2016 ಟೆಸ್ಟ್ ಕ್ರಿಕೆಟ್ ಟಾಪ್ 5 ಬ್ಯಾಟ್ಸ್ ಮನ್: ಕೊಹ್ಲಿ ನಂ. 1

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 28: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2016ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಂತೆ ಟೆಸ್ಟ್ ಪಂದ್ಯಗಳಲ್ಲೂ ಭರ್ಜರಿ ಪ್ರದರ್ಶನ ನೀಡಿ, ಅಗ್ರಸ್ಥಾನ ಗಳಿಸಿದ್ದಾರೆ. 2016ರಲ್ಲಿ ಉತ್ತಮ ಪ್ರದರ್ಶನ ನೀಡಿದ ಟೆಸ್ಟ್ ಕ್ರಿಕೆಟ್ ಬ್ಯಾಟ್ಸ್ ಮನ್ ಗಳ ಪಟ್ಟಿ ಇಲ್ಲಿದೆ.

28 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ಟೆಸ್ಟ್ ಆಟಗಾರರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಅಜರ್ ಅಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಇಂಗ್ಲೆಂಡಿನ ಆಟಗಾರರು ಟಾಪ್ 5 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2016ರ ಟಾಪ್ 5 ಸ್ಥಾನ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ. [ಏಕದಿನ ಕ್ರಿಕೆಟ್: ಕೊಹ್ಲಿ ಸೇರಿದಂತೆ ಟಾಪ್ 5 ಬ್ಯಾಟ್ಸ್ ಮನ್]

#1 ವಿರಾಟ್ ಕೊಹ್ಲಿ

#1 ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು 12 ಪಂದ್ಯಗಳಿಂದ 1,215 ರನ್ ಗಳಿಸಿದ್ದು, 75.93ರನ್ ಸರಾಸರಿಯಂತೆ ರನ್ ಗಳಿಸಿದ್ದು, 2016 ಕ್ಕೂ ಮುಂಚೆ ಕೊಹ್ಲಿ ದ್ವಿಶತಕ ಬಾರಿಸಿರಲಿಲ್ಲ. ಹಾಗೂ ರನ್ ಸರಾಸರಿ ಕೂಡಾ 50ಕ್ಕಿಂತ ಕಡಿಮೆ ಇತ್ತು. ಆದರೆ, 2016ರಲ್ಲಿ ಮೂರು ಮಾದರಿ ಕ್ರಿಕೆಟ್ ನಲ್ಲೂ 50ಪ್ಲಸ್ ರನ್ ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

#2 ಅಜರ್ ಅಲಿ

#2 ಅಜರ್ ಅಲಿ

31 ವರ್ಷ ವಯಸ್ಸಿನ ಪಾಕಿಸ್ತಾನಿ ಬ್ಯಾಟ್ಸ್ ಮನ್ 2016ರಲ್ಲಿ 11 ಟೆಸ್ಟ್ ಪಂದ್ಯಗಳಿಂದ 1155ರನ್ ಕಲೆ ಹಾಕಿದ್ದು, 64.16ರನ್ ಸರಾಸರಿ ಹೊಂದಿದ್ದಾರೆ. ಒಟ್ಟಾರೆ 3 ಶತಕಗಳನ್ನು ಬಾರಿಸಿದ್ದು, ಅಜೇಯ 302ರನ್ ಗರಿಷ್ಠ ವೈಯಕ್ತಿಅಕ್ ಮೊತ್ತವಾಗಿದೆ. 4 ಅರ್ಧಶತಕ ಗಳಿಸಿದ ಬಲಗೈ ಬ್ಯಾಟ್ಸ್ ಮನ್ ಅಜರ್ ಅವರು ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ದ್ವಿಶತಕ ಬಾರಿಸಿದ್ದಲ್ಲದೆ, ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ಐದನೇ ಪಾಕಿಸ್ತಾನ ಆಟಗಾರ ಎನಿಸಿಕೊಂಡಿದ್ದಾರೆ.

#3 ಜೋ ರೂಟ್

#3 ಜೋ ರೂಟ್

ಇಂಗ್ಲೆಂಡಿನ ಬಲಗೈ ಬ್ಯಾಟ್ಸ್ ಮನ್ ಜೋ ರೂಟ್ ಅವರು 2016ರಲ್ಲಿ 17 ಟೆಸ್ಟ್ ಪಂದ್ಯಗಳಿಂದ 1477ರನ್ ಕಲೆ ಹಾಕಿದ್ದು, ಪಾಕಿಸ್ತಾನ ವಿರುದ್ಧ ಗಳಿಸಿದ 254ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 2016ರಲ್ಲಿ ಮೂರು ಶತಕ ಹಾಗೂ 10 ಅರ್ಧಶತಕ (2016ರಲ್ಲಿ ಅತಿ ಹೆಚ್ಚು ಗಳಿಕೆ) ಬಾರಿಸಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲಿ 1500 ಪ್ಲಸ್ ರನ್ ಗಳಿಕೆ ಮಾಡಿದ್ದಾರೆ.

4 ಜಾನಿ ಬೈರ್ಸ್ಟೋ

4 ಜಾನಿ ಬೈರ್ಸ್ಟೋ

ಇಂಗ್ಲೆಂಡಿನ ವಿಕೆಟ್ ಕೀಪರ್ ಬಲಗೈ ಬ್ಯಾಟ್ಸ್ ಮನ್ ಜಾನಿ ಬೈರ್ಸೋ ಅವರು 17 ಟೆಸ್ಟ್ ಪಂದ್ಯಗಳಿಂದ 1470ರನ್ ಗಳಿಸಿದ್ದು, 58.80ರನ್ ಸರಾಸರಿ ಹೊಂದಿದ್ದಾರೆ.

5, 6 ಹಾಗೂ 7 ನೇ ಕ್ರಮಾಂಕದಲ್ಲಿ ಬಂದು ಆಡುವ 27ವರ್ಷ ವಯಸ್ಸಿನ ಜಾನಿ ಅವರ ಸಾಧನೆ ರೂಟ್ ನಂತರದ ಸ್ಥಾನದಲ್ಲಿದೆ.

#5 ಅಲೆಸ್ಟರ್ ಕುಕ್

#5 ಅಲೆಸ್ಟರ್ ಕುಕ್

ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡರೂ ಇಂಗ್ಲೆಂಡ್ ನಾಯಕ ಕುಕ್ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದರು. ತ್ವರಿತಗತಿಯಲ್ಲಿ 10,000ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

2016ರಲ್ಲಿ 17 ಟೆಸ್ಟ್ ಪಂದ್ಯವಾಡಿದ ಕುಕ್ ಅವರು 1270ರನ್ ಗಳಿಸಿದ್ದು 42.33ರನ್ ಸರಾಸರಿ ಹೊಂದಿದ್ದಾರೆ. 105 ಹಾಗೂ 130ರನ್ ಎರಡು ಶತಕ ಬಾರಿಸಿದ್ದು 32 ವರ್ಷ ವಯಸ್ಸಿನ ಕುಕ್ ಅವರ ಸಾಧನೆ ಅವರನ್ನು ಐದನೇ ಸ್ಥಾನಕ್ಕೆ ತಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The outgoing year 2016 belonged to India's batting masterclass Virat Kohli. 'Run Machine' Kohli has been in a superlative form across all formats, hence the year belongs to him.
Please Wait while comments are loading...