ಟೀಂ ಇಂಡಿಯಾಕ್ಕೆ 'ಹಿಂದಿ' ಭಾಷೆ ಬಲ್ಲ ಕೋಚ್ ಬೇಕಂತೆ!

Posted By:
Subscribe to Oneindia Kannada

ಮುಂಬೈ, ಜೂನ್ 02: ಬಹಳ ದಿನಗಳಿಂದ ಖಾಲಿ ಬಿದ್ದಿರುವ ಭಾರತ ತಂಡದ ಕೋಚ್ ಹಾಗೂ ಮೂರು ಅಸಿಸ್ಟೆಂಟ್ ಕೋಚ್ ಹುದ್ದೆಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಅಹ್ವಾನಿಸಿರುವ ಸುದ್ದಿ ಒನ್ ಇಂಡಿಯಾದಲ್ಲಿ ಓದಿರಬಹುದು. ಈಗ ಅರ್ಜಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. 'ಹಿಂದಿ ಭಾಷೆ' ಗೊತ್ತಿರುವವರು ಮಾತ್ರ ಕೋಚ್ ಹುದ್ದೆಗೆ ಅರ್ಜಿ ಹಾಕಬಹುದು ಎಂದು ತಿದ್ದುಪಡಿ ಮಾಡಿದೆ. ಈ ಮೂಲಕ ವಿದೇಶಿ ಕೋಚ್ ನೇಮಕಕ್ಕೆ ಫುಲ್ ಸ್ಟಾಪ್ ಇಡಲಾಗಿದೆ.

ಅರ್ಜಿ ಸಲ್ಲಿಸಲು ಜೂನ್ 10 ಅಂತಿಮ ದಿನಾಂಕವಾಗಿದೆ.ಅರ್ಜಿಗಳು ಬಂದ ನಂತರ ಅವುಗಳನ್ನು ಪರಿಶೀಲಿಸಿ ಸೂಕ್ತ ವ್ಯಕ್ತಿಯನ್ನು ಇನ್ನೆರಡು ತಿಂಗಳಲ್ಲಿ ಟೀಂ ಇಂಡಿಯಾದ ಕೋಚ್ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ)ನ ನೂತನ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ.[ಕೋಚ್ ಆಗಲು ರಾಹುಲ್ ದ್ರಾವಿಡ್ ಸೂಕ್ತ: ರಿಕಿ ಪಾಂಟಿಂಗ್]

BCCI seeking 'Hindi speaking' head coach for Indian team

ಹಿಂದಿ ಭಾಷೆ ಗೊತ್ತಿದ್ದರೆ ಆಟಗಾರರ ಜೊತೆ ಸುಲಭವಾಗಿ ಸಂಭಾಷಿಸಬಹುದು ಹಾಗೂ ತರಬೇತಿ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಆಟಗಾರರು ಕೂಡಾ ಕಡ್ಡಾಯವಾಗಿ ಹಿಂದಿ ಕಲಿಯಬೇಕು ಎಂಬ ಅಘೋಷಿತ ಸೂಚನೆ ನೀಡುತ್ತಿದ್ದಾರೆ.[ಗಂಗೂಲಿ, ಬಿಸಿಸಿಐ ಅಧ್ಯಕ್ಷ ಹುದ್ದೆ ಬೇಡವೆನ್ನಲು ಕಾರಣವಿದೆ!]

ಭಾರತ ತಂಡದ ಮಾಜಿ ಆಟಗಾರರು ಹಾಗೂ ಇತರೆ ವಿದೇಶಿ ಆಟಗಾರರು ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ 'ದಿ ವಾಲ್' ರಾಹುಲ್ ದ್ರಾವಿಡ್ ಅವರೇ ಸೂಕ್ತ ವ್ಯಕ್ತಿ ಎಂದು ಬಹಳಷ್ಟು ಕ್ರಿಕೆಟಿಗರು ದ್ರಾವಿಡ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಗ ರವಿಶಾಸ್ತ್ರಿ ಹಾಗೂ ದ್ರಾವಿಡ್ ಪೈಕಿ ಇಬ್ಬರಲ್ಲಿ ಒಬ್ಬರು ಕೋಚ್ ಆಗಬಹುದು ಎಂಬ ಸಾಧ್ಯತೆ ಕಂಡು ಬಂದಿದೆ.

ವಿರಾಟ್ ಕೊಹ್ಲಿ ಅವರು ಆರ್ ಸಿಬಿಯ ಕೋಚ್ ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ ಅವರ ಪರವಾಗಿ ಬ್ಯಾಟ್ ಬೀಸಿದ್ದರು.ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್, ಜೆಸ್ಟಿನ್ ಲ್ಯಾಂಗರ್ ಅವರ ಹೆಸರುಗಳು ಸಹ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕೇಳಿ ಬಂದಿತ್ತು.[ಬಿಸಿಸಿಐ ಅಧ್ಯಕ್ಷರಾಗಿ ಅನುರಾಗ್ ಅವಿರೋಧ ಆಯ್ಕೆ!]

ಡಂಕನ್ ಫ್ಲೆಚ್ಚರ್ ಅವರ ಅವಧಿ ಮುಗಿದ ನಂತರ ಕಳೆದ 2015 ವಿಶ್ವ ಕಪ್ ನಿಂದ ಟೀಂ ಇಂಡಿಯಾದ ಕೋಚ್ ಸ್ಥಾನ ಖಾಲಿ ಬಿದ್ದಿದ್ದು. ಇದುವರೆಗೂ ಯಾರನ್ನು ಸಹ ಆಯ್ಕೆ ಮಾಡದೆ ರವಿಶಾಸ್ತ್ರಿ ಅವರು ಕೋಚ್ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ.

ಜೂನ್ ನಲ್ಲಿ ಜಿಂಬಾಬ್ಬೆ ಪ್ರವಾಸ ಮಾಡಲಿರುವ ಭಾರತ ತಂಡ 3 ಏಕದಿನ ಕ್ರಿಕೆಟ್ ಹಾಗೂ 2 ಟ್ವೆಂಟಿ20 ಪಂದ್ಯಗಳನ್ನಾಡಲಿದ್ದು, ನಂತರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ.

ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಒಳಗೊಂಡ ಉನ್ನತ ಸಮಿತಿ ನೀಡುವ ಶಿಫಾರಸ್ಸಿನ ಮೇಲೆ ಬಿಸಿಸಿಐ ಮುಂದಿನ ಕೋಚ್ ಆಯ್ಕೆ ಮಾಡಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BCCI today (June 1) finally invited applications for the head coach of the Indian cricket team with the circular comprising a nine-point criteria including one stating a 'desire' to have a Hindi speaking coach.
Please Wait while comments are loading...