ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ 'ಬೆಸ್ಟ್ ಇನ್ನಿಂಗ್ಸ್' ಪಟ್ಟಿಯಲ್ಲಿ ಸೆಹ್ವಾಗ್ ಶತಕ!

By Mahesh

ಮೆಲ್ಬೋರ್ನ್, ಸೆ. 22: ಭಾರತ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಅವರ ಶತಕವೊಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟರ್ ಗಳು ಬಾರಿಸಿರುವ ಬೆಸ್ಟ್ ಇನ್ನಿಂಗ್ಸ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. 2000ರಿಂದ ಇಲ್ಲಿ ತನಕದ ಶ್ರೇಷ್ಠ ಪ್ರದರ್ಶನಗಳ ಪಟ್ಟಿಯಲ್ಲಿ ಸೆಹ್ವಾಗ್ ಅವರ 195ರನ್ ಗಳ ಆಟ 13ನೇ ಸ್ಥಾನ ಪಡೆದುಕೊಂಡಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.

ಸೆಹ್ವಾಗ್ ಅವರು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 2003ರಲ್ಲಿ 195 ರನ್ (233 ಎಸೆತ, 25X4, 5X6) ಬಾರಿಸಿದ್ದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಂದ ಈ ಅದ್ಭುತ ಶತಕದ ಹೊರತಾಗಿಯೂ ಭಾರತ ತಂಡವನ್ನು ಆಸ್ಟ್ರೇಲಿಯಾ 9 ವಿಕೆಟ್ ಗಳಿಂದ ಸೋಲಿಸಿತ್ತು. (ಸ್ಕೋರ್ ಕಾರ್ಡ್ ನೋಡಿ) ಸಿಕ್ಸರ್ ಬಾರಿಸುವ ಮೂಲಕ ದ್ವಿಶತಕ ಗಳಿಸಲು ಯತ್ನಿಸಿದ್ದ ಸೆಹ್ವಾಗ್ ಔಟಾಗಿದ್ದರು.

ಆಸ್ಟ್ರೇಲಿಯನ್ನರ ಪಾಲಿಗೂ ಈ ಟೆಸ್ಟ್ ಪಂದ್ಯ ಅವಿಸ್ಮರಣೀಯವಾಗಿತ್ತ್ತು. ಯಶಸ್ವಿ ನಾಯಕ ಸ್ಟೀವ್ ವಾ ಅವರ ಕೊನೆ ಪಂದ್ಯ ಇದಾಗಿತ್ತ್ತು. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ 1-1ರಲ್ಲಿ ಸಮವಾಯಿತು. [ಸೆಹ್ವಾಗ್ ಹರ್ಯಾಣಕ್ಕೆ ಸೇರ್ಪಡೆ]

ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಬ್ರೆಟ್ ಲೀ, ನಾಥನ್ ಬ್ರಾಕೇನ್, ಬ್ರಾಡ್ ವಿಲಿಯಮ್ಸ್, ಸ್ಟುವರ್ಟ್ ಮೆಕ್ ಗಿಲ್ ಬೌಲಿಂಗ್ ಎದುರಿಸಿದ ಸೆಹ್ವಾಗ್ ಲೀಲಾಜಾಲವಾಗಿ ಆಡಿದ್ದರು ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಸ್ಕೋರ್ 366ರನ್ ಆಗಿದ್ದರೆ ಅದರಲ್ಲಿ 195 ಸೆಹ್ವಾಗ್ ಅವರದ್ದೇ ಕೊಡುಗೆ ಎಂದರೆ ನೀವು ಊಹಿಸಬಹುದು.

 Virender Sehwag's 195 at 13th spot

ಕ್ರಿಕೆಟ್ ಆಸ್ಟ್ರೇಲಿಯಾ ಟಾಪ್ 15 ಟೆಸ್ಟ್ ಇನ್ನಿಂಗ್ಸ್ ನ ಪಟ್ಟಿಯನ್ನು ಪ್ರಕಟಿಸುತ್ತಿದೆ. ಸದ್ಯಕೆಕ್ 15-10ರ ತನಕ ಪಟ್ಟಿ ಬಿಡುಗಡೆ ಮಾಡಿದೆ. 9-01ರತನಕದ ಪಟ್ಟಿ ಪ್ರಕಟವಾಗಬೇಕಿದೆ. ಟಾಪ್ 10ರ ತನಕ ಸೆಹ್ವಾಗ್ ಮಾತ್ರ ಭಾರತದಿಂದ ಕಾಣಿಸಿಕೊಂಡಿದ್ದಾರೆ, ಟಾಪ್ 9-1 ರೊಳಗೆ ಬೇರೆ ಯಾವ ಭಾರತೀಯ ಕ್ರಿಕೆಟರ್ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.[ಆಸ್ಟ್ರೇಲಿಯಾದ ಟಾಪ್ 15 ಶತಕ ಪಟ್ಟಿಯಲ್ಲಿ ಸಚಿನ್, ಲಕ್ಷ್ಮಣ್, ಸೆಹ್ವಾಗ್]

ಟಾಪ್ 15-10ರ ತನಕದ ಪಟ್ಟಿ 2000ದಿಂದ ಇಲ್ಲಿ ತನಕ :

15. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 123 ನಾಟೌಟ್ vs ನ್ಯೂಜಿಲೆಂಡ್ (ಬೆಲ್ಲರಿವ್ ಓವಲ್, ಹೋಬಾರ್ಟ್, ಡಿಸೆಂಬರ್ 2011)
14. ಸೈಮನ್ ಕಟಿಚ್ (ಆಸ್ಟ್ರೇಲಿಯಾ) 131 ನಾಟೌಟ್ vs ನ್ಯೂಜಿಲೆಂಡ್ (ಗಬ್ಬಾ, ಬ್ರಿಸ್ಬೇನ್, ನವೆಂಬರ್ 2008)
13. ವಿರೇಂದರ್ ಸೆಹ್ವಾಗ್ (ಭಾರತ) 195 vs ಆಸ್ಟ್ರೇಲಿಯಾ (ಎಂಸಿಜಿ, ಮೆಲ್ಬೋರ್ನ್, 2003)
12. ಹಶೀಂ ಅಮ್ಲಾ (ದಕ್ಷಿಣ ಆಫ್ರಿಕಾ) 196 vs ಆಸ್ಟ್ರೇಲಿಯಾ (ವಾಕಾ ಮೈದಾನ, ಡಿಸೆಂಬರ್ 2012)
11. ಕುಮಾರ್ ಸಂಗಕ್ಕಾರ (ಶ್ರೀಲಂಕಾ) 192 vs ಆಸ್ಟ್ರೇಲಿಯಾ (ಬೆಲ್ಲರಿವ್ ಓವಲ್, ಹೋಬಾರ್ಟ್, ನವೆಂಬರ್ 2007)
10. ಎಬಿ ಡಿ ವಿಲೆಯರ್ಸ್) ದಕ್ vs ಆಸ್ಟ್ರೇಲಿಯಾ (ವಾಕಾ ಮೈದಾನ, ಡಿಸೆಂಬರ್ 2008)

( ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X