ಲಾಭದಾಯಕ ಹುದ್ದೆ ತೊರೆಯುವಂತೆ ಕೊಹ್ಲಿಗೆ ಬಿಸಿಸಿಐನಿಂದ ಸೂಚನೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 28: ಲಾಭದಾಯಕ ಹುದ್ದೆ ಅಥವಾ ಎರಡೆರಡು ಕಡೆ ಹುದ್ದೆ ನಿಭಾಯಿಸುತ್ತಿರುವ ಆಟಗಾರರು, ಕೋಚ್, ಅಧಿಕಾರಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಾಟಿ ಬೀಸಲು ಶುರು ಮಾಡಿದೆ. ವಿರಾಟ್ ಕೊಹ್ಲಿ ಅವರಿಗೆ ಸಾರ್ವಜನಿಕ ವಲಯದ ಒಎನ್ಜಿಸಿಯಲ್ಲಿನ ಹುದ್ದೆಯನ್ನು ತೊರೆಯುವಂತೆ ಸೂಚಿಸಲಾಗಿದೆ.

ಈ ನಿಯಮ ಸಾರ್ವಜನಿಕ ವಲಯದಲ್ಲಿ ಹುದ್ದೆ ಪಡೆದಿರುವ ಇತರೆ ಆಟಗಾರರಿಗೂ ಅನ್ವಯವಾಗಲಿದೆ. ಈ ಹಿಂದೆ ಇದೇ ನಿಯಮ ಮುಂದಿಟ್ಟುಕೊಂಡು ಸುನಿಲ್ ಗವಾಸ್ಕಾರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅವರನ್ನು ಪ್ರಶ್ನಿಸಲಾಗಿತ್ತು.

BCCI urges Virat Kohli to quit ONGC job

ಈಗ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರಿಗೆ ಬಿಸಿಸಿಐ ಸೂಚನೆ ಮಾರಕವಾಗಲಿದೆ. ಹಾಗೆ ನೋಡಿದರೆ, ಕೊಹ್ಲಿಯಂಥ ಆಟಗಾರರಿಗೆ ಸಾರ್ವಜನಿಕ ವಲಯದ ಹುದ್ದೆಯನ್ನು ತೊರೆಯುವುದು ಕಷ್ಟದ ಕೆಲಸವೇನಲ್ಲ. ಆದರೆ, ಗೌರವ ಮಣ್ಣು ಪಾಲಾಗುತ್ತದೆ.

ವಿರಾಟ್‌ ಕೊಹ್ಲಿ,ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರು ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ(ಒಎನ್ ಜಿಸಿ)ಯಲ್ಲಿ ಮ್ಯಾನೇಜರ್ ಸ್ತರದ ಹುದ್ದೆಯಲ್ಲಿದ್ದಾರೆ.

ಭಾರತ ತಂಡ ಆಟಗಾರರಿಗೆ ರೈಲ್ವೆ, ಒಎನ್ಜಿಸಿ, ಏರ್ ಇಂಡಿಯಾ, ಎಚ್ ಪಿಸಿಎಲ್, ಇಂಡಿಯನ್ ಆಯಿಲ್, ಎಫ್ ಸಿಎಲ್, ಬಿಎಸ್ಎನ್ಎಲ್, ಆಡಿಟ್ ಹಾಗೂ ಎಕ್ಸೆಸ್ ಹಾಗೂ ಆದಾಯ ತೆರಿಗೆ ಇಲಾಖೆಗಳಲ್ಲಿ ಗೌರವಾರ್ಥ ಹುದ್ದೆಗಳನ್ನು ನೀಡಲಾಗುತ್ತದೆ. ಕ್ರಿಕೆಟ್ ವೃತ್ತಿ ಬದುಕು ಅಂತ್ಯಗೊಂಡ ಬಳಿಕವೂ ಆಟಗಾರರು ಈ ಹುದ್ದೆಯಲ್ಲಿ ಮುಂದುವರೆಯಬಹುದಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗುತ್ತಿಗೆ ಹೊಂದಿರುವ ಆಟಗಾರರು, ಸಿಬ್ಬಂದಿಗಳು ಟೀಂ ಇಂಡಿಯಾದಲ್ಲೂ ಹುದ್ದೆ ಹೊಂದಿರುವುದಕ್ಕೆ ಆಕ್ಷೇಪ ಕೇಳಿ ಬಂದಿತ್ತು. ಈಗ ಆಟಗಾರರ ಲಾಭದಾಯಕ ಹುದ್ದೆ ಮೇಲೆ ಬಿಸಿಸಿಐ ಕಣ್ಣು ಹಾಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to a report in The Hindustan Times, the BCCI has urged the Indian captain to quit his job from the post of a manager at Oil and Natural Gas Corporation Ltd (ONGC).
Please Wait while comments are loading...