ಶ್ರೀಶಾಂತ್ ಆಸೆಗೆ ತಣ್ಣಿರೆರಚಿದ ಬಿಸಿಸಿಐ

Posted By:
Subscribe to Oneindia Kannada

ಬೆಂಗಳೂರು, ಜನವರಿ 24: ಟೀಂ ಇಂಡಿಯಾ ಸೇರುವ ಆಸೆ ಕಮರಿದ ಬಳಿಕ ವೇಗಿ ಶ್ರೀಶಾಂತ್ ಅವರು ಸ್ಕಾಟ್ಲೆಂಡ್ ತಂಡದ ಪರ ಅಡುವ ಅಸೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಣ್ಣಿರೆರಚಿದೆ. ಸ್ಕಾಟ್ಲೆಂಡ್ ಕ್ರಿಕೆಟ್ ಲೀಗ್ ನಲ್ಲಿ ಆಡಲು NOC ನೀಡುವಂತೆ ಕೋರಿ ಬಿಸಿಸಿಐ ಬಾಗಿಲು ತಟ್ಟಿದ್ದ ಶ್ರೀಶಾಂತ್ ಗೆ ನಿರಾಸೆಯಾಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಶ್ರೀಶಾಂತ್ ಅವರು ಮತ್ತೊಮ್ಮೆ ಕ್ರಿಕೆಟ್ ಅಂಗಳಕ್ಕೆ ಇಳಿಯದಂತೆ ತಡೆಯಲು ಬಿಸಿಸಿಐ ನಿರ್ಧರಿಸಿದೆ.

Banned pacer Sreesanth can't play in Scotland as BCCI denies NOC

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿದ್ದ ಶ್ರೀಶಾಂತ್ 2013ರಲ್ಲಿ ಬಂಧನಕ್ಕೊಳಗಾದ ಬಳಿಕ ಅವರ ಮೇಲೆ ಆಜೀವ ನಿಷೇಧ ಹೇರಿ ಬಿಸಿಸಿಐ ಶಿಸ್ತುಪಾಲನಾ ಸಮಿತಿ ಕ್ರಮಕೈಗೊಂಡಿತ್ತು.

ಕೇರಳದ ಕೊಚ್ಚಿ ಮೂಲದ ಶ್ರೀಶಾಂತ್ ಅವರು ಕ್ರಿಕೆಟ್ ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧ ಯಾವುದೇ ಕಾರಣಕ್ಕೂ ಸಡಿಲಗೊಳಿಸದಿರಲಿ ಬಿಸಿಸಿಐ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tainted Indian speedster S Sreesanth, who was expecting to return to cricket, was dealt a blow when the Board of Control for Cricket in India (BCCI) denied him an NOC to play in the Scotland cricket league.
Please Wait while comments are loading...