ವೆಸ್ಟ್ ಇಂಡೀಸ್ ಬೋರ್ಡ್ ದಂಡ ಮನ್ನಾ ಮಾಡಿದ ಬಿಸಿಸಿಐ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ. ಏಪ್ರಿಲ್ 22 : ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಮೇಲೆ ಮಮತೆ ಉಕ್ಕಿ ಹರಿಯುತ್ತಿದೆ. 2014ರಲ್ಲಿ ಡಬ್ಲ್ಯೂಐಸಿಬಿ ಮೇಲೆ ವಿಧಿಸಿದ್ದ 41.97 ಮಿಲಿಯನ್ ಯುಎಸ್ ಡಾಲರ್ ದಂಡವನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಸಿಸಿಐ ಚೇರ್ಮನ್ ಶಶಾಂಕ್ ಮನೋಹರ್ ಹೇಳಿದ್ದಾರೆ

ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹಾಗೂ ಆಟಗಾರರ ನಡುವಿನ ಭಿನ್ನಾಭಿಪ್ರಯಗಳಿಂದ 2014 ರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯನ್ನು ಅರ್ಧದಲ್ಲಿಯೇ ಬಿಟ್ಟು ಕೆರೆಬಿಯನ್ಸ್ ಆಟಗಾರರು ತಮ್ಮ ದೇಶಕ್ಕೆ ತೆರಳಿದ್ದರು. ಇದರಿಂದ ಕೆಂಡಾಮಂಡಲವಾಗಿದ್ದ ಬಿಸಿಸಿಐ ನಿಮ್ಮಬ್ಬರ ನಡುವೆ ನಮಗೆ 41.97 ಮಿಲಿಯನ್ ಯುಎಸ್ ಡಾಲರ್ ನಷ್ಟವಾಗಿದೆ ಅದಕ್ಕೆ ಪರಿಹಾರವನ್ನು ನೀಡಬೇಕು ಎಂದು ಡಬ್ಲ್ಯೂಐಸಿಬಿಗೆ ಒತ್ತಡ ಹಾಕಿತ್ತು.

BCCI waives off $41.97 million claim on WICB, confirms Shashank Manohar

41.97 ಮಿಲಿಯನ್ ಯುಎಸ್ ಡಾಲರ್ ಬಗ್ಗೆ ಮಾತುಕತೆ ನಡೆಸಿದ್ದ ಬಿಸಿಸಿಐ ಹಾಗೂ ಪಿಐಸಿಬಿ, ಹಣ ನೀಡದೆ ಅದೇ ಸರಣಿಯನ್ನು ಮುಂದಿನ 2017 ರಲ್ಲಿ ಆಡಿ ತೀರಿಸುವ ನಿರ್ಧಾರಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಬಂದಿದೆ. ಇದಕ್ಕೆ ಬಿಸಿಸಿಐ ಸಹ ಒಪ್ಪಿಕೊಂಡಿದೆ ಇದರಿಂದ 41.97 ಮಿಲಿಯನ್ ಯುಎಸ್ ಡಾಲರ್ ಮಾಫಿ ಮಾಡಲಾಗುತ್ತಿದೆ ಅಧ್ಯಕ್ಷ ಮನೋಹರ್ ತಿಳಿಸಿದ್ದಾರೆ.

ಇದರಿಂದ ಎರಡು ದೇಶದ ಕ್ರಿಕೆಟ್ ಬೋರ್ಡ್ ಗೊಂದಲಕ್ಕೆ ತೆರೆಬಿದ್ದಿದ್ದು. ವೆಸ್ಟ್ ಇಂಡೀಸ್ ತಂಡ ಭಾರತ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದೆ. ಸರಣಿಯ ವೇಳಾ ಪಟ್ಟಿಯನ್ನು ಮುಂದಿನ ತಿಂಗಳಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Board of Control for Cricket in India's (BCCI) president Shashank Manohar stated that the board has decided to waive off the financial penalty of USD 41.97 million that was imposed on the West Indies Cricket Board (WICB) for pulling out midway during their 2014 series against India
Please Wait while comments are loading...