ಬಿಸಿಸಿಐಗೆ ಸಾವಿರಾರು ಕೋಟಿ ಆದಾಯ ನಷ್ಟದ ಭೀತಿ!

Posted By:
Subscribe to Oneindia Kannada

ನವದೆಹಲಿ, ಫೆ. 11: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ಆದಾಯ ನಷ್ಟದ ಭೀತಿ ಎದುರಾಗಿದೆ.

ಒಂದು ವೇಳೆ ನ್ಯಾಯಮೂರ್ತಿ ಆರ್​ಎಂ ಲೋಧಾ ನೇತೃತ್ವದ ಸಮಿತಿಯ ವರದಿಯಲ್ಲಿರುವ ಶಿಫಾರಸುಗಳು ಜಾರಿಗೆ ಬಂದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂಪಾದಿಸಿರುವ ಸಾವಿರಾರು ಕೋಟಿ ರು ಮೊತ್ತ ನೂರಾರು ಕೋಟಿ ರುಗೆ ಇಳಿಯಲಿದೆ.

1,600 ಕೋಟಿ ರೂ. ನಷ್ಟ?: ಬಿಸಿಸಿಐ ಲೆಕ್ಕಪತ್ರದ ಪ್ರಕಾರ ಸದ್ಯದ ಆದಾಯ ಸುಮಾರು 2 ಸಾವಿರ ಕೋಟಿ ರು ನಷ್ಟಿದೆ. ಪಂದ್ಯಗಳ ಟಿವಿ ನೇರಪ್ರಸಾರ ಹಕ್ಕು ಮತ್ತು ಜಾಹೀರಾತುಗಳಿಂದಲೇ ಆದಾಯ ಸಂಪಾದನೆ ಹೆಚ್ಚಾಗಿ ಬರುತ್ತಿದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ಕೇವಲ ಬಿಡುವಿನ ಸಮಯದಲ್ಲಷ್ಟೇ ಜಾಹೀರಾತು ಪ್ರಸಾರವಾಗಬೇಕು ಮತ್ತು ಓವರ್ ನಡುವೆ ಜಾಹೀರಾತು ಪ್ರಸಾರವಾಗಬಾರದು ಎಂಬ ಶಿಫಾರಸನ್ನು ನ್ಯಾ. ಲೋಧಾ ಸಮಿತಿ ನೀಡಿದೆ. ಈ ನಿಯಮ ಜಾರಿಗೊಂಡರೆ ಬಿಸಿಸಿಐನ ಈ ಆದಾಯ ಕೇವಲ 400 ಕೋಟಿ ರೂ.ಗೆ ಕುಸಿಯಲಿದೆ.

BCCI revenue may dip from Rs 2,000 crore to 400 crore

ಭಾರತದಲ್ಲಿ ನಡೆಯಲಿರುವ ಪಂದ್ಯಗಳ ನೇರಪ್ರಸಾರ ಹಕ್ಕು ಸದ್ಯಕ್ಕೆ ಸ್ಟಾರ್​ಸ್ಪೋರ್ಟ್ಸ್ ಸಂಸ್ಥೆ ಕೈಲಿದೆ. ಪ್ರತಿ ಪಂದ್ಯಕ್ಕೆ 43 ಕೋಟಿ ರು.ಗಳನ್ನು ಬಿಸಿಸಿಐಗೆ ಪಾವತಿಸುತ್ತದೆ. ಆದರೆ ಜಾಹೀರಾತುಗಳಿಗೆ ಕಡಿವಾಣ ಬಿದ್ದರೆ ಅದು ಪ್ರತಿ ಪಂದ್ಯಕ್ಕೆ ಕೇವಲ 8-10 ಕೋಟಿ ರೂ. ನೀಡಬೇಕಾಗುತ್ತದೆ.

ಲೋಧಾ ಸಮಿತಿ ವರದಿ ಅನುಷ್ಠಾನಗೊಳಿಸುವ ಬಗ್ಗೆ ರ್ಚಚಿಸಲು ಫೆ. 19ರಂದು ಮುಂಬೈನಲ್ಲಿ ವಿಶೇಷ ಮಹಾಸಭೆಯನ್ನು (ಎಸ್​ಜಿಎಂ) ಬಿಸಿಸಿಐ ನಿಗದಿಗೊಳಿಸಿದೆ. ಆದಾಯ ನಷ್ಟದ ಜೊತೆಗೆ ಸಚಿವರು, ಸರ್ಕಾರಿ ನೌಕರರು ಕ್ರಿಕೆಟ್ ಆಡಳಿತಾಧಿಕಾರಿಗಳಾಗಬಾರದು, 70 ವಯೋಮಿತಿ ಮೀರಬಾರದು ಎಂಬ ನಿಯಮದ ಬಗ್ಗೆ ಕೂಡಾ ವ್ಯಾಪಕ ಚರ್ಚೆ ನಡೆಯಲಿದೆ,

ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್​ನಿಂದ ಬರುವ ಭಾರಿ ಆದಾಯವನ್ನು ಬಿಸಿಸಿಐ ಜೂನಿಯರ್ ಕ್ರಿಕೆಟ್ ಅಭಿವೃದ್ಧಿಗೆ ವ್ಯಯಿಸುತ್ತಿದೆ.

ಬಿಸಿಸಿಐ ಸುಮಾರು 750 ಕೋಟಿ ರೂ.ಗಳನ್ನು ರಾಜ್ಯ ಸಂಸ್ಥೆಗಳಿಗೆ ವಿತರಿಸುತ್ತಿದ್ದರೆ, 400-450 ಕೋಟಿ ರೂ.ಗಳನ್ನು 16 ವಯೋಮಿತಿಯಿಂದ ರಾಷ್ಟ್ರೀಯ ತಂಡದವರೆಗೆ ವಿವಿಧ ತಂಡಗಳ ಆಟಗಾರರಿಗೆ ಪಂದ್ಯ ಸಂಭಾವನೆ ಮತ್ತು ವಿಶೇಷ ಭತ್ಯೆಯಾಗಿ ನೀಡುತ್ತಿದೆ. ಜತೆಗೆ ಮಾಜಿ ಪ್ರಥಮ ದರ್ಜೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಒಟ್ಟಾರೆ 25 ಕೋಟಿ ರೂ.ಗಳನ್ನು ನಿವೃತ್ತಿ ವೇತನ ರೂಪದಲ್ಲಿ ನೀಡುತ್ತದೆ. ಲೋಧಾ ಸಮಿತಿ ವರದಿ ಜಾರಿಯಾದರೆ ಈ ವೆಚ್ಚಗಳಿಗೆ ಕಡಿವಾಣ ಬೀಳಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Board of Control for Cricket in India (BCCI) is set to suffer a financial loss to the tune of Rs 1,600 crore if Lodha Panel's recommendations on curtailing the advertisement breaks during the matches is implemented.
Please Wait while comments are loading...