ಬೆಂಗಳೂರಿನಲ್ಲಿ ಐಪಿಎಲ್ 2016 ಫೈನಲ್ ಸಮರ?

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 15: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ 9ನೇ ಆವೃತ್ತಿಯ ಅಂತಿಮ ಹಣಾಹಣಿ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರು ಶುಕ್ರವಾರ ಸಂಜೆ ಸುಳಿವು ನೀಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮಹಾರಾಷ್ಟ್ರದಿಂದ ಪಂದ್ಯಗಳು ಸ್ಥಳಾಂತರಗೊಳ್ಳಲಿದ್ದು, ಮುಂಬೈನಲ್ಲಿ ಮೇ29ರಂದು ನಡೆಯಬೇಕಾಗಿದ್ದ ಫೈನಲ್ ಪಂದ್ಯಕ್ಕಾಗಿ ಯಾವ ಮೈದಾನ ಸೂಕ್ತ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಭೆ ನಡೆಸಿದ್ದು, ಶೀಘ್ರದಲ್ಲೇ ಹೊಸ ವೇಳಾಪಟ್ಟಿ ಹೊರ ಬರಲಿದೆ.[ಸಚಿನ್ ಬಗ್ಗೆ ಮಾತಾಡಿದ ಕಾಂಬ್ಳಿಗೆ ಟ್ವೀಟ್ ಟಾಂಗ್!]

ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ ಮೊದಲ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ಆಯೋಜಿಸುವ ಹೊಣೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಗೆ ನೀಡುವ ಸಾಧ್ಯತೆಯಿದೆ. ಎರಡನೇ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿವೆ.

Rajiv Shukla, the IPL chairman

ಬದಲಿ ಮೈದಾನಗಳಾಗಿ ಕಾನ್ಪುರ, ವಿಶಾಖಪಟ್ಟಣಂ, ರಾಯಪುರ್, ಜೈಪುರ್, ಬೆಂಗಳೂರು ಹಾಗೂ ಇಂದೋರ್ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಏಪ್ರಿಲ್ 30ರ ನಂತರದ 13ಕ್ಕೂ ಅಧಿಕ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ಪುಣೆ ಮತ್ತು ಮುಂಬೈ ತಂಡಗಳು ಬರ ನಿರ್ವಹಣೆ ಉದ್ದೇಶಕ್ಕೆ ತಲಾ 5 ಕೋಟಿ ರು. ನೆರವು ನೀಡುತ್ತೇವೆ ಎಂದು ಹೇಳಿವೆ.

ಪುಣೆ ಮತ್ತು ಮುಂಬೈನಲ್ಲಿ ಒಟ್ಟು 17 ಪಂದ್ಯಗಳು ನಡೆಯಬೇಕಾಗಿತ್ತು. 9 ಪಂದ್ಯಗಳು ಪುಣೆಯಲ್ಲಿ ಉಳಿದ 8 ಪಂದ್ಯಗಳು ಮುಂಬೈನಲ್ಲಿ ನಡೆಯಬೇಕಾಗಿತ್ತು. ಈ ಐಪಿಎಲ್ ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳು ಬೇರೆ ಮೈದಾನಗಳಲ್ಲಿ ನಡೆಯಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...