2016ರ ಟಿ20 ಹಿನ್ನೋಟ: ವಿರಾಟ್ ಕೊಹ್ಲಿಯೇ ಕಿಂಗ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 25: 2016ರಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಪ್ರೇಕ್ಷಕರಿಗೆ ಹೊಸ ರೋಚಕತೆಯನ್ನು ನೀಡಿದ್ದಲ್ಲದೆ, ವಿಶ್ವ ಟಿ20 ಸಮರ ಕೂಡಾ ಇದೇ ವರ್ಷ ಆಯೋಜನೆಗೊಂಡಿತ್ತು. ಟಿ20 ವಿಭಾಗದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೂ ವಿಶ್ವಕಪ್ ನಲ್ಲಿ ಭಾರತ ಸೆಮಿಫೈನಲ್ ನಲ್ಲಿ ಸೋಲು ಕಂಡಿತ್ತು.

ವೆಸ್ಟ್ ಇಂಡೀಸ್ ವಿಶ್ವ ಟಿ20 ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆ ಓವರ್ ಥ್ರಿಲ್ಲರ್ ನಲ್ಲಿ ಪಂದ್ಯ ಗೆದ್ದು ಕಪ್ ಎತ್ತಿತ್ತು. ವಿಶ್ವಟಿ20ಯ ಸೆಮಿಫೈನಲ್ ನಲ್ಲಿ ಸೋಲು ಕಂಡರೂ 2016 ರಲ್ಲಿ ಟೀಂ ಇಂಡಿಯಾ ಉತ್ತಮ ಗೆಲುವಿನ ಸರಾಸರಿ ಹೊಂದಿದೆ. 21 ಪಂದ್ಯಗಳನ್ನಾಡಿದ ಭಾರತ 16 ರಲ್ಲಿ ಗೆಲುವು ಸಾಧಿಸಿದರೆ, ಒಂದು ಪಂದ್ಯ ರದ್ದಾಯಿತು.

2016ಕ್ಕೂ ಮುನ್ನ 33 ರನ್ ಸರಾಸರಿ ಹೊಂದಿದ್ದ ಕೊಹ್ಲಿ ಈ ವರ್ಷ 106.83 ರನ್ ಸರಾಸರಿಯಂತೆ ರನ್ ಗಳಿಸಿ ಟಿ20ಐನಲ್ಲಿ 57.13 ರನ್ ಸರಾಸರಿ ಹೊಂದಿದ್ದು, ಎಲ್ಲಾ ಮೂರು ಮಾದರಿ ಕ್ರಿಕೆಟ್ ನಲ್ಲಿ 50 ಪ್ಲಸ್ ರನ್ ಸರಾಸರಿ ಹೊಂದಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

28 ವರ್ಷ ವಯಸ್ಸಿನ 2016 ರಲ್ಲಿ ಒಟ್ಟು 7 ಅರ್ಧಶತಕದೊಂದಿಗೆ 15 ಪಂದ್ಯಗಳಿಂದ 641 ರನ್ ಗಳಿಸಿದ್ದಾರೆ. ಅಜೇಯ 90ಗರಿಷ್ಠ ಮೊತ್ತ. ಇದೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಲೆಕ್ಕಕ್ಕೆ ತೆಗೆದುಕೊಂಡರೆ ಕೊಹ್ಲಿ 4 ಶತಕಗಳು ಸೇರಿದಂತೆ 973 ರನ್ ಚೆಚ್ಚಿದ್ದಾರೆ.

ಅಫ್ಘಾನಿಸ್ತಾನದ ಷಹಜಾದ್

ಅಫ್ಘಾನಿಸ್ತಾನದ ಷಹಜಾದ್

ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ದೊಡ್ಡ ಅಭಿಮಾನಿಯಾಗಿರುವ ಅಫ್ಘಾನಿಸ್ತಾನದ ಮೊಹಮ್ಮದ್ ಷಹಜಾದ್ ಅವರು ಐಸಿಸಿ ಪ್ರಶಸ್ತಿ ಗೆದ್ದಿದ್ದಾರಲ್ಲದೆ, ಕೊಹ್ಲಿಗಿಂತ ಹೆಚ್ಚಿನ ಸ್ಟೈಕ್ ರೇಟ್ ನಂತೆ 2016ರಲ್ಲಿ ರನ್ ಗಳಿಸಿದ್ದಾರೆ. 15 ಪಂದ್ಯಗಳಿಂದ 520 ರನ್ ಗಳಿಸಿರುವ ಷಹಜಾದ್ ಅವರು ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 118 ಗರಿಷ್ಠ ಮೊತ್ತ ಬಾರಿಸಿದರು. 152.94 ಸ್ತ್ರೈಕ್ ರೇಟ್ ನಂತೆ ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ರೋಹಿತ್ ಶರ್ಮ

ರೋಹಿತ್ ಶರ್ಮ

ಮುಂಬೈ ಆಟಗಾರ ರೋಹಿತ್ ಶರ್ಮ ಅವರು 2016 ರಲ್ಲಿ 18 ಟಿ20 ಪಂದ್ಯಗಳಲ್ಲಿ 497 ರನ್ ಗಳಿಸಿದ್ದಾರೆ. 29.23 ರನ್ ಸರಾಸರಿಯಂತೆ 4 ಅರ್ಧಶತ ಕಗಳಿಸಿರುವ ರೋಹಿತ್ ಅವರ ಸ್ಟ್ರೈಕ್ ರೇಟ್ 131.48 ರಂತೆ ಇದೆ.

ಸಬ್ಬೀರ್ ರಹಮಾನ್ (ಬಾಂಗ್ಲಾದೇಶ)

ಸಬ್ಬೀರ್ ರಹಮಾನ್ (ಬಾಂಗ್ಲಾದೇಶ)

ಬಾಂಗ್ಲಾದೇಶದ ಸಬ್ಬೀರ್ ರಹಮಾನ್ ಅವರು 2016 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರರಾಗಿದ್ದಾರೆ. 16 ಪಂದ್ಯಗಳಿಂದ 35.61 ರನ್ ಸರಾಸರಿಯಂತೆ 463 ರನ್ ಗಳಿಸಿದ್ದಾರೆ. 16 ಪಂದ್ಯಗಳ ಪೈಕಿ 15 ಪಂದ್ಯ ತವರು ನೆಲದಲ್ಲೆ ಅಡಿದ್ದು, 127.54 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್

2016 ರಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದಿದ್ದರೂ, ಟಾಪ್ 5ನೇ ಸ್ಥಾನದಲ್ಲಿದ್ದಾರೆ. 11 ಪಂದ್ಯಗಳಿಂದ 435 ರನ್ ಗಳಿಸಿದ್ದು, ಅಜೇಯ 145 ಗರಿಷ್ಠ ಮೊತ್ತವಾಗಿದೆ. ಮ್ಯಾಕ್ಸ್ ವೆಲ್ 48.33 ರನ್ ಸರಾಸರಿಯಂತೆ 174.69 ಸ್ಟ್ರೈಕ್ ರೇಟ್ ನಂತೆ ರನ್ ಗಳಿಸಿದ್ದಾರೆ.

ಮಾರ್ಟಿನ್ ಗಪ್ಟಿಲ್

ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ ಅವರು 2016 ರಲ್ಲಿ 9 ಟಿ20 ಪಂದ್ಯಗಳನ್ನಾಡಿದ್ದು 392 ರನ್ ಗಳಿಸಿದ್ದಾರೆ. ಅಜೇಯ 87 ಗರಿಷ್ಠ ಮೊತ್ತವಾಗಿದೆ. 49 ರನ್ ಸರಾಸರಿಯಂತೆ 4 ಅರ್ಧಶತಕ ಹಾಗೂ 171.92 ಸ್ಟ್ರೈಕ್ ರೇಟ್ ನಂತೆ ರನ್ ಕಲೆ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Best of 2016: World cricket witnessed some amazing batting performances in the T20 international games in the year 2016.The year 2016 witnessed an entirely different version of Virat Kohli. The Delhi-lad emerged as most lethal batsman of the year.
Please Wait while comments are loading...