2016ರಲ್ಲಿ ಹೆಚ್ಚು ರನ್ : ರೂಟ್ ಹಿಂದಿಕ್ಕಿ ಕೊಹ್ಲಿ ಅಗ್ರಸ್ಥಾನಕ್ಕೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 29: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅವರು 2016ರಲ್ಲಿ ಭರ್ಜರಿ ಪ್ರದರ್ಶನ ಮೂಲಕ ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಕೊನೆ ಕ್ಷಣದ ತನಕ ಇಂಗ್ಲೆಂಡಿನ ಜೋ ರೂಟ್ ಅವರು ಪೈಪೋಟಿ ನೀಡಿ ಕೊನೆಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

28ವರ್ಷ ವಯಸ್ಸಿನ ಕೊಹ್ಲಿ ಅವರಿಗೆ ಸರಿಯಾದ ಪೈಪೋಟಿ ನೀಡಿದ ರೂಟ್ ಅವರು ವರ್ಷದಲ್ಲಿ 2,567 ಅಂತಾರಾಷ್ಟ್ರೀಯ ರನ್ ಗಳಿಸಿದ್ದರು. ಆದರೆ, ಕೊಹ್ಲಿ ಅವರು 2,595ರನ್ ಗಳಿಸುವ ಮೂಲಕ ಅಗ್ರಸ್ಥಾನಕ್ಕೇರಿದರು.[ಏಕದಿನ ಕ್ರಿಕೆಟ್: ಕೊಹ್ಲಿ ಸೇರಿದಂತೆ ಟಾಪ್ 5 ಬ್ಯಾಟ್ಸ್ ಮನ್]

ಕೊಹ್ಲಿ ಹಾಗೂ ರೂಟ್ ಅಲ್ಲದೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರು 2016ರಲ್ಲಿ 2,000ರನ್ ಗಡಿ ದಾಟಿದರು.[ಟೆಸ್ಟ್ ಕ್ರಿಕೆಟ್ ಟಾಪ್ 5 ಬ್ಯಾಟ್ಸ್ ಮನ್: ಕೊಹ್ಲಿ ನಂ. 1]

ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮ ಇಬ್ಬರು 1,000ರನ್ ಗಡಿ ದಾಟಿದ್ದು ವಿಶೇಷ. ಅತಿ ಹೆಚ್ಚು ರನ್ ಗಳಿಕೆ ಮಾಡಿದ 2016ರ ಟಾಪ್ 10 ಆಟಗಾರರ ವಿವರಣೆ ಮುಂದಿದೆ.

#1 ವಿರಾಟ್ ಕೊಹ್ಲಿ

#1 ವಿರಾಟ್ ಕೊಹ್ಲಿ

28ವರ್ಷ ವಯಸ್ಸಿನ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರು 2016ರಲ್ಲಿ ಭರ್ಜರಿ ಲಯದಲ್ಲಿದ್ದಾರೆ. ಒಟ್ಟಾರೆ 2,595ರನ್ (1215 ಟೆಸ್ಟ್, 739ಏಕದಿನ ರನ್ ಹಾಗೂ 641 ಟಿ20ಐ ರನ್ ಗಳಿಕೆ) ಒಟ್ಟಾರೆ 35 ಅಂತಾರಾಷ್ಟ್ರೀಯ ಪಂದ್ಯಗಳು.

ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಲು ಸಾಲು ಡಬ್ಬಲ್ ಸೆಂಚುರಿ ಸಿಡಿಸಿದ ಕೊಹ್ಲಿ ಉತ್ತಮ ಭಾರತೀಯ ನಾಯಕ ಎನಿಸಿಕೊಂಡು ಅಜರುದ್ದೀನ್ ದಾಖಲೆ ಸಮಕ್ಕೆ ನಿಂತಿದ್ದಾರೆ.

#2 ಜೋ ರೂಟ್

#2 ಜೋ ರೂಟ್

ಇಂಗ್ಲೆಂಡಿನ ಬಲಗೈ ಬ್ಯಾಟ್ಸ್ ಮನ್ ಜೋ ರುಟ್ ಅವರು 39 ಅಂತಾರಾಷ್ಟ್ರೀಯ ಪಂದ್ಯಗಳಿಂದ 2,567ರನ್ (1477 ಟೆಸ್ಟ್, 796 ಏಕದಿನ, 297 ಟಿ20ಐ) ಗಳಿಸಿದ್ದಾರೆ. 254 ವೈಯಕ್ತಿಕ ಗರಿಷ್ಠ ಮೊತ್ತ.

17 ಟೆಸ್ಟ್ ಪಂದ್ಯಗಳಲ್ಲಿ 1477ರನ್ ಗಳಿಸಿದ್ದು ಕ್ಯಾಲೆಂಡರ್ ವರ್ಷವೊಂದರಲ್ಲಿ ಟೆಸ್ಟ್ ಆಟಗಾರ ಗಳಿಸಿದ ಅಧಿಕ ಮೊತ್ತವಾಗಿದೆ. ಅದರೆ, ಟೆಸ್ಟ್ ರನ್ ಸರಾಸರಿ ಲೆಕ್ಕಕ್ಕೆ ತೆಗೆದುಕೊಂಡರೆ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ಅಜರ್ ಅಲಿ ಅವರು ರೂಟ್ ಗಿಂತ ಮುಂದಿದ್ದಾರೆ.

#3 ಡೇವಿಡ್ ವಾರ್ನರ್

#3 ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವರು 44 ಅಂತಾರಾಷ್ಟ್ರೀಯ ಪಂದ್ಯಗಳಿಂದ 2,374 ರನ್ (748ಟೆಸ್ಟ್, 1388 ಏಕದಿನ ರನ್ ಹಾಗೂ 238 ಟಿ20ಐ ರನ್ ಮಾಡಿದ್ದಾರೆ. 173 ವೈಯಕ್ತಿಕ ಗರಿಷ್ಠ ಮೊತ್ತ. ಐಪಿಎಲ್ ನಲ್ಲೂ ಮಿಂಚಿದ ವಾರ್ನರ್, ಎರಡನೇ ಅತಿ ಹೆಚ್ಚು ರನ್ ಗಳಿಕೆ ಆಟಗಾರರಾಗಿದ್ದಾರೆ.

#4 ಸ್ಟೀವ್ ಸ್ಮಿತ್

#4 ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರು 45 ಪಂದ್ಯಗಳಿಂದ 2,251ರನ್ (924 ಟೆಸ್ಟ್, 1154 ಏಕದಿನ ಹಾಗೂ 173 ಟಿ2ಐ ರನ್) 149 ರನ್ ಇವರ ಗರಿಷ್ಠ ಮೊತ್ತ. ಮುಂದುವರೆಯಲಿದೆ...

#5 ಕೇನ್ ವಿಲಿಯಮ್ಸನ್

#5 ಕೇನ್ ವಿಲಿಯಮ್ಸನ್

2016ರಲ್ಲಿ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಅವರು ಒಟ್ಟಾರೆ 1,726 ರನ್ (753 ಟೆಸ್ಟ್, 590 ಏಕದಿನ ಹಾಗೂ 383 ಟಿ20ಐ). ಹೆಚ್ಚಿನ ರನ್ ಗಳನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೇ ಗಳಿಸಿದರು.

#6 ಕ್ವಿಂಟಾನ್ ಡಿ ಕಾಕ್

#6 ಕ್ವಿಂಟಾನ್ ಡಿ ಕಾಕ್

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟಾನ್ ಡಿ ಕಾಕ್ 1,712ರನ್ (626 ಟೆಸ್ಟ್, 857ಏಕದಿನ ರನ್ ಹಾಗೂ 229 ಟಿ20ಐ) ಗಳಿಸಿದ್ದಾರೆ. 178ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತ.

24ವರ್ಷ ವಯಸ್ಸಿನ ಡಿಕಾಕ್ ಅವರ ಉತ್ತಮ ಪ್ರದರ್ಶನಕ್ಕೆ ಮನ್ನಣೆ ಸಿಕ್ಕಿದ್ದು, ಐಸಿಸಿ ವರ್ಷದ ಏಕದಿನ ಕ್ರಿಕೆಟ್ ಆಟಗಾರ ಎನಿಸಿಕೊಂಡಿದ್ದಾರೆ.

#7 ಜಾನಿ ಬೈರ್ಸ್ಟೊ

#7 ಜಾನಿ ಬೈರ್ಸ್ಟೊ

ಇಂಗ್ಲೆಂಡಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೈರ್ಸ್ಟೊ ಅವರು 27ಟೆಸ್ಟ್ 1668ರನ್ (1470 ಟೆಸ್ಟ್, 198 ಏಕದಿನ)

#8 ಹಶೀಂ ಆಮ್ಲಾ

#8 ಹಶೀಂ ಆಮ್ಲಾ

ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಹಶೀಂ ಅಮ್ಲಾ ಅವರು 30 ಪಂದ್ಯಗಳಿಂದ (681 ಟೆಸ್ಟ್, 511 ಏಕದಿನ, 383 ಟಿ20ಐ). ಹಶೀಂ ಆಮ್ಲಾ ಅವರ ಗರಿಷ್ಠ ಮೊತ್ತ 201 ರನ್.

#9 ದಿನೇಶ್ ಚಂಡಿಮಾಲ್

#9 ದಿನೇಶ್ ಚಂಡಿಮಾಲ್

ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಚಂಡಿಮಾಲ್ ಅವರು 37 ಪಂದ್ಯಗಳಿಂದ 1479ರನ್ (450 ಟೆಸ್ಟ್, 656 ಏಕದಿನ ಹಾಗೂ 373 ಟಿ20)

#10 ಅಲೆಕ್ಸ್ ಹೇಲ್ಸ್

#10 ಅಲೆಕ್ಸ್ ಹೇಲ್ಸ್

ಇಂಗ್ಲೆಂಡಿನ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ ಅವರು 1426ರನ್ (537ಟೆಸ್ಟ್, 743 ಏಕದಿನ ಹಾಗೂ 146 ಟಿ20) ಗಳನ್ನು 32 ಪಂದ್ಯಗಳಿಂದ ಗಳಿಸಿದ್ದಾರೆ. 171 ಇವರ ಗರಿಷ್ಠ ಮೊತ್ತ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's run machine, Virat Kohli, has left England's Mr Consistent, Joe Root, behind to become highest run-getter of 2016.
Please Wait while comments are loading...