ಏಷ್ಯಾಕಪ್ ಫೈನಲ್‌ಗೂ ಮುನ್ನ ಏನಿದು ಅಸಹ್ಯ..!

Subscribe to Oneindia Kannada

ಮಿರ್ಪುರ, ಮಾರ್ಚ್, 05: ಈ ಬಾಂಗ್ಲಾದೇಶದವರಿಗೆ ಯಾಕೋ ಬುದ್ಧಿ ನೆಟ್ಟಗೆ ಇದ್ದಂತೆ ಕಾಣ್ತಾ ಇಲ್ಲ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಅದಕ್ಕೂ ಮುನ್ನವೆ ಇಂಥ ಹುಚ್ಚಾಟಗಳನ್ನು ಪ್ರದರ್ಶನ ಮಾಡಿದರೆ ಯಾವ ಕ್ರಿಕೆಟ್ ಅಭಿಮಾನಿಯೂ ಸಹಿಸಿಕೊಳ್ಳಲ್ಲ.

ಹಿಂದೆ ಟೀಂ ಇಂಡಿಯಾ ಆಟಗಾರರನ್ನು ಅರ್ಧ ತಲೆ ಮಾಡಿಸಿ ತೋರಿಸಿದ್ದ ಬಾಂಗ್ಲಾ ಮಾಧ್ಯಮಗಳು ಈ ಬಾರಿ ನಾಯಕ ಎಂಎಸ್ ಧೋನಿ ಅವರನ್ನು ಅವಹೇಳನ ಮಾಡಿವೆ. ಇದು ಇಡೀ ಭಾರತಕ್ಕೆ, ಕ್ರಿಕೆಟ್ ಲೋಕಕ್ಕೆ ಮಾಡಿದ ಅವಮಾನ.[ಬಾಂಗ್ಲಾ ಪತ್ರಿಕೆಯಲ್ಲಿ ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು]

ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ ಕೈಯಲ್ಲಿ ಧೋನಿ ರುಂಡವನ್ನು ಹಿಡಿದಂತೆ ಚಿತ್ರಿಸಲಾಗಿದೆ. ಈ ಗ್ರಾಫಿಕ್ ಇಮೇಜ್ ಸಾಮಾಜಿಕ ತಾಣಗಳಲ್ಲೂ ಓಡಾಡುತ್ತಿದೆ. [ಇಂಡೋ-ಬಾಂಗ್ಲಾ ಕಾದಾಟದ ಮುನ್ನೋಟ]

ಮಾರ್ಚ್ 6 ಭಾನುವಾರ ಭಾರತ ಮತ್ತು ಬಾಂಗ್ಲಾದೇಶ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿರುವ ಬೆನ್ನಲ್ಲೇ ಬಾಂಗ್ಲಾ ಮಾಧ್ಯಮಗಳು ಹೊಸದೊಂದು ವಿವಾದ ಹುಟ್ಟಿಹಾಕಿವೆ.(ಚಿತ್ರ-ಟ್ವಿಟ್ಟರ್)

ನಾವು ಕ್ರಿಕೆಟ್ ಆಡುತ್ತೇವೆ

ನಾವು ಕ್ರಿಕೆಟ್ ಆಡುತ್ತೇವೆ

ನಾವು ಕೇವಲ ಕ್ರಿಕೆಟ್ ಆಡುತ್ತೇವೆ. ಇಂಥ ಅಪಹಾಸ್ಯಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಟೀಂ ಇಂಡಿಯಾ ಮ್ಯಾನೇಜರ್ ರವಿ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿನ್ ಅಭಿಮಾನಿ ಮೇಲೂ ಹಲ್ಲೆ ಮಾಡಿದ್ದರು

ಸಚಿನ್ ಅಭಿಮಾನಿ ಮೇಲೂ ಹಲ್ಲೆ ಮಾಡಿದ್ದರು

ಕಳದ ವರ್ಷ ಬಾಂಗ್ಲಾದಲ್ಲಿ ಭಾರತ ಸರಣಿ ಸೋತಾಗ ಬ್ಯಾಟಿಂಗ್ ದಿಗ್ಗಜ ಸಚಿನ್ ಅಭಿಮಾಣಿ ಸುಧೀರ್ ಗೌತಮ್ ಮೇಲೆ ಬಾಂಗ್ಲಾದೇಶದಲ್ಲಿ ಹಲ್ಲೆಯಾಗಿತ್ತು. ಸ್ಟೇಡಿಯಂ ಬಿಟ್ಟು ಹೊರ ನಡೆಯುತ್ತಿದ್ದಂತೆ ಅವರ ಮೇಲೆ ಬಾಂಗ್ಲಾದ ಕಿಡಿಗೇಡಿ ಅಭಿಮಾನಿಗಳು ದಾಳಿ ಮಾಡಿದ್ದರು.

ಕಳೆದ ಬಾರಿ ಸರಣಿ ಸೋತಿದ್ದ ಭಾರತ

ಕಳೆದ ಬಾರಿ ಸರಣಿ ಸೋತಿದ್ದ ಭಾರತ

2015 ರ ಜೂನ್ ತಿಂಗಳಿನಲ್ಲಿ ಢಾಕಾದಲ್ಲಿ ನಡೆದ ಭಾರತ -ಬಾಂಗ್ಲಾ ಸರಣಿಯಲ್ಲಿ ಭಾರತ ಸೋಲು ಅನುಭವಿಸಿತ್ತು, ಮಳೆ ಬಾಧಿತ ಪಂದ್ಯಗಳಲ್ಲಿ ಬಾಂಗ್ಲಾ ಜಯ ದಾಖಲಿಸಿದ್ದ ವೇಳೆ ಅಲ್ಲಿನ ಮಾಧ್ಯಮಗಳು ಟೀಂ ಇಂಡಿಯಾ ಆಟಗಾರರನ್ನು ಮನಬಂದಂತೆ ಚಿತ್ರಿಸಿದ್ದರು.

ಫೈನಲ್ ಗೆ ಸಜ್ಜು

ಫೈನಲ್ ಗೆ ಸಜ್ಜು

ಏಷ್ಯಾ ಕಪ್ ಟಿ-20 ಪಂದ್ಯಾವಳಿ ಫೈನಲ್ ಶೇರ್ ಬಾಂಗ್ಲಾ ಸ್ಟೆಡಿಯಂ ನಲ್ಲಿ ಭಾನುವಾರ ಸಂಜೆ ನಡೆಯಲಿದೆ. ಅಜೇಯವಾಗಿ ಫೈನಲ್ ಪ್ರವೇಶಿಸಿದ ಭಾರತ ಮತ್ತು ಭಾರತದ ವಿರುದ್ಧವೇ ಸೋಲು ಕಂಡ ಬಾಂಗ್ಲಾ ಮುಖಾಮುಖಿಯಾಗಲಿವೆ.

ನಾವು ಏನು ಕಡಿಮೆ ಇಲ್ಲ

ಅತ್ತ ಬಾಂಗ್ಲಾದವರು ಇಲ್ಲ ಸಲ್ಲದ ಫೋಟೋಗಳನ್ನು ಗ್ರಾಫಿಕ್ ಮಾಡಿ ಬಿಡುತ್ತಿದ್ದರೇ ನಮ್ಮವರು ತಿರುಮಂತ್ರ ಹಾಕಿದ್ದಾರೆ.

ಶಿಕ್ಷಣ ಯಾಕೆ ಬೇಕು?

ಬೇರೆ ದೇಶ ಮತ್ತು ಆಟಗಾರರ ಮೇಲೆ ಅಪಹಾಸ್ಯ ಮಾಡುವ ಇವರಿಗೆ ನಿಜಕ್ಕೂ ಉತ್ತಮ ಶಿಕ್ಷಣ ಬೇಕಾಗಿದೆ.

ಅವರಿರುವುದು ಹೀಗೆ

ನಿಜವಾಗಿ ಬಾಂಗ್ಲಾದೇಶದವರು ತಾವು ಬಲಿಷ್ಠ ಎಂದು ಅಂದುಕೊಂಡಿದ್ದಾರೆ. ಆದರೆ ಅವರು ನಿಜಕ್ಕೂ ಇರುವುದು ಹೇಗೆ? ಚಿತ್ರ ನೋಡಿ

ಇದು ನಮ್ಮ ಉತ್ತರ

ಭಾರತೀಯರನ್ನು ಅವಹೇಳನ ಮಾಡಿದರೆ ಸುಮ್ಮನೆ ಬಿಡುತ್ತೇವೆಯಾ? ಇದು ನಮ್ಮ ಉತ್ತರ

ರವಿ ಶಾಸ್ತ್ರಿ ಪ್ರತಿಕ್ರಿಯೆ ಕೇಳಿ

ಟೀಂ ಇಂಡಿಯಾ ಆಟಗಾರನ್ನು ಅಪಮಾನ ಮಾಡಿದ್ದಕ್ಕೆ ರವಿ ಶಾಸ್ತ್ರಿ ಕೊಟ್ಟ ಉತ್ತರ ಕೇಳಿಕೊಂಡು ಬನ್ನಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India and Bangladesh gear up for the mega clash for the Asia Cup title on Sunday, march 6th extremely offensive and disgusting pictures of Indian skipper MS Dhoni have gone viral on the social media. The image shows Bangladesh pacer Taskin Ahmed holding Dhoni's chopped head.
Please Wait while comments are loading...