ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 23 : ಬಹಳ ದಿನಗಳಿಂದ ಖಾಲಿ ಬಿದ್ದಿರುವ ಭಾರತ ತಂಡದ ಕೋಚ್ ಹಾಗೂ ಮೂರು ಅಸಿಸ್ಟೆಂಟ್ ಕೋಚ್ ಹದ್ದೆಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಅಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜೂನ್ 10 ಅಂತಿಮ ದಿನಾಂಕವನ್ನು ಬಿಸಿಸಿಐ ನೀಡಿದೆ.

ಇದರಿಂದ ಆಯ್ಕೆ ಪ್ರಕ್ರಿಯೆಯನ್ನು ಬಿಸಿಸಿಐ ಮುಂದಕ್ಕೆ ದೂಡಿದೆ. ಅರ್ಜಿಗಳು ಬಂದ ನಂತರ ಅವುಗಳನ್ನು ಪರಿಶೀಲಿಸಿ ಸೂಕ್ತ ವ್ಯಕ್ತಿಯನ್ನು ಇನ್ನೆರಡು ತಿಂಗಳಲ್ಲಿ ಟೀಂ ಇಂಡಿಯಾದ ಕೋಚ್ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ)ನ ನೂತನ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ.[ಜಿಂಬಾಬ್ವೆ ಪ್ರವಾಸ, ಧೋನಿಗೆ ಆಯ್ಕೆ ಅವಕಾಶ ನೀಡಿದ ಬಿಸಿಸಿಐ]

ಭಾರತ ತಂಡದ ಮಾಜಿ ಆಟಗಾರರು ಹಾಗೂ ಇತರೆ ವಿದೇಶಿ ಆಟಗಾರರು ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ 'ದಿ ವಾಲ್' ರಾಹುಲ್ ದ್ರಾವಿಡ್ ಅವರೇ ಸೂಕ್ತ ವ್ಯಕ್ತಿ ಎಂದು ಬಹಳಷ್ಟು ಕ್ರಿಕೆಟಿಗರು ದ್ರಾವಿಡ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು 'ರನ್ ಮಷಿನ್' ವಿರಾಟ್ ಕೊಹ್ಲಿ ಅವರು ಆರ್ ಸಿಬಿಯ ಕೋಚ್ ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

BCCI opens applications for Team India coach's job, deadline June 10

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್, ಜೆಸ್ಟಿನ್ ಲ್ಯಾಂಗರ್ ಅವರ ಹೆಸರುಗಳು ಸಹ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕೇಳಿಬರುತ್ತಿವೆ. ಇದರಿಂದ ಯಾರನ್ನು ನೇಮಿಸಬೇಕು ಎಂಬುವುದು ಬಿಸಿಸಿಐಗೆ ತಲೆ ನೋವಾಗಿದೆ. [ಬಿಸಿಸಿಐ ಅಧ್ಯಕ್ಷರಾಗಿ ಅನುರಾಗ್ ಅವಿರೋಧ ಆಯ್ಕೆ!]

ಡಂಕನ್ ಫ್ಲೆಚ್ಚರ್ ಅವರ ಅವಧಿ ಮುಗಿದ ನಂತರ ಕಳೆದ 2015 ವಿಶ್ವ ಕಪ್ ನಿಂದ ಟೀಂ ಇಂಡಿಯಾದ ಕೋಚ್ ಸ್ಥಾನ ಖಾಲಿ ಬಿದ್ದಿದ್ದು. ಇದುವರೆಗೂ ಯಾರನ್ನು ಸಹ ಆಯ್ಕೆ ಮಾಡದೆ ರವಿಶಾಸ್ತ್ರಿ ಅವರು ಕೋಚ್ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ. [ಕೋಚ್ ಆಗಲು ರಾಹುಲ್ ದ್ರಾವಿಡ್ ಸೂಕ್ತ: ರಿಕಿ ಪಾಂಟಿಂಗ್]

ಜೂನ್ ನಲ್ಲಿ ಜಿಂಬಾಬ್ಬೆ ಪ್ರವಾಸ ಮಾಡಲಿರುವ ಭಾರತ ತಂಡ 3 ಏಕದಿನ ಕ್ರಿಕೆಟ್ ಹಾಗೂ 2 ಟ್ವೆಂಟಿ20 ಪಂದ್ಯಗಳನ್ನಾಡಲಿದ್ದು, ನಂತರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ.[ಗಂಗೂಲಿ, ಬಿಸಿಸಿಐ ಅಧ್ಯಕ್ಷ ಹುದ್ದೆ ಬೇಡವೆನ್ನಲು ಕಾರಣವಿದೆ!]

ಕೋಚ್ ಸ್ಥಾನವನ್ನು ರವಿಶಾಸ್ತ್ರಿ ಅವರಿಗೆ ಹೊರಿಸುವ ಚಿಂತನೆ ಕೂಡಾ ನಡೆದಿದೆ ಎಂಬ ಸುದ್ದಿ ಇದ್ದರೂ ರವಿಶಾಸ್ತ್ರಿ, ಬಂಗಾರ್, ಅರುಣ್ ಅವರ ಸ್ಥಾನ ಬದಲಾಗಲಿದೆ. ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಒಳಗೊಂಡ ಉನ್ನತ ಸಮಿತಿ ನೀಡುವ ಶಿಫಾರಸ್ಸಿನ ಮೇಲೆ ಬಿಸಿಸಿಐ ಮುಂದಿನ ಕೋಚ್ ಆಯ್ಕೆ ಮಾಡಲಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Accelerating their efforts to find a new coach for the national cricket team, the BCCI today decided to advertise for the position and set June 10 as the deadline for applications.
Please Wait while comments are loading...