ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ಎಷ್ಟು ಸಂಬಳ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರ ಸಂಬಳ ವಿವರ ಬಹಿರಂಗಗೊಂಡಿದೆ. ಕುಂಬ್ಳೆ ಅವರಿಗೆ ಮಾಜಿ ಕೋಚ್ ರವಿಶಾಸ್ತ್ರಿಗಿಂತ ಕಡಿಮೆ ಸಂಬಳ ಸಿಗುತ್ತಿದೆ.

ಆದರೆ, ಕುಂಬ್ಳೆಗೆ ಗ್ಯಾರಿ ಕರ್ಸ್ಟನ್, ಡಂಕನ್ ಫ್ಲೆಚರ್ ಗಿಂತ ಅಧಿಕ ಸಂಬಳ ಸಿಗುತ್ತಿದೆ ಎಂಉದ್ ಮುಂಬೈ ಮಿರರ್ ವರದಿ ಮಾಡಿದೆ.ಅನಿಲ್ ಕುಂಬ್ಳೆಗೆ ವಾರ್ಷಿಕ 6.25 ಕೋಟಿ ರು ಪ್ಯಾಕೇಜ್ ಘೋಷಿಸಲಾಗಿದೆ. ಆದರೆ, ಇದು ರವಿಶಾಸ್ತ್ರಿ ಅವರು ತಂಡದ ನಿರ್ದೇಶಕರಾಗಿದ್ದಾಗ ಅವರಿಗೆ ಸಿಗುತ್ತಿದ್ದ ಮೊತ್ತಕ್ಕಿಂತ 75 ಲಕ್ಷ ರು ಕಡಿಮೆ ಮೊತ್ತವಾಗಿದೆ. [ಐಪಿಎಲ್ ನಿಂದ ಜಾವಗಲ್ ಶ್ರೀನಾಥ್ ಗೆ ಸಿಕ್ಕ ಸಂಬಳವೆಷ್ಟು?]

BCCI to pay Rs 6.25 crore salary to India coach Anil Kumble

ಆದರೆ, ಗ್ಯಾರಿ ಕರ್ಸ್ಟನ್, ಡಂಕನ್ ಫ್ಲೆಚರ್ ಅವರಿಬ್ಬರಿಗಿಂತ ಹಾಲಿ ಮುಖ್ಯಕೋಚ್ ಅನಿಲ್ ಅವರಿಗೆ ಅಧಿಕ ಮೊತ್ತದ ಸಂಬಳ ಸಿಗುತ್ತಿದೆ. ಗ್ಯಾರಿ ಹಾಗೂ ಡಂಕನ್ ಅವರಿಗೆ 3 ರಿಂದ 4 ಕೋಟಿ ರು ಸಿಗುತ್ತಿತ್ತು.

ಜೂನ್ ತಿಂಗಳಿನಲ್ಲಿ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಅನಿಲ್ ಕುಂಬ್ಳೆ ಅವರ ಅಧಿಕಾರ ಅವಧಿ 1 ವರ್ಷಕ್ಕೆ ಸೀಮಿತವಾಗಿದೆ. ಕುಂಬ್ಳೆ ಅವರು ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಚೊಚ್ಚಲ ಪ್ರವಾಸದಲ್ಲೇ ಉತ್ತಮ ಸಾಧನೆ ತೋರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ 0-2 ಅಂತರದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ.

ಆಗಸ್ಟ್ 27 ಹಾಗೂ 28ರಂದು ವೆಸ್ಟ್ ಇಂಡೀಸ್ ವಿರುದ್ಧ ಭಾರತ 2 ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದ್ದು, ಈ ಪಂದ್ಯಗಳು ಯುಎಸ್ಎನಲ್ಲಿ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's new head coach Anil Kumble will be paid less than former Team Director Ravi Shastri but more salary than Gary Kirsten and Duncan Fletcher.
Please Wait while comments are loading...