ಆತ್ಮಹತ್ಯೆಗೆ ಯತ್ನಿಸಿದ್ದನಂತೆ ಈ ಖ್ಯಾತ ಕ್ರಿಕೆಟಿಗ!

Written By: Ramesh
Subscribe to Oneindia Kannada

ಸಿಡ್ನಿ, ನವೆಂಬರ್. 01: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಹೀಗೆಂದು ಸ್ವತಃ ಹಾಗ್ ತಮ್ಮ 'ದ ರಾಂಗ್ ಅನ್' ಎನ್ನುವ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಹಾಗ್ ಕ್ರಿಕೆಟ್ ಜಗತ್ತಿನಿಂದ ನಿವೃತ್ತಿ ಪಡೆದ ಬಳಿಕ ಹಾಗೂ ತನ್ನ ವೈವಾಹಿಕ ಸಂಬಂಧ ಮುರಿದು ಬಿದ್ದ ಸಂದರ್ಭದಲ್ಲಿ ನಾನು ಸಮುದ್ರ ದಂಡೆಯಲ್ಲಿ ಕಾರ್ ಪಾರ್ಕ್ ಮಾಡಿ ವಾಕಿಂಗ್ ಗೆ ತೆರಳಿದ್ದೆ.

ಆ ವೇಳೆ ನಾನು ಸಮುದ್ರಕ್ಕೆ ಹಾರಬೇಕು. ಬದುಕಿದರೆ ಉಳಿದುಕೊಳ್ಳುತ್ತೇನೆ, ಇಲ್ಲದಿದ್ದರೆ ಸಾಯುತ್ತೇನೆ. ಎಲ್ಲವನ್ನೂ ನನ್ನ ಅದೃಷ್ಟದ ಮೇಲೆ ಬಿಟ್ಟುಬಿಡುತ್ತೇನೆ ಎಂಬ ಯೋಚನೆ ಬಂದಿತ್ತು. ಇದೇ ರೀತಿ ನಾಲ್ಕು ಬಾರಿ ಯೋಚಿಸಿದ್ದೆ ಆದರೆ ನನಗೆ ಹಾರುವ ಧೈರ್ಯ ಬರಲಿಲ್ಲ ಎಂದಿದ್ದಾರೆ.

Former Australian cricketer Brad Hogg considered suicide after failed marriage, retirement

2007-08ರಲ್ಲಿ ಪತ್ನಿ ಆಂದ್ರಿಯಾ ಹಾಗೂ ನನ್ನ ಸಂಬಂಧ ಮುರಿದು ಬೀಳುವ ಹಂತದಲ್ಲಿತ್ತು. ಹೀಗಾಗಿ ಕ್ರಿಕೆಟ್ ನ ಎಲ್ಲಾ ವಿಭಾಗಗಳಿಂದ ನಿವೃತ್ತಿ ಪಡೆಯುವುದನ್ನು ಬಿಟ್ಟರೇ ನನ್ನೆದುರು ಬೇರೆ ದಾರಿ ಇರಲಿಲ್ಲ ಎಂದಿದ್ದಾರೆ.

ಪತ್ನಿಯೊಂದಿಗಿನ ಸಂಬಂಧ ಮುರಿದ ನಂತರದ 3 ವರ್ಷಗಳನ್ನು ಅವರು ಯಾವ ರೀತಿ ಕಳೆದರು. ಆ ವಿಚಾರ ತನ್ನನ್ನು ಹೇಗೆ ಮದ್ಯಪಾನ ಸೇವಿಸಲು ಪ್ರೇರೇಪಿಸಿತು ಎಂಬುವುದನ್ನು ತಮ್ಮ 'ದ ರಾಂಗ್ ಅನ್' ಎನ್ನುವ ಆತ್ಮಚರಿತ್ರೆಯಲ್ಲಿ ವಿವರವಾಗಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Australia Test spinner Brad Hogg has revealed in a new book that retirement and a marriage breakdown led him to contemplate ending his life.
Please Wait while comments are loading...