ಕಾಮೆಂಟ್ರಿ ಮಾಡಿದ ಅನಿಲ್ ಕುಂಬ್ಳೆಗೆ ಸಿಕ್ಕ ಮೊತ್ತವೆಷ್ಟು?

Posted By:
Subscribe to Oneindia Kannada

ನವದೆಹಲಿ, ಫೆ. 08: ಟೀಂ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಗೂ ಮಾಜಿ ಕ್ರಿಕೆಟರ್ ಸಂಜಯ್ ಮಂಜೇಕ್ರರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾಮೆಂಟ್ರಿ ಮಾಡಿದ್ದಕ್ಕೆ ಸಂಭಾವನೆ ಮೊತ್ತವನ್ನು ನೀಡಿದೆ.

ಅಕ್ಟೋಬರ್- ಡಿಸೆಂಬರ್ ನಡುವೆ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ ನಡೆದ ಸರಣಿಯಲ್ಲಿ ಕಾಮೆಂಟೆಟರ್ಸ್ ಆಗಿ ಕಾರ್ಯನಿರ್ವಹಿಸಿದ ಅನಿಲ್ ಕುಂಬ್ಳೆ ಅವರಿಗೆ 39 ಲಕ್ಷ ರು ಹಾಗೂ ಸಂಜಯ್ ಮಂಜೇಕ್ರರ್ ಅವರಿಗೆ 36 ಲಕ್ಷ ರು ಮೊತ್ತವನ್ನು ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.[ಮಾಧ್ಯಮಗಳ 'ಗೂಗ್ಲಿ' ಗೆ ತಿರುಗೇಟು ನೀಡಿದ ಕುಂಬ್ಳೆ]

Anil Kumble

ಮಂಜೇಕ್ರರ್ ಅವರಿಗೆ ಟೆಸ್ಟ್ ಪಂದ್ಯಗಳಲ್ಲಿ ವೀಕ್ಷಕ ವಿವರಣೆ ನೀಡಿದ್ದಕ್ಕಾಗಿ 36,49,375 ರು ಹಾಗೂ ಕುಂಬ್ಳೆ ಅವರಿಗೆ ಏಕದಿನ ಸರಣಿ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ 39,10,500 ರು ನೀಡಲಾಗಿದೆ.['ಮಂಕಿ ಗೇಟ್' ಬಗ್ಗೆ ಅನಿಲ್ ಕುಂಬ್ಳೆ ವಿಷಾದ]

ಐಪಿಎಲ್ ಗೆ ತಯಾರಿ: ಇಂಟರ್ ನ್ಯಾಷನಲ್ ಮ್ಯಾನೇಜ್ಮೆಂಟ್ ಗ್ರೂಪ್ (ಯುಕೆ) ಲಿಮಿಟೆಡ್ ಕಂಪನಿಗೆ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಆಯೋಜನೆಗಾಗಿ ಎರಡು ಹಂತದಲ್ಲಿ 11.6 ಕೋಟಿ ರು(5,80,09,500 ರು ಹಾಗೂ 5,80,09,528 ರು)
ನೀಡಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಸ್ (ಕೆಎಸ್ ಸಿಎ) ಗೆ ಜನವರಿ ತಿಂಗಳಿನಲ್ಲಿ 2,02,38,769 ರು ನೀಡಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಶಕ್ತಿ ಫಲಕವನ್ನು ಮೇಲ್ಛಾವಣಿಯಲ್ಲಿ ಅಳವಡಿಸಲು ಆದ ಖರ್ಚು ವೆಚ್ಚವನ್ನು ನೀಡಲಾಗಿದೆ. [ಬೆಳಗಾವಿಯಲ್ಲಿ ಕ್ರೀಡಾ ಅಕಾಡೆಮಿ, ಕುಂಬ್ಳೆ ಮುಂದಾಳತ್ವ]

ಇದಲ್ಲದೆ 2012-13 ರಿಂದ ಬಾಕಿ ಉಳಿದಿದ್ದ ಅನುದಾನ ಮೊತ್ತವನ್ನು ಬಿಡುಗಡೆ ಮಾಡಲಾಗಿದ್ದು, ಮೇಘಾಲಯ ಕ್ರಿಕೆಟ್ ಅಸೋಸಿಯೇಷನ್ ಗೆ 56.25 ಲಕ್ಷ ರು ನೀಡಲಾಗಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The BCCI has paid former India captain Anil Kumble and batsman Sanjay Manjrekar approximate amounts of Rs 39 lakh and Rs 36 lakh respectively as their commentary fee for the home series against South Africa held between October to December.
Please Wait while comments are loading...