2016ರ ಏಕದಿನ ಕ್ರಿಕೆಟ್: ಕೊಹ್ಲಿ ಸೇರಿದಂತೆ ಟಾಪ್ 5 ಬ್ಯಾಟ್ಸ್ ಮನ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 28: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2016ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಟಾಪ್ 5 ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಆರಂಭಿಸಿದ ರನ್ ಮಳೆ ವರ್ಷಾಂತ್ಯ ತನಕ ಮುಂದುವರೆಯಿತು. 2016ರಲ್ಲಿ ಉತ್ತಮ ಏಕದಿನ ಕ್ರಿಕೆಟ್ ಬ್ಯಾಟ್ಸ್ ಮನ್ ಗಳ ಪಟ್ಟಿ ಇಲ್ಲಿದೆ.

ಆಸ್ಟ್ರೇಲಿಯಾ ಪ್ರವಾಸ ತೆರಳಿದ್ದ ಭಾರತದ ಪರ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲಿಗೆ 91ರನ್ ಬಾರಿಸಿದ್ದಲ್ಲದೆ ನಂತರ ಸತತ ಎರಡು ಶತಕ ಗಳಿಸಿದರು. [ಟಿ20 ಹಿನ್ನೋಟ: ವಿರಾಟ್ ಕೊಹ್ಲಿಯೇ ಕಿಂಗ್]

28 ವರ್ಷ ವಯಸ್ಸಿನ ಕೊಹ್ಲಿ ಅವರು ಈ ಸರಣಿಯಲ್ಲೇ 381ರನ್ (91,59,117,106 ಹಾಗೂ 8) ಗಳಿಸಿದರು. ಅಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 5 ಪಂದ್ಯಗಳಿಂದ 358ರನ್ ಗಳಿಸಿ ಸರಣಿಯನ್ನು 3-2ರಲ್ಲಿ ಕೈವಶವಾಗುವಂತೆ ನೋಡಿಕೊಂಡರು.

ಉಳಿದಂತೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 63.09ರನ್ ಸರಾಸರಿ ಹೊಂದಿದ್ದಾರೆ. 2016ರಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟಾನ್ ಡಿಕಾಕ್ ಅವರು ಐಸಿಸಿ ಏಕದಿನ ಕ್ರಿಕೆಟರ್ ಪ್ರಶಸ್ತಿ ಗಳಿಸಿದ್ದಲ್ಲದೆ ವರ್ಷದ ಸ್ಟಾರ್ ಆಟಗಾರ ಎನಿಸಿಕೊಂಡರು. ಮಿಕ್ಕಂತೆ ಯಾರೆಲ್ಲ ಟಾಪ್ 5 ಪಟ್ಟಿಯಲ್ಲಿದ್ದಾರೆ ಮುಂದೆ ಓದಿ...

#1 ವಿರಾಟ್ ಕೊಹ್ಲಿ

#1 ವಿರಾಟ್ ಕೊಹ್ಲಿ

2016ರಲ್ಲಿ 10ಇನ್ನಿಂಗ್ಸ್ ಗಳಲ್ಲಿ 3 ಶತಕ ಹಾಗೂ 4 ಅರ್ಧಶತಕ ಸಿಡಿಸಿರುವ ವಿರಾಟ್ ಕೊಹ್ಲಿ 739ರನ್ ಗಳಿಸಿದ್ದಾರೆ. ಅಜೇಯ 154 ಗರಿಷ್ಠ ಮೊತ್ತವಾಗಿದೆ. 92.37 ರನ್ ಸರಾಸರಿ ಹೊಂದಿದ್ದು, ಈ ವರ್ಷ ಉತ್ತಮ ರನ್ ಸರಾಸರಿಯಾಗಿದೆ. ಈ ವರ್ಷ ಎರಡು ಶತಕ ಬಾರಿಸುವುದಾಗಿ ಪಾಕಿಸ್ತಾನದ ದಿಗ್ಗಜ ವಾಸಿಂ ಅಕ್ರಂ ಗೆ ಮಾತು ಕೊಟ್ಟಂತೆ ಕೊಹ್ಲಿ ಅವರು ಶತಕ ಬಾರಿಸಿದ್ದಾರೆ.

#2 ಡೇವಿಡ್ ವಾರ್ನರ್

#2 ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರು 23ಏಕದಿನ ಪಂದ್ಯಗಳಿಂದ 1388ರನ್ ಕಲೆ ಹಾಕಿದ್ದಾರೆ. 7ಶತಕಗಳು ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. 63.09ರನ್ ಸರಾಸರಿ ಹೊಂದಿದ್ದು, ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.

ಸೆಪ್ಟೆಂಬರ್ ಹಾಗೂ ಡಿಸೆಂಬರ್ ನಡುವೆ 7 ಶತಕ ಬಾರಿಸಿದ್ದಾರೆ(106,117,173,119 ಹಾಗೂ 156) ಆದರೆ, ವರ್ಷದ ಅಂತ್ಯಕ್ಕೆ ವಾರ್ನರ್ ಅವರು ಫಾರ್ಮ್ ಕಳೆದುಕೊಂಡರು.

#3 ಅಲೆಕ್ಸ್ ಹೇಲ್ಸ್

#3 ಅಲೆಕ್ಸ್ ಹೇಲ್ಸ್

ಇಂಗ್ಲೆಂಡಿನ 27 ವರ್ಷ ವಯಸ್ಸಿನ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ ಅವರು ಪಾಕಿಸ್ತಾನ ವಿರುದ್ಧದ ದಾಖಲೆಯ 444ರನ್ ಗಳಿಸಿದ ಪಂದ್ಯದಲ್ಲಿ ನ್ಯಾಟಿಂಗ್ ಹ್ಯಾಮ್ ನಲ್ಲಿ 171ರನ್ ಚೆಚ್ಚಿದರು.

2016ರಲ್ಲಿ 14 ಏಕದಿನ ಪಂದ್ಯಗಳನ್ನಾಡಿ 743ರನ್ ಕಲೆ ಹಾಕಿದ್ದು, 61.91ರನ್ ಸರಾಸರಿ ಹೊಂದಿದ್ದಾರೆ. ಈ ವರ್ಷದಲ್ಲಿ 3 ಏಕದಿನ ಶತಕ ಹಾಗೂ 4 ಅರ್ಧಶತಕ ಬಾರಿಸಿದರು.

#4 ಜೋ ರೂಟ್

#4 ಜೋ ರೂಟ್

ಇಂಗ್ಲೆಂಡಿನ ಸ್ಟಾರ್ ಆಟಗಾರ ಜೋ ರೂಟ್ ಅವರು 2016ರಲ್ಲಿ 796ರನ್ ಗಳಿಸಿದ್ದು, 15 ಏಕದಿನ ಪಂದ್ಯಗಳಲ್ಲಿ 61.23ರನ್ ಸರಾಸರಿ ಹೊಂದಿದ್ದಾರೆ. 25 ವರ್ಷ ವಯಸ್ಸಿಅನ್ ರೂಟ್ ಅವರು 2 ಶತಕ ಹಾಗೂ 6 ಅರ್ಧಶಾತಕ ಬಾರಿಸಿದ್ದಾರೆ.

#5 ಕ್ವಿಂಟಾನ್ ಡಿ ಕಾಕ್

#5 ಕ್ವಿಂಟಾನ್ ಡಿ ಕಾಕ್

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟಾನ್ ಡಿ ಕಾಕ್ ಅವರು ಐಸಿಸಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಲ್ಲದೆ ವರ್ಷದ ಯುವ ಸ್ಟಾರ್ ಆಟಗಾರ ಎನಿಸಿಕೊಂಡರು.

17 ಏಕದಿನ ಪಂದ್ಯಗಳಿಂದ 857ರನ್ ಗಳನ್ನು ಗಳಿಸಿದ್ದು 3 ಶತಕ ಹಾಗೂ 3 ಅರ್ಧಶತಕ ಬಾರಿಸಿದರು. 24 ವರ್ಷ ವಯಸ್ಸಿಅನ್ ಡಿ ಕಾಕ್ ಅವರು 57.13ರನ್ ಸರಾಸರಿ ಹೊಂದಿದ್ದಾರೆ. ಈ ವರ್ಷದಲ್ಲಿ 26 ಸಿಕ್ಸ್ ಬಾರಿಸಿದ್ದು, ಡೇವಿಡ್ ವಾರ್ನರ್ 22 ಸಿಕ್ಸ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's 'Run Machine' Virat Kohli stamped his authority in the 2016 in almost every format of the game, but his domination upon bowlers in 2016 began with ODI series against Australia.
Please Wait while comments are loading...