ಟೀಂ ಇಂಡಿಯಾಕ್ಕೆ ಇನ್ನು ಮುಂದೆ 'ಗೋಡೆ' ಕಾವಲು?

Subscribe to Oneindia Kannada

ನವದೆಹಲಿ, ಏಪ್ರಿಲ್, 03: ಭಾರತ ಕ್ರಿಕೆಟ್ ತಂಡವನ್ನು ಇನ್ನು ಮುಂದೆ "ಗೋಡೆ" ಕಾಪಾಡಲಿದೆ. ಹೌದು ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಹೊಸ ಕೋಚ್ ಆಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಬಿಸಿಸಿಐ ರಾಹುಲ್ ದ್ರಾವಿಡ್ ನೇಮಕ ಮಾಡಿಕೊಳ್ಳಲು ಒಲವು ತೋರಿದೆ. ಇನ್ನೊಂದೆಡೆ ಸಲಹಾ ಸಮಿತಿಯಲ್ಲಿರುವ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸಹ ಗೋಡೆ ಪರ ಬ್ಯಾಟ್ ಬೀಸುತ್ತಿದ್ದಾರೆ.[ಟೀಂ ಇಂಡಿಯಾ ಕೋಚ್ ಆಗಲು ಸಿದ್ಧ ಎಂದ ಲೆಜೆಂಡ್ ಸ್ಪಿನ್ನರ್]

rahul dravid

ರಾಹುಲ್ ದ್ರಾವಿಡ್ ಇಂಡಿಯಾ ಎ ಮತ್ತು ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 19 ವಯೋಮಿತಿ ಒಳಗಿನ ದ್ರಾವಿಡ್ ಶಿಷ್ಯರು ವಿಶ್ವಕಪ್ ಫೈನಲ್‌ಗೆ ತಲುಪಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದ್ದರು.[ಏಪ್ರಿಲ್ 8ಕ್ಕೆ ಗ್ಲಾಮರ್ ಸ್ಪರ್ಶದೊಂದಿಗೆ ಐಪಿಎಲ್ 9ಕ್ಕೆ ಚಾಲನೆ]

ಒಂದು ವೇಳೆ ರಾಹುಲ್‌ಗೆ ಈ ಸ್ಥಾನ ದೊರೆತರೆ, 2019ರಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ವರೆಗೆ ಕೋಚ್ ಆಗಿ ಮುಂದುವರಿಯಲಿದ್ದಾರೆ. ಏಪ್ರಿಲ್ 5 ರಂದು ಸಲಹಾ ಸಮಿತಿ ಸಭೆ ಸೇರಲಿದ್ದು ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian cricket board's advisory committee, comprising Sachin Tendulkar, Sourav Ganguly and VVS Laxman, has approached batting legend Rahul Dravid - in charge of India A and India U 19 squads for almost a year now - to enquire whether he would be interested in taking over as chief coach of the senior team.
Please Wait while comments are loading...