ವಿಶ್ವ ಟಿ20ಗೆ ಎಬಿ ಡಿ ವಿಲಿಯರ್ಸ್ ಸಕತ್ ತಯಾರಿ

Posted By:
Subscribe to Oneindia Kannada

ಜೋಹಾನ್ಸ್ ಬರ್ಗ್, ಫೆ., 22: ದಕ್ಷಿಣ ಆಫ್ರಿಕಾದ ಟಿ20 ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರು ಕಳೆದ ರಾತ್ರಿ ನೀಡಿದ ಘೋಷಣೆ ವಿಶ್ವ ಟಿ20 ಆಡುವ ತಂಡಗಳಿಗೆ ನಡುಕ ಹುಟ್ಟಿಸಿದೆ. ಎಬಿ ಡಿವಿಲೆಯರ್ಸ್ ಇನ್ಮುಂದೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯದಿದ್ದಾರೆ ಎಂದಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್ | ವಿಶ್ವ ಟಿ20 ವೇಳಾಪಟ್ಟಿ

ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಎಬಿ ಡಿವಿಲೆಯರ್ಸ್ ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. 32 ವರ್ಷದ ಡಿ ವಿಲೆಯರ್ಸ್ ಭಾನುವಾರ ರಾತ್ರಿ ವಾಂಡರರ್ಸ್ ಮೈದಾನದಲ್ಲಿ 29 ಎಸೆತಗಳಲ್ಲಿ 71ರನ್ ಚೆಚ್ಚಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ 9 ವಿಕೆಟ್ ಗಳ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.[ವಿಶ್ವ ಟಿ20ಗೆ ದಕ್ಷಿಣ ಆಫ್ರಿಕಾ ತಂಡ]

best-suited-ab-de-villiers-to-open-south-africa-world-t20

ಎಬಿಡಿ ಅವರು ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ತ್ವರಿತಗತಿಯಲ್ಲಿ ಅರ್ಧಶತಕ ಗಳಿಸಿದರು. ಇದರಿಂದಾಗಿ 172ರನ್ ಟಾರ್ಗೆಟ್ ಪಡೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 15ನೇ ಓವರ್ ನಲ್ಲೇ ಗುರಿ ಮುಟ್ಟಿತು. ಡಿವಿಲೆಯರ್ಸ್ 71 ರನ್(29 ಎಸೆತಗಳು, 6x4,6x6) ಬಾರಿಸಿದ್ದು ಕಂಡ ನಾಯಕ ಫಾಫ್ ಡುಪ್ಲೆಸಿಸ್ ಅವರು ವಿಶ್ವ ಟಿ20ಯಲ್ಲೂ ಎಬಿಡಿ ಅವರು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಾರೆ ಎಂದರು.[ನಿವೃತ್ತಿ ಬಗ್ಗೆ ಎಬಿಡಿ ವಿಲಿಯರ್ಸ್ ಬಿಚ್ಚಿಟ್ಟ ಸತ್ಯವೇನು?]

ಇದುವರೆವಿಗೂ ಭಾರತದ ನೆಲದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟಿ20 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದಾರೆ. ಆದರೆ, ಭಾರತದ ಪಿಚ್ ಗಳಲ್ಲಿ ಎಬಿಡಿ ಅವರು ಇನ್ನಿಂಗ್ಸ್ ಆರಂಭಿಸಿ ದೊಡ್ಡ ಮೊತ್ತ ಕಲೆ ಹಾಕುವುದು ಅಥವಾ ರನ್ ಚೇಸ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.[ದಾಖಲೆಗಳ ವೀರ ಎಬಿಡಿ ವಿಲಿಯರ್ಸ್ 'ತ್ರಿಬ್ಬಲ್ ಸೊನ್ನೆ']

ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಮತ್ತು ಅರ್ಹತಾ ಸುತ್ತಿನ ತಂಡದ ಜೊತೆ ದಕ್ಷಿಣ ಆಫ್ರಿಕಾ ಇದೆ. ಮಾರ್ಚ್ 8 ರಿಂದ ಏಪ್ರಿಲ್ 3 ರ ತನಕ ಟೂರ್ನಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa's captain Faf du Plessis last night (February 21) confirmed that AB de Villiers will open the batting in next month's ICC World Twenty20 tournament in India.
Please Wait while comments are loading...