ಇಂಡಿಯನ್ ಪ್ರೀಮಿಯರ್ ಲೀಗ್ ಬ್ರ್ಯಾಂಡ್ ಮೌಲ್ಯ ಬಹಿರಂಗ

Posted By:
Subscribe to Oneindia Kannada

ಮುಂಬೈ, ಸೆ. 24: ಅತ್ಯಂತ ಶ್ರೀಮಂತ ಕ್ರೀಡಾ ಲೀಗ್ ಗಳಲ್ಲಿ ಒಂದೆನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾರುಕಟ್ಟೆ ಮೌಲ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಹಿರಂಗಪಡಿಸಿದೆ. ಐಪಿಎಲ್ ಮೌಲ್ಯ 27 ಸಾವಿರ ಕೋಟಿ ರು ಬ್ರ್ಯಾಂಡ್ ಮೌಲ್ಯ ಹೊಂದಿದೆ.

ಬಿಸಿಸಿಐನ 2015-16ರ ಸಾಲಿನ ವಾರ್ಷಿಕ ಸಭೆ(ಎಜಿಎಂ) ನಂತರ ನೀಡಿದ ವರದಿಯ ಪ್ರಕಾರ, ಐಪಿಎಲ್ ಟೂರ್ನಿಯ ಒಟ್ಟು ಬ್ರಾಂಡ್ ಮೌಲ್ಯ 27 ಸಾವಿರ ಕೋಟಿ ರೂಪಾಯಿ (4.5 ಬಿಲಿಯನ್ ಡಾಲರ್ ) ಆಗಿದೆ. ಅಮೆರಿಕ ಮೂಲದ ಜಾಗತಿಕ ಮೌಲ್ಯಮಾಪನ ಹಾಗೂ ಕಾರ್ಪೊರೇಟ್ ವಾಣಿಜ್ಯ ಸಲಹಾ ಸಂಸ್ಥೆ ಡಫ್ ಅಂಡ್ ಫೆಲ್ಫ್ ನೀಡಿದ ವರದಿ ಆಧಾರಿಸಿ ಈ ಅಂಕಿ ಅಂಶ ಪ್ರಕಟಿಸಲಾಗಿದೆ.

BCCI reveals IPL brand value $4.5 billion

ಜಿಡಿಪಿಗೆ ಎಷ್ಟು?: ಮ್ಯಾನೇಜ್ಮೆಂಟ್ ಸಂಸ್ಥೆ ಕೆಪಿಎಂಜಿ ಪ್ರಕಾರ ಐಪಿಎಲ್ 2015 ದೇಶದ ತಲಾ ಆದಾಯ (Gross Domestic Product) ಗೆ 1,150 ಕೋಟಿ ರು ಕೊಡುಗೆ ನೀಡಿದೆ. 2008ರಲ್ಲಿ ಆರಂಭವಾದ ಐಪಿಎಲ್, ಕ್ರೀಡಾಲೋಕದ ಅತ್ಯಂತ ತ್ವರಿತಗತಿಯಿಂದ ಬೆಳೆಯುತ್ತಿರುವ ಲೀಗ್ ಎನಿಸಿಕೊಂಡಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಆದ ಐಪಿಎಲ್ ಪಂದ್ಯ ಸೇರಿದಂತೆ ಈ ವರ್ಷದ ಐಪಿಎಲ್ ವೀಕ್ಷಣೆಯಿಂದ 102 ಕೋಟಿ ರು ಬಂದಿದೆ ಎಂದು ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಹೇಳಿದೆ. ಶೇ 52ರಷ್ಟು ವೀಕ್ಷಕರು ಟಿವಿ ಮೂಲಕ ಐಪಿಎಲ್ ನೋಡಿದ್ದು 361 ಮಿಲಿಯನ್ ವೀಕ್ಷಕರನ್ನು ಕಂಡಿದೆ. 1,543,655 ವೀಕ್ಷಕರು ಕ್ರೀಡಾಂಗಣಕ್ಕೆ ಹೋದರೆ, 4,40,000 ಮಂದಿ ಫ್ಯಾನ್ ಪಾರ್ಕ್ ಗಳಲ್ಲಿ ಪಂದ್ಯ ನೋಡಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BCCI revealed the figures in its annual report for 2015-16, disclosed at the AGM 2016. IPL 2015 contributed Rs 1,150 crore to India's GDP (Gross Domestic Product).
Please Wait while comments are loading...