullum gets winning farewell as NZ seal series against Australia

97 ಟೆಸ್ಟ್ ಪಂದ್ಯಗಳನ್ನು ಆಡಿ ಒಟ್ಟು 6,145 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕ 30 ಅರ್ಧಶತಕವನ್ನು ಗಳಿಸಿದ್ದಾರೆ. 302 ರನ್ ಟೆಸ್ಟ್ ನಲ್ಲಿ ಗಳಿಸಿದ ಬೆಸ್ಟ್ ಸ್ಕೋರ್ ಆಗಿದೆ. 38.40 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಸದ್ಯ ಇವರು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಗುಜರಾತ್ ಲಯನ್ಸ್ ಪರ ಆಡಲಿದ್ದಾರೆ.[ಎಬಿಡಿಗೆ ದಕ್ಕದ ದಾಖಲೆ ಮೆಕಲಮ್ ಪಾಲಾಯ್ತು!]

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವ ಟಿ20 ಟೂರ್ನಿಯಲ್ಲಿ ಬ್ರೆಂಡನ್ ಮೆಕಲಮ್ ಅವರು ಆಡುವುದಿಲ್ಲ. ಕೇನ್ ವಿಲಿಯಮ್ಸನ್ ಅವರು ಟಿ20 ವಿಶ್ವಕಪ್ ನಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Brendon McCullum marked his last one-day international for New Zealand with a match and series victory over Australia today.
Please Wait while comments are loading...