ಭಾರತ-ನ್ಯೂಜಿಲೆಂಡ್ ಪಂದ್ಯ ವೇಳೆ ಬದಲಾಯಿಸಿದ ಕರ್ವಾ ಚೌತ್

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 08 : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಕ್ರಿಕೆಟ್ ಪಂದ್ಯ ಒಂದು ದಿನ ಮುಂದೂಡಲಾಗಿದೆ. ಅ.19 ಉತ್ತರ ಭಾರತದಾದ್ಯಂತ ಕರ್ವಾ ಚೌತ್ ಹಬ್ಬದ ಹಿನ್ನಲೆಯಲ್ಲಿ ಪಂದ್ಯವನ್ನು ಅಕ್ಟೋಬರ್.20 ಕ್ಕೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.

ಎರಡನೇ ಏಕದಿನ ಪಂದ್ಯ ಅಕ್ಟೋಬರ್ 19 ರಂದು ಫಿರೋಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಿಗದಿಯಾಗಿತ್ತು. ಮಹಿಳೆಯರ ಹಬ್ಬವೆಂದೇ ಪ್ರಸಿದ್ದಿ ಪಡೆದ ಕರ್ವಾ ಚೌತ್ ಹಬ್ಬ ಉತ್ತರ ಭಾರತದಾದ್ಯಂತ ಅಕ್ಟೋಬರ್ 19 ರಂದು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. [ಭಾರತ ವಿರುದ್ಧದ 3 ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ]

BCCI postpones India-New Zealand 2nd ODI in New Delhi

ಆದ್ದರಿಂದ ಅ. 19 ರಂದು ನಿಗದಿಯಾಗಿದ್ದ 2ನೇ ಏಕದಿನ ಪಂದ್ಯವನ್ನು ಮುಂದೂಡಬೇಕೆಂದು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಶಿಯೇಷನ್ ಉಪಾಧ್ಯಕ್ಷ ಸಿ.ಕೆ ಖನ್ನಾ ಬಿಸಿಸಿಐಗೆ ಮನವಿ ಮಾಡಿದ್ದರು.[ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ[ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

ನಮ್ಮ ಮನವಿಗೆ ಭಾರತೀಯ ಕ್ರಿಕೆಟ್ ಮಂಡಳಿ ಸ್ಪಂದನೆ ನೀಡಿದ್ದು, ಅ.19 ಬದಲಾಗಿ ಅ.20 ಕ್ಕೆ ನಡೆಸಲು ಒಪ್ಪಿಗೆ ಸೂಚಿಸಿದೆ. ಎಂದು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಶಿಯೇಷನ್ ಉಪಾಧ್ಯಕ್ಷ ಸಿ.ಕೆ ಖನ್ನಾ ಅವರು ತಿಳಿಸಿದ್ದಾರೆ..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BCCI today (September 8) has decided to shift the 2nd ODI between India and New Zealand from October 19 to 20th due to 'Karva Chauth' festival
Please Wait while comments are loading...