ಕ್ರಿಕೆಟರ್ ಯುವರಾಜ್ ವಿರುದ್ಧ ಬಿಗ್ ಬಾಸ್ ನಲ್ಲಿ ಏನಿದು ಆರೋಪ?

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 20: ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ನಾದಿನಿ ಕೂಡಾ ಸ್ಪರ್ಧಿಯಾಗಿ ಹೋಗಿದ್ದಾರೆ. ಆದರೆ, ಶೋನಲ್ಲಿ ಯುವರಾಜ್ ಸಿಂಗ್ ಅವರ ವಿರುದ್ಧ ಅಕಾಂಕ್ಷಾ ಆರೋಪ ಮಾಡಿದ್ದಾರೆ.

ಕ್ರಿಕೆಟರ್ ಯುವರಾಜ್ ಸಿಂಗ್ ಕಿರಿಯ ಸೋದರ ಜೋರಾವರ್ ಸಿಂಗ್ ಅವರ ಪತ್ನಿಯಾಗಿ ಕೇವಲ ನಾಲ್ಕು ತಿಂಗಲು ಸಂಸಾರ ಮಾಡಿದ್ದ ಆಕಾಂಕ್ಷಾ ತನ್ನ ಸಂಸಾರದ ಸಮಸ್ಯೆಗಳ ಬಗ್ಗೆ ಬಿಗ್ ಬಾಸ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.

ಈ ಬಾರಿ ಬಿಗ್ ಬಾಸ್ 10ರಲ್ಲಿ ಸೆಲೆಬ್ರಿಟಿಗಳು ಹಾಗೂ ಜನ ಸಾಮಾನ್ಯರ ನಡುವೆ ಕಿತ್ತಾಟ ಆರಂಭವಾಗಿದೆ. ಪ್ರೀಮಿಯರ್ ಶೋ ಎಪಿಸೋಡಿನಲ್ಲೇ ಆಕಾಂಕ್ಷ ಶರ್ಮ ತನ್ನ ಬದುಕಿನ ಕರಾಳ ಅಧ್ಯಾಯದ ಬಗ್ಗೆ ಸುಳಿವು ನೀಡಿದ್ದರು.

ಯುವರಾಜ್ ಸಿಂಗ್ ಅವರ ಕಿರಿಯ ಸೋದರ ಜೋರಾವರ್ ಸಿಂಗ್ ಅವರ ಪತ್ನಿ ಎಂಬ ಕಾರಣಕ್ಕೆ ಗುರ್ ಗಾಂವ್ ಮೂಲದ ಆಕಾಂಕ್ಷಗೂ ಸೆಲೆಬ್ರಿಟಿ ಸ್ಟೇಟಸ್ ಸಿಕ್ಕಿಬಿಟ್ಟಿತು.

ಆದರೆ,ಜೋರಾವರ್ ಅವರನ್ನು ಕೆಲ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ನಾಲ್ಕು ತಿಂಗಳುಗಳ ಕಾಲ ಮಾತ್ರ ಸಂಸಾರ ನಡೆಸಿದ ಅಕಾಂಕ್ಷಾ ಅವರು ಈಗ ಜೋರಾವರ್ ಸಿಂಗ್ ಅವರಿಂದ ವಿಚ್ಛೇದನ ಬಯಸಿದ್ದಾರೆ.

ವಿಚ್ಛೇದನಕ್ಕೆ ಏನು ಕಾರಣ?

ವಿಚ್ಛೇದನಕ್ಕೆ ಏನು ಕಾರಣ?

ವಿವಾಹ ವಿಚ್ಛೇದನಕ್ಕೆ ನನ್ನ ಪತಿ ಜೋರಾವರ್ ಸಿಂಗ್ ಕಾರಣರಲ್ಲ. ಯುವರಾಜ್ ಸಿಂಗ್ ಹಾಗೂ ಅವರ ತಾಯಿಯೇ ಕಾರಣ ಎಂದು ಪರೋಕ್ಷವಾಗಿ ಆರೋಪಿಸಿದರು. ಈಗ ಬಿಗ್ ಬಾಸ್ ಮನೆಯಲ್ಲಿ ಹೊಸ ಬದುಕು ಕಂಡುಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ.

ಸೆಲಿಬ್ರಿಟಿ ಸ್ಪರ್ಧಿ ಗೌರವ್ ಜತೆ ಚರ್ಚೆ

ಸೆಲಿಬ್ರಿಟಿ ಸ್ಪರ್ಧಿ ಗೌರವ್ ಜತೆ ಚರ್ಚೆ

ಇದೇ ವಿಷಯವನ್ನು ಸೆಲಿಬ್ರಿಟಿ ಸ್ಪರ್ಧಿ ಗೌರವ್ ಜತೆ ಕೂಡಾ ಚರ್ಚಿಸಿದ್ದಾರೆ. ಮಾಲೀಕ ಹಾಗೂ ಸೇವಕ ಟಾಸ್ಕ್ ನಲ್ಲಿ ಅಕಾಂಕ್ಷಾ ಅವರ ಸೇವಕನಾಗಿ ಗೌರವ್ ಕಾರ್ಯ ನಿರ್ವಹಿಸುತ್ತಿದ್ದರು.

ಇನ್ನೂ ವಿವಾಹ ವಿಚ್ಛೇದನ ಸಿಕ್ಕಿಲ್ಲ

ಇನ್ನೂ ವಿವಾಹ ವಿಚ್ಛೇದನ ಸಿಕ್ಕಿಲ್ಲ

ಸಹ ಸ್ಪರ್ಧಿ ಗೌರವ್ ಜತೆ ಮಾತನಾಡುವ ಸಂದರ್ಭದಲ್ಲಿ ಆಕಾಂಕ್ಷಾ ಅವರ ಉಗುರಿನ ಬಣ್ಣವನ್ನು ಗೌರವ್ ತೆಗೆಯುತ್ತಿದ್ದರು. ತನ್ನ ಮದುವೆ, ಸಂಸಾರದ ಬಗ್ಗೆ ಆಕಾಂಕ್ಷಾ ಹೇಳಿಕೊಂಡರು. ವಿವಾಹ ವಿಚ್ಛೇದನ ಇನ್ನೂ ಸಿಕ್ಕಿಲ್ಲ. ಈ ಶೋನಲ್ಲಿ ನನ್ನ ನೋವನ್ನು ತೋಡಿಕೊಂಡಿದ್ದೇನೆ. ನನಗೆ ಒಳ್ಳೆ ಬದುಕು ಸಿಗುವ ನಿರೀಕ್ಷೆಯಿದೆ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಯುವಿ ತಾಯಿ

ಈ ಬಗ್ಗೆ ಪ್ರತಿಕ್ರಿಯಿಸಿದ ಯುವಿ ತಾಯಿ

ಈ ಬಗ್ಗೆ ಪ್ರತಿಕ್ರಿಯಿಸಿದ ಯುವರಾಜ್ ಸಿಂಗ್ ತಾಯಿ ಶಬನಮ್ ಸಿಂಗ್, ವಿಚ್ಛೇದನ ವಿಷಯ ಸದ್ಯ ಕೋರ್ಟಿನಲ್ಲಿದೆ. ಈ ವಿಷಯವಾಗಿ ಆಕೆ ಹೇಗೆ ಮಾತನಾಡಬಲ್ಲಳು. ನ್ಯಾಯಾಂಗ ನಿಂದನೆಯಾಗುವುದಿಲ್ಲವೇ. ನಮ್ಮನ್ನು ಹೇಳಲು ಸಾಕಷ್ಟು ವಿಷಯವಿದೆ. ಆದರೆ, ಕೆಸರೆರೆಚಾಟದಲ್ಲಿ ತೊಡಗಲು ನನಗಿಷ್ಟವಿಲ್ಲ. ಆಕೆ ಕೂಡಾ ಒಬ್ಬರ ಮಗಳು ಎಂಬುದನ್ನು ಮರೆಯದಿರಲಿ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bigg Boss 10 started and among the contestants was Akansha Sharma, sister-in-law of famous cricketer Yuvraj Singh. She indirectly blamed Yuvraj and Zorawar's mother for her separation from her husband.
Please Wait while comments are loading...