ಐಪಿಎಲ್ ನಲ್ಲಿ ಆಡದಿದ್ದರೂ ಶಮಿ ಜೇಬಿಗೆ ಕೋಟ್ಯಂತರ ಮೊತ್ತ!

Posted By:
Subscribe to Oneindia Kannada

ಮುಂಬೈ, ಜುಲೈ 12: ಮಂಡಿನೋವಿಗೆ ತುತ್ತಾಗಿ 2015ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಪ್ಪಿಸಿಕೊಂಡಿದ್ದ ವೇಗಿ ಮೊಹಮ್ಮದ್ ಶಮಿಗೆ ಬಾಕಿ ಮೊತ್ತವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾವತಿಸಿದೆ.

ವೇಗದ ಬೌಲರ್ ಮುಹಮ್ಮದ್ ಶಮಿಗೆ ಬಿಸಿಸಿಐ 2.2 ಕೋಟಿ ರೂ. ಪರಿಹಾರ ಧನ(Loss of Pay) ವನ್ನು ಬಿಸಿಸಿಐ ನೀಡಿದೆ. ಗಾಯದ ಸಮಸ್ಯೆಯ ನಡುವೆ ಶಮಿ ಅವರು 2015ರ ಕ್ರಿಕೆಟ್ ವಿಶ್ವಕಪ್‌ ನಲ್ಲಿ ಆಡಿದ್ದರು.[ಐಪಿಎಲ್ ನಿಂದ ಜಾವಗಲ್ ಶ್ರೀನಾಥ್ ಗೆ ಸಿಕ್ಕ ಸಂಬಳವೆಷ್ಟು?]

2015ರ ವಿಶ್ವಕಪ್ ನಂತರವೂ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸದ ವೇಳೆ ಶಮಿ ಭಾರತದ ಪ್ರಮುಖ ವೇಗಿ ಆಗಿದ್ದರು. ವಿಶ್ವಕಪ್‌ನಲ್ಲಿ ಭಾರತ ಆಡಿದ್ದ 5 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದ ಶಮಿ, ಟೂರ್ನಿಯಲ್ಲಿ ಐದನೆ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಆದರೆ, ಸೆಮಿಫೈನಲ್ ಹಂತದ ತನಕ ಮಾತ್ರ ತಲುಪಲು ಭಾರತಕ್ಕೆ ಸಾಧ್ಯವಾಗಿತ್ತು.

BCCI pays Rs 2.2 crore to Mohammed Shami for 'loss of pay in IPL 2015'

ಗಾಯದ ಸಮಸ್ಯೆಯಿದ್ದರೂ ದೇಶಕ್ಕಾಗಿ ಆಡಿದ ಕಾರಣಕ್ಕೆ ಪರಿಹಾರ ರೂಪವಾಗಿ ಬಿಸಿಸಿಐ ಶಮಿ ಅವರಿಗೆ ಈ ಮೊತ್ತ ನೀಡಿದೆ.

ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಆಯ್ಕೆಯಾಗಿದ್ದ 26 ವರ್ಷ ವಯಸ್ಸಿನ ಶಮಿ ಅವರು 2015ರ ಐಪಿಎಲ್‌ನಿಂದ ಹೊರಗುಳಿದಿದ್ದರು. ಶಮಿ ಅವರನ್ನು ಹರಾಜಿನಲ್ಲಿ 4.25 ಕೋಟಿ ರು ನೀಡಿ ಡೆಲ್ಲಿ ತಂಡ ಸೇರಿಸಿಕೊಂಡಿತ್ತು. ಐಪಿಎಲ್ 9ರಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಂಡು ಆಡಿದ್ದರು.

ಐಪಿಎಲ್ ಸಂಬಳದ ಅರ್ಧ ಮೊತ್ತವನ್ನು 22,312,500 ರು ನೀಡುತ್ತಿದ್ದೇವೆ ಎಂದು ಬಿಸಿಸಿಐ ಪ್ರಕಟಿಸಿದೆ. ಈಗ ಗುಣಮುಖರಾಗಿರುವ ಶಮಿ ಅವರು ವೆಸ್ಟ್‌ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಸೇರಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಜುಲೈ 21ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fast bowler Mohammed Shami has been paid Rs 2.23 crore by the Board of Control for Cricket in India (BCCI) after he missed the Indian Premier League (IPL) 2015 due to injury.
Please Wait while comments are loading...