ಪುಣೆಯಲ್ಲಿ ಒಂದು ಪಂದ್ಯಕ್ಕೆ ಅನುಮತಿ ನೀಡಿದ ಹೈಕೋರ್ಟ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 20 : ಮೇ 01 ರಂದು ಪುಣೆಯಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಪುಣೆ ಸೂಪರ್ ಜೈಂಟ್ಸ್ ನಡುವಿನ ಒಂದು ಪಂದ್ಯವನ್ನು ಮಹಾರಾಷ್ಟ್ರದಲ್ಲಿ ಆಡಲು ಮುಂಬೈ ಹೈಕೋರ್ಟ್ ಅನುಮತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಬರ ಎದುರಾಗಿರುವ ಹಿನ್ನಲೆಯಲ್ಲಿ ಐಪಿಎಲ್ ಪಂದ್ಯಗಳಿಗೆ ನೀರಿನ ಅಭಾವವಿದೆ ಹಾಗಾಗಿ ರಾಜ್ಯದಲ್ಲಿ ಏಪ್ರಿಲ್ 30 ರ ಬಳಿಕ ನಡೆಯಲಿರುವ ಎಲ್ಲಾ ಪಂದ್ಯಗಳನ್ನು ಬೇರೆಡೆ ಆಯೋಜಿಸಿ ಎಂದು ಕಳೆದ ವಾರ ಬಾಂಬೆ ಹೈಕೋರ್ಟ್ ಬಿಸಿಸಿಐಗೆ ಸೂಚಿಸಿತ್ತು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆದರೆ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ಈ ಎರಡುಗಳು ಏ.29 ರಂದು ಪುಣೆಯಲ್ಲಿ ಸೆಣಸಾಟ ನಡೆಸಲಿವೆ. ನಂತರ ಮೇ.1 ರಂದು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮುಂಬೈ ವಿರುದ್ಧ ಆಡಬೇಕಿದೆ.

HC allows BCCI to hold May 1 IPL match in Pune

ಆದ್ದರಿಂದ ಕೇವಲ ಒಂದು ದಿನದಲ್ಲಿ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಕಷ್ಟವಾಗುತ್ತದೆ. ಇದರಿಂದ ಮೇ. 1 ರಂದು ಪುಣೆಯಲ್ಲಿ ಆಡಲು ಅವಕಾಶ ನೀಡಬೇಕೆಂದು ಬಿಸಿಸಿಐ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಏ.20 ಬುಧವಾರ ಬಿಸಿಸಿಐನ ಪ್ರಧಾನ ವ್ಯವಸ್ಥಾಪಕ ರತ್ನಾಕರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಎಂ ಕಾನಡೆ ಹಾಗೂ ಎಂ,ಎಸ್ ಕಾರ್ಣಿಕ್ ವಿಭಾಗೀಯ ಪೀಠ ಪುಣೆಯಲ್ಲಿ ಮೇ 1 ರಂದು ನಡೆಯಬೇಕಿದ್ದ ಮುಂಬೈ ಮತ್ತು ಪುಣೆ ಪಂದ್ಯವನ್ನು ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.

ಇದೊಂದೆ ಪಂದ್ಯಕ್ಕೆ ಅನುಮತಿ ನೀಡಲಾಗುತ್ತದೆ ಉಳಿದ ಪಂದ್ಯಗಳನ್ನು ಬೇರೆಡೆಗೆ ನಡೆಸಿಕೊಳ್ಳಿ ಎಂದು ಬಿಸಿಸಿಐಗೆ ಬಾಂಬೆ ಹೈಕೋರ್ಟ್ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bombay High Court on Wednesday permitted BCCI to hold the May 1 IPL match between Mumbai Indians and Rising Pune Supergiants in Pune, days after it ordered shifting to other venues all post-April 30 matches planned in drought-hit Maharashtra.
Please Wait while comments are loading...