ಅಂಧರ ಟಿ20 ವಿಶ್ವಕಪ್: ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Written By: Ramesh
Subscribe to Oneindia Kannada

ಕೊಚ್ಚಿ, ಫೆಬ್ರವರಿ. 06 : 2ನೇ ಆವೃತ್ತಿಯ ಅಂಧರ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 128 ರನ್‌ಗಳ ಅಂತರದಿಂದ ಸೋಲಿಸಿದೆ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಭಾನುವಾರ kocfciy ರಾಜಗಿರಿ ಕಾಲೇಜ್ ಮೈದಾನದಲ್ಲಿ ನಡೆದ ಭಾರತ ಮತ್ತು ಆಸೀಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸುನಿಲ್‌ ಮತ್ತು ಮಹಮ್ಮದ್‌ ಫರ್ಹಾನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ವಿಕೆಟ್‌ ನಷ್ಟವಿಲ್ಲದೆ 272 ರನ್ ಕಲೆ ಹಾಕಿತು.[ಅಂಧರ ಟಿ20 ವಿಶ್ವಕಪ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ]

Blind cricket T20 World Cup: India thrash Australia by 128 runs

72 ಎಸೆತಗಳನ್ನು ಎದುರಿಸಿದ ಕರ್ನಾಟಕದ ಸುನಿಲ್‌ 29 ಬೌಂಡೆಇಗಳ ಮೂಲಕ 163 ರನ್ ಸಿಡಿಸಿದರು. ಫರ್ಹಾನ್ 35 ಎಸೆತಗಳಲ್ಲಿ 53 ರನ್ ಗಳಿಸಿ ಗಾಯಗೊಂಡು ನಿವೃತ್ತಿಯಾದರು.

ಆಸ್ಟ್ರೇಲಿಯಾ 144 ರನ್‌ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಅಜಯ್ ಕುಮಾರ್ ರೆಡ್ಡಿ 11 ರನ್ ಗಳನ್ನು ನೀಡಿ 2 ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India’s run of wins continued unabated as they posted a massive 128-run victory over Australia in the T20 World Cup for Blind at the Rajagiri College on Sunday.
Please Wait while comments are loading...