ಡೆಲ್ಲಿಗೆ ಆಘಾತ! ಐಪಿಎಲ್ 2017ನಿಂದ ಜೆ ಪಿ ಡುಮಿನಿ ಔಟ್!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 20 : ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜೆ.ಪಿ ಡುಮಿನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಈ ಬಗ್ಗೆ ಸೋಮವಾರ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮುಖ್ಯ ಕಾರ್ಯನಿರ್ವಹಕ ಹೇಮಂತ್ ದುವಾ ಅವರು ಮಾಹಿತಿ ನೀಡಿದ್ದಾರೆ.

'ವೈಯಕ್ತಿಕ ಕಾರಣಗಳಿಂದ ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲ. ಇದು ನನ್ನ ಪಾಲಿನ ಕಠಿಣ ನಿರ್ಧಾರ' ಎಂದು ಡುಮಿನಿ ತಿಳಿಸಿದ್ದಾರೆ.ಇದರಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಆಘಾತವಾಗಿದೆ. [ಐಪಿಎಲ್ 2017: ಡೆಲ್ಲಿ ಡೇರ್ ಡೆವಿಲ್ ಪಂದ್ಯಗಳ ಟೈಂ ಟೇಬಲ್]

Blow for Delhi Daredevils: JP Duminy withdraws from IPL 2017 due to personal reasons

'ಡುಮಿನಿ ಅವರ ಈ ನಿರ್ಧಾರ ಸಹಜವಾಗುಯೇ ನಿರಾಸೆ ಮೂಡಿಸಿದೆ. ಆದರೆ, ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಡುಮಿನಿ ಸ್ಥಾನಕ್ಕೆ ಬೇರೊಬ್ಬ ಆಟಗಾರನನ್ನು ಆಯ್ಕೆ ಮಾಡಲಾಗುವುದು' ಎಂದು ಹೇಮಂತ್ ದುವಾ ಹೇಳಿದ್ದಾರೆ.

2014ರಲ್ಲಿ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದ ಡುಮಿನಿ, 2015ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಂಡವನ್ನು ಮುನ್ನಡೆಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi Daredevils' South Africa star Jean-Paul Duminy has withdrawn from the upcoming 10th edition of the Indian Premier League (IPL).
Please Wait while comments are loading...