ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದು ಮೆಕಲಮ್ ವಿದಾಯ

By Mahesh

ಹ್ಯಾಮಿಲ್ಟನ್, ಡಿ.22: ಟೆಸ್ಟ್ ಇತಿಹಾಸದ ಅಪೂರ್ವ ದಾಖಲೆ ಬರೆದಿರುವ ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮೆಕಲಮ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.

34 ವರ್ಷ ವಯಸ್ಸಿನ ಬ್ರೆಂಡನ್ ಮೆಕಲಮ್ ಅವರು ಸತತವಾಗಿ 100ನೇ ಟೆಸ್ಟ್ ಪಂದ್ಯವಾಡಿ ದಾಖಲೆ ಮುಂದುವರೆಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬೇಸಿನ್ ರಿಸರ್ವ್ ನಲ್ಲಿ ಫೆಬ್ರವರಿ 12ರಂದು ಪಂದ್ಯವಾಡಲಿದ್ದೇನೆ ಎಂದು ಕ್ರೈಸ್ಟ್ ಚರ್ಚ್ ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಫೆಬ್ರವರಿ 20ರಂದು ಹಾಗ್ಲೆ ಓವಲ್ ನಲ್ಲಿ ಆಸೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಅವರ ಕೊನೆ ಪಂದ್ಯವಾಗಲಿದೆ. [ಎಬಿಡಿಗೆ ದಕ್ಕದ ದಾಖಲೆ ಮೆಕಲಮ್ ಪಾಲಾಯ್ತು!]

Brendon McCullum announces retirement from international cricket

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವ ಟಿ20 ಟೂರ್ನಿಯಲ್ಲಿ ಬ್ರೆಂಡನ್ ಮೆಕಲಮ್ ಅವರು ಆಡುವುದಿಲ್ಲ. ಕೇನ್ ವಿಲಿಯಮ್ಸನ್ ಅವರು ಟಿ20 ವಿಶ್ವಕಪ್ ನಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ.

2004ರಲ್ಲಿ ಹ್ಯಾಮಿಲ್ಟಿನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ ಮೆಕಲಮ್ ಅವರು ಕೆಳಕ್ರಮಾಂಕದ ವಿಕೆಟ್ ಕೀಪರ್ ಆಗಿ ತಂಡವನ್ನು ಸೇರಿದರು. ಈ ಸಮಯಕ್ಕೆ 99 ಟೆಸ್ಟ್ ಪಂದ್ಯಗಳಲ್ಲಿ ಮೆಕಲಮ್ 172 ಇನ್ನಿಂಗ್ಸ್ ಗಳಲ್ಲಿ 6,273 ರನ್ ಗಳಿಸಿದ್ದಾರೆ. ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ (7172 ರನ್) ನಂತರದ ಸ್ಥಾನದಲ್ಲಿದ್ದಾರೆ.

2013-14 ರಲ್ಲಿ ಭಾರತ ವಿರುದ್ಧ ವೆಲ್ಲಿಂಗ್ಟನ್ ನಲ್ಲಿ 302 ರನ್ ಗಳಿಸಿ ತ್ರಿಶತಕ ಬಾರಿಸಿದ ಮೊದಲ ನ್ಯೂಜಿಲೆಂಡರ್ ಎನಿಸಿದರು. ಒಟ್ಟಾರೆ 9 ಶತಕ ದಾಖಲಿಸಿದ್ದಾರೆ. ನಾಯಕನಾಗಿ ನ್ಯೂಜಿಲೆಂಡ್ ತಂಡವನ್ನು ಕ್ರಿಕೆಟ್ ವಿಶ್ವಕಪ್ ಫೈನಲ್ ಗೆ ಕೊಂಡೊಯ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X