ಒಬ್ರು 160ರನ್ ಹೊಡೆದ್ರೆ ಮಿಕ್ಕ 8 ಮಂದಿ ಶೂನ್ಯ ಸುತ್ತಿದ್ರು!

Posted By:
Subscribe to Oneindia Kannada

ಪ್ರಿಟೋರಿಯ, ಡಿಸೆಂಬರ್ 17: ಕ್ರಿಕೆಟ್ ಆಟದಲ್ಲಿ ಆಪರರೂಪದ ಸ್ಕೋರ್ ಕಾರ್ಡ್ ವೊಂದನ್ನು ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡ ನೀಡಿದೆ. ಒಬ್ಬ ಆಟಗಾರ್ತಿ 160ರನ್ ಗಳಿಸಿದರೆ ಮಿಕ್ಕ 8 ಮಂದಿ ಶೂನ್ಯಕ್ಕೆ ಔಟಾಗಿದ್ದಾರೆ.

ದಕ್ಷಿಣ ಆಫ್ರಿಕದ ಜೂನಿಯರ್ ಮಹಿಳಾ ಕ್ರಿಕೆಟ್ ತಂಡದಿಂದ ಇಂಥ ವಿಶಿಷ್ಟ ಸಾಧನೆ ಕಂಡು ಬಂದಿದೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ಅಪರೂಪದ ಸ್ಕೋರ್ ಕಾರ್ಡ್ ಇದು ಎನ್ನಬಹುದು.

 Bizarre scorecard: A big ton of 160, 8 ducks from one winning team

ಅಂಡರ್-19 ಮಹಿಳೆಯರ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಈಸ್ಟರ್ನ್ಸ್ ತಂಡದ ವಿರುದ್ಧ ಮಪುಮಲಂಗ ತಂಡದ ಆರಂಭಿಕ ಆಟಗಾರ್ತಿ ಶಾನಿಯಾ-ಲೀ ಸ್ವಾರ್ಟ್ ಏಕಾಂಗಿ ಹೋರಾಟ ನಡೆಸಿ ಭರ್ಜರಿಯಾಗಿ 160 ರನ್ ಗಳಿಸಿದರು.

ಸ್ವಾರ್ಟ್ ಅವರು 160ರನ್ ಗಳನ್ನು 86 ಎಸೆತಗಳಲ್ಲಿ 18 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿದ್ದಾರೆ. ಆದರೆ, ಜತೆಯಲ್ಲಿ ಕ್ರಿಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲದ ಸಹ ಆಟಗಾರ್ತಿಯರು ಸೊನ್ನೆಗೆ ಔಟಾದರು.

ಸ್ವಾರ್ಟ್ 160 ರನ್ ಹಾಗೂ ಇತರೆ 9 ರನ್ ನೆರವಿನಿಂದ ಮಪುಮಲಂಗ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು.ಗೆಲ್ಲಲು 170 ರನ್ ಗುರಿ ಪಡೆದಿದ್ದ ಈಸ್ಟರ್ನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಮಪುಮಲಂಗ ತಂಡ ಈ ಪಂದ್ಯವನ್ನು 42 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A cricket match in South Africa had a bizarre scorecard where an opener scored 160 and rest of her team-mates were out for ducks.
Please Wait while comments are loading...