ಬ್ರೇಕಿಂಗ್ ನ್ಯೂಸ್: ವಿಶ್ವಟಿ20 ಟೂರ್ನಿಯಿಂದ ಯುವರಾಜ್ ಸಿಂಗ್ ಔಟ್

Posted By:
Subscribe to Oneindia Kannada

ಮುಂಬೈ, ಮಾರ್ಚ್ 30: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟಿ20 ಪಂದ್ಯದಲ್ಲಿ ಗಾಯಗೊಂಡ ಯುವರಾಜ್ ಸಿಂಗ್ ಅವರು ಟೂರ್ನಿಯಿಂದ ಔಟ್ ಆಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ(ಮಾರ್ಚ್ 30) ಮಧ್ಯಾಹ್ನ ಪ್ರಕಟಿಸಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಯುವರಾಜ್ ಸಿಂಗ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡಿದ್ದ ಕರ್ನಾಟಕದ ಮನೀಶ್ ಪಾಂಡೆ ಅವರು ಈಗ ಆಡುವ XI ನಲ್ಲಿ ಸ್ಥಾನ ಪಡೆಯುವ ಆಸೆ ಇರಿಸಿಕೊಳ್ಳಬಹುದಾಗಿದೆ.ಮನೀಶ್ ಗೆ ಪೈಪೋಟಿ ನೀಡಲು ಅಜಿಂಕ್ಯ ರಹಾನೆ ಕೂಡಾ ತಂಡದಲ್ಲಿದ್ದಾರೆ.[ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]

34 ವರ್ಷದ ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಭಾನುವಾರ ನಡೆದ ಪಂದ್ಯದ ವೇಳೆಗೆ ಗಾಯಗೊಂಡಿದ್ದು, ಎಂಆರ್ಐ ಸ್ಕ್ಯಾನ್ ಮಾಡಲಾಗಿತ್ತು. [ಭಾರತ-ವಿಂಡೀಸ್ ಕದನ ಆರಂಭಕ್ಕೂ ಮುನ್ನ ಓದಿರಿ!]

Breaking News: Yuvraj Singh out of World T20 2016

ನಾಯಕ ಎಂಎಸ್ ಧೋನಿ ಅವರು ಯುವರಾಜ್ ಸಿಂಗ್ ಅವರ ಗಾಯದ ಬಗ್ಗೆ ಮಾತನಾಡುತ್ತಾ, ತಂಡದಲ್ಲಿ ಬೇರೆ ಬದಲಾವಣೆ ಮಾಡಬೇಕು ಎಂದು ನನಗೆ ಅನ್ನಿಸುತ್ತಿಲ್ಲ. ಯುವರಾಜ್ ಅವರು ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದರು.[ಮುನ್ನೋಟ: ಭಾರತ- ವೆಸ್ಟ್ ಇಂಡೀಸ್ ಕದನ ಸ್ವಾರಸ್ಯ]

ಸಿಡ್ನಿಯಲ್ಲಿ ಶತಕ ಬಾರಿಸುವುದಕ್ಕೂ ಮುನ್ನ ಪಾಂಡೆ ಅವರು ಜುಲೈ 2015ರಲ್ಲಿ ಜಿಂಬಾಬ್ವೆ ವಿರುದ್ಧ 2 ಟಿ20 ಪಂದ್ಯವನ್ನಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Breaking News: Yuvraj Singh out of World T20 2016: In a setback to Team India ahead of crucial semi-final against West Indies in the ICC World Twenty20, left-handed batsman Yuvraj Singh has been ruled out of the squad.
Please Wait while comments are loading...