ಹಾಂಕಾಂಗ್ ಟಿ-20: ಯೂಸೂಫ್ ಪಠಾಣ್ ಆಸೆಗೆ ತಣ್ಣೀರೆರೆಚಿದ ಬಿಸಿಸಿಐ

Posted By: Ramesh
Subscribe to Oneindia Kannada
ಮುಂಬೈ, ಫೆಬ್ರವರಿ .16 : ಟೀಂ ಇಂಡಿಯಾ ಕ್ರಿಕೆಟ್ ತಂಡದ ಆಲ್‌ ರೌಂಡರ್ ಯೂಸೂಫ್ ಪಠಾಣ್ ಆಸೆಗೆ ಬಿಸಿಸಿಐ ತಣ್ಣೀರೆರೆಚಿದೆ.

ಹಾಂಕಾಂಗ್ ಟಿ-20 ಲೀಗ್‌ ನಲ್ಲಿ ಆಡಲು ಈ ಹಿಂದೆ ಅವರಿಗೆ ನೀಡಿದ್ದ ನಿರಾಕ್ಷೇಪಣಾ (ಎನ್‌ ಒಸಿ) ಪತ್ರವನ್ನು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹಿಂಪಡೆದುಕೊಂಡಿದೆ.[ಹಾಂಕಾಂಗ್ ಟ್ವೆಂಟಿ-20 ಕ್ರಿಕೆಟ್ ಲೀಗ್ಗೆ ಯುಸೂಫ್ ಪಠಾಣ್ ಎಂಟ್ರಿ]

ಇದರಿಂದ ಹಾಂಕಾಂಗ್ ಟಿ-20 ಲೀಗ್‌ ನಲ್ಲಿ ಆಡಲು ಕನಸು ಕಂಡಿದ್ದ ಯೂಸೂಫ್ ಪಠಾಣ್ ಕನಸು ನುಚ್ಚು ನೂರಾಗಿದೆ. ಕಳೆದ ಕೆಲ ದಿನಗಳ ಹಿಂದೆ ಹಾಂಕಾಂಗ್ ಟಿ-20 ಲೀಗ್‌ ನಲ್ಲಿ ಆಡಲು ಪಠಾಣ್ ಗೆ ಒಪ್ಪಿಗೆ ಪತ್ರ ನೀಡಿತ್ತು.

 BCCI taken back NOC Yusuf Pathan to play in Hong Kong T20

ಆದರೆ, ಈಗ ಯೂಸಫ್ ಪಠಾಣ್ ಅವರಿಗೆ 50 ಓವರ್ ನ ಹಾಂಕಾಂಗ್ ಟೂರ್ನಿಗೆ ಆಡಲು ಅವಕಾಶ ನೀಡಲಾಗಿತ್ತು, ಟಿ20 ಲೀಗ್ ಗೆ ಒಪ್ಪಿಗೆ ನೀಡಿಲ್ಲ ಎಂದು ಬರೋಡ ಕ್ರಿಕೆಟ್ ಮಂಡಳಿ (ಬಿಸಿಎ)ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಟೀಂ ಇಂಡಿಯಾ ಕ್ರಿಕೆಟ್ ತಂಡದ ಕೆಲ ಆಟಗಾರರು ತಾವೂ ವಿದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಲು ಆಸಕ್ತಿ ವಹಿಸಿ ಬಿಸಿಸಿಐಗೆ ಪತ್ರ ಬರೆದಿರುವ ಕಾರಣಕ್ಕಾಗಿ ಪಠಾಣ್ ಅವರಿಗೆ ನೀಡಿದ ಎನ್‌ ಒಸಿ ಪತ್ರವನ್ನು ಬಿಸಿಸಿಐ ಹಿಂಡೆದುಕೊಂಡಿದೆ ಎಂದು ಹೇಳಲಾಗುತ್ತಿದ್ದು ಇದಕ್ಕೆ ಬಿಸಿಸಿ ನಿಖರ ಮಾಹಿತಿ ನೀಡಿಲ್ಲ.

ಕಳೆದ ವರ್ಷ ಪಠಾಣ್ ಅವರು 50 ಓವರ್ ಗಳ ರ್ಟೂನಿಯ ಬಾಂಗ್ಲಾದೇಶದ ಅಭಾನಿ ಢಾಕಾ ಲೀಗ್ ನಲ್ಲಿ ಆಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India’s (BCCI) U-turn on not to issue the No Objection Certificate (NOC) to Yusuf Pathan despite agreeing to do so earlier has not just baffled the former India big-hitter but has also left the Baroda Cricket Association (BCA) stumped.
Please Wait while comments are loading...