ಆಸ್ಟ್ರೇಲಿಯಾಗೆ ಬ್ರಾಡ್ ಹಡ್ಡಿನ್ ನೂತನ ಫೀಲ್ಡಿಂಗ್ ಕೋಚ್

Posted By:
Subscribe to Oneindia Kannada

ಮೆಲ್ಬೋರ್ನ್, ಆಗಸ್ಟ್ 11 : ಆಸೀಸ್ ನ ಮಾಜಿ ವಿಕೆಟ್ ಕೀಪರ್ ಬ್ರಾಡ್ ಹಡ್ಡಿನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಈ ಮೊದಲು ಆಸ್ಟ್ರೇಲಿಯಾದ ಬೌಲಿಂಗ್ ಕೋಚ್ ಆಗಿದ್ದ ಗ್ರೆಗ್ ಬ್ಲೀವೆಟ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 39 ವರ್ಷದ ಹಡ್ಡಿನ್, 2019ರವರೆಗೆ ಆಸೀಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Brad Haddin appointed Australia's fielding coach

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಡ್ಡನ್, 'ನಾನು ಕ್ರಿಕೆಟ್ ಜಗತ್ತಿಗೆ ಹೊಸ ಶೈಲಿಯ ಕ್ಷೇತ್ರರಕ್ಷಣೆ ಪರಿಚಯಿಸಿದ ಸೈಮಂಡ್ಸ್, ಪಾಂಟಿಂಗ್ ಅಂತಹ ಆಟಗಾರರೊಂದಿಗೆ ಹೆಚ್ಚು ಸಮಯ ಕಳೆದಿದ್ದೇನೆ. ಹೀಗಾಗಿ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧನಿದ್ದೇನೆ'ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Australian Cricketers Are Now Job Less | Oneindia Kannada

2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಬ್ರಾಡ್ ಹಡ್ಡಿನ್ 66 ಟೆಸ್ಟ್, 126 ಏಕದಿನ ಪಂದ್ಯಗಳನ್ನಾಡಿ ಅನುಭವ ಅವರಿಗಿದೆ. 2015ರಲ್ಲಿ ಹಡ್ಡಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia have announced a new fielding coach till the end of 2019. Former wicket-keeper batsman Brad Haddin will take charge after Greg Blewett decided to step down and return home to take a role with the South Australian Cricket Association, Cricket Australia said on Thursday.
Please Wait while comments are loading...