ಟೆಸ್ಟ್ ಕ್ರಿಕೆಟ್ ನಲ್ಲಿ ಇತಿಹಾಸ ಬರೆಯಲು ಸಜ್ಜಾದ ಟೀಂ ಇಂಡಿಯಾ!

By: Ramesh B
Subscribe to Oneindia Kannada

ನವದೆಹಲಿ, ಸೆ:16 : ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ತಲುಪಲಿದೆ. ಭಾರತ ಕ್ರಿಕೆಟ್ ತಂಡಕ್ಕೆ ಸೆಪ್ಟಂಬರ್ 22 ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಭಾರತಕ್ಕೆ 500ನೇ ಟೆಸ್ಟ್ ಪಂದ್ಯವಾಗಲಿದೆ.

ಈ ದಾಖಲೆಯೊಂದಿಗೆ ಟೀಂ ಇಂಡಿಯಾ ಇತಿಹಾಸದ ಪುಟ ಸೇರಲಿದೆ. ಗ್ರೀನ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುವ 500ನೇ ಟೆಸ್ಟ್ ಪಂದ್ಯದ ಸಮಾರಂಭದಲ್ಲಿ ಮಾಜಿ ನಾಯಕರನ್ನು ಸನ್ಮಾನಿಸಲಾಗುವುದು ಎಂದು ಯುಪಿಸಿಎ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. [ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ಹೇಗಿದೆ ನೋಡಿ!]

ಭಾರತದಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಿದ ಮೊದಲ ನಾಲ್ಕು ಕ್ರೀಡಾಂಗಣಗಳಲ್ಲಿ ಕಾನ್ಪುರದ ಮೈದಾನವೂ ಒಂದು. ಚೆನ್ನೈನ ಚೆಪಾಕ್, ಮುಂಬೈನ ವಾಂಖೆಡೆ ಮತ್ತು ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣಗಳಾಗಿವೆ. 500ನೇ ಆವಿಸ್ಮರಣೆಯ ಪಂದ್ಯದ ಕಾರ್ಯಕ್ರಮಗಳು ಈ ಕೆಳಗಿನಂತಿವೆ.[ಭಾರತ- ಕಿವೀಸ್ ಟೆಸ್ಟ್ ಸರಣಿ, ಯಾವ ದಾಖಲೆಗಳು ಧ್ವಂಸವಾಗಲಿವೆ?]

500ನೇ ಪಂದ್ಯದ ಟಾಸ್ ಗೆ ಬೆಳ್ಳಿ ನಾಣ್ಯ

500ನೇ ಪಂದ್ಯದ ಟಾಸ್ ಗೆ ಬೆಳ್ಳಿ ನಾಣ್ಯ

ಸೆಪ್ಟಂಬರ್ 22 ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 500ನೇ ಟೆಸ್ಟ್ ಪಂದ್ಯಕ್ಕೆ ಟಾಸ್ ಮಾಡಲು ಬೆಳ್ಳಿಯಿಂದ ತಯಾರಿಸಿರುವ ವಿಶೇಷ ನಾಣ್ಯ ಬಳಸಲಲಾಗುತ್ತದೆ.

ಎರಡು ಸಾವಿರ ಶಾಲಾ ಮಕ್ಕಳಿಗೆ ಪಂದ್ಯ ವೀಕ್ಷಿಸಲು ಅವಕಾಶ

ಎರಡು ಸಾವಿರ ಶಾಲಾ ಮಕ್ಕಳಿಗೆ ಪಂದ್ಯ ವೀಕ್ಷಿಸಲು ಅವಕಾಶ

500ನೇ ಟೆಸ್ಟ್‌ ಎಂಬ ಹೆಸರು ಇರುವ ಟೀಶರ್ಟ್ ಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಪಂದ್ಯದ ಪ್ರತಿದಿನವೂ ಎರಡು ಸಾವಿರ ಶಾಲಾ ಮಕ್ಕಳಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ. ಅದರಲ್ಲಿ ದೈಹಿಕ ಮತ್ತು ಮಾನಸಿಕವಾಗಿ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಾಜರಿರುವರು ಎಂದು ಶುಕ್ಲಾ ತಿಳಿಸಿದರು.

ಮಾಜಿ ದಿಗ್ಗಜ ನಾಯಕರಿಗೆ ಭೋಜನಕೂಟ

ಮಾಜಿ ದಿಗ್ಗಜ ನಾಯಕರಿಗೆ ಭೋಜನಕೂಟ

ಈ 500ನೇ ಪಂದ್ಯವನ್ನು ಅವಿಸ್ಮರಣೆಗೊಳಿಸಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದೇ ವೇಳೆ ಭಾರತ ಪರವಾಗಿ ಆಡಿ ತಮ್ಮ ಅಪ್ರತಿಮ ಆಟದೊಂದಿಗೆ ಹಲವು ಸಾಧನೆಗಳನ್ನು ಮಾಡಿದ ಟೀಂ ಇಂಡಿಯಾದ ಮಾಜಿ ದಿಗ್ಗಜ ನಾಯಕರಿಗೆ ಭೋಜನಕೂಟವನ್ನೂ ಆಯೋಜಿಸಲಾಗಿದೆ. ಆ ವೇಳೆ ನ್ಯೂಜಿಲೆಂಡ್ ತಂಡವೂ ಹಾಜರಿರಲಿದೆ ಎಂದು ಶುಕ್ಲಾ ತಿಳಿಸಿದರು.

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ಸ್ ಭಾವಗಹಿಸುವರು

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ಸ್ ಭಾವಗಹಿಸುವರು

ಮಾಜಿ ನಾಯಕರಾದ ನಾರಿ ಕಂಟ್ರ್ಯಾಕ್ಟರ್, ಚಂದು ಬೋರ್ಡೆ, ದಿಲಿಪ್ ವೆಂಗಸರ್ಕಾರ್, ಕಪಿಲ್ ದೇವ್, ರವಿಶಾಸ್ತ್ರಿ, ಸುನಿಲ್ ಗಾವಸ್ಕರ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಕೆ. ಶ್ರೀಕಾಂತ್ ಅವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ.

 ‘ಎ’ ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್

‘ಎ’ ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್

ಭಾರತ ತಂಡದ ಮುಖ್ಯ ಕೋಚ್ ಆಗಿರುವ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಜರಾಗಲಿದ್ದಾರೆ. ಇನ್ನು ‘ಎ' ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿಂದ ಮರಳುವ ಸಾಧ್ಯತೆಗಳು ಇವೆ.

500ನೇ ಟೆಸ್ಟ್ ಗೆ ಗ್ರೀನ್ ಪಾರ್ಕ್ ಸಾಕ್ಷಿ

500ನೇ ಟೆಸ್ಟ್ ಗೆ ಗ್ರೀನ್ ಪಾರ್ಕ್ ಸಾಕ್ಷಿ

ಸೆ.22 ರಂದು ಭಾರತದ ಪಾಲಿಗೆ ಹೆಮ್ಮೆಯ ದಿನವಾಗಲಿದ್ದು, ಅಂದು ಜರುಗಲಿರವ ಮೇಲೆ ತಿಳಿಸಿರುವಂತೆ ಎಲ್ಲಾ ಕಾರ್ಯಕ್ರಮಗಳಿಗೆ ಕಾನ್ಪುರ ಗ್ರೀನ್ ಪಾರ್ಕ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The BCCI has decided to invite all the former India captains to celebrate the occasion of country's '500th Test match' that will be played against New Zealand in Kanpur from September 22
Please Wait while comments are loading...