ಬಿಸಿಸಿಐ ಬಾಸ್ ಅನುರಾಗ್ ಈಗ ಸೇನೆಯ ಲೆಫ್ಟಿನೆಂಟ್!

Posted By:
Subscribe to Oneindia Kannada

ನವದೆಹಲಿ, ಜುಲೈ 29: ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ, ಮಾಜಿ ನಾಯಕ ಕಪಿಲ್ ದೇವ್ ಅವರ ಸಾಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಶುಕ್ರವಾರ(ಜುಲೈ 29) ಸೇರ್ಪಡೆಗೊಂಡಿದ್ದಾರೆ.

ಸಂಸದ ಅನುರಾಗ್ ಠಾಕೂರ್ ಅವರನ್ನು ಗೌರವ ಲೆಫ್ಟಿನೆಂಟ್(territorial army) ಹುದ್ದೆಗೇರಿಸಿ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ದೆಹಲಿ ಸೌತ್ ಬ್ಲಾಕ್ ನಲ್ಲಿ ಗೌರವಿಸಿದರು. [ಅನುರಾಗ್ ಠಾಕೂರ್ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆ]

ಈ ಸಂದರ್ಭದಲ್ಲಿ ಠಾಕೂರ್ ಅವರ ತಂದೆ, ಹಿಮಾಚಲಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಹಾಗೂ ಕುಟುಂಬಸ್ಥರು ಹಾಜರಿದ್ದರು.[ಸೇನೆಗೆ ಹೊಸ ಆಯುಧ 'ವರುಣಾಸ್ತ್ರ'; ಏನಿದರ ವಿಶೇಷ?]

ಇದು ಗೌರವಾರ್ಥ ನೀಡುವ ಪದವಿಯಾದರೂ ತುರ್ತು ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಕರ್ತವ್ಯ ನಿರ್ವಹಿಸಲು ತೊಡಗಬೇಕಾಗುತ್ತದೆ. ಕಪಿಲ್ ದೇವ್ ಹಾಗೂ ಧೋನಿ ಅವರು ಈ ಹಿಂದೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಸೇನಾ ಮುಖ್ಯಸ್ಥ ಸುಹಾಗ್ ಜತೆ ಅನುರಾಗ್

ಸೇನಾ ಮುಖ್ಯಸ್ಥ ಸುಹಾಗ್ ಜತೆ ಅನುರಾಗ್

ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಜತೆ ಅನುರಾಗ್ ಠಾಕೂರ್ (ಬಲ ಬದಿ)ಅವರು ಪೂರ್ಣ ಪ್ರಮಾಣದ ಲೆಫ್ಟಿನೆಂಟ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಪ್ಪ ಹಾಗೂ ಸೇನಾ ಮುಖ್ಯಸ್ಥರಿಂದ ಠಾಕೂರ್ ಗೆ ಗೌರವ

ಅಪ್ಪ ಹಾಗೂ ಸೇನಾ ಮುಖ್ಯಸ್ಥರಿಂದ ಠಾಕೂರ್ ಗೆ ಗೌರವ

ಅನುರಾಗ್ ಠಾಕೂರ್ ಅವರ ಅಪ್ಪ ಪ್ರೊ ಎಸ್ ಕೆ ಧುಮಲ್ ಹಾಗೂ ಸೇನಾ ಮುಖ್ಯಸ್ಥ ಸುಹಾಗ್ ಅವರು ಸೇನಾ ಲೆಫ್ಟಿನೆಂಟ್ ಸ್ಟಾರ್ ಗಳನ್ನಿತ್ತು ಗೌರವಿಸುತ್ತಿದ್ದಾರೆ.

ಠಾಕೂರ್ ಅವರ ಕುಟುಂಬದ ಜತೆ ಸುಹಾಗ್

ಠಾಕೂರ್ ಅವರ ಕುಟುಂಬದ ಜತೆ ಸುಹಾಗ್

ಅನುರಾಗ್ ಠಾಕೂರ್ ಕುಟುಂಬದ ಜೊತೆ ಸೇನಾ ಮುಖ್ಯಸ್ಥ ಸುಹಾಗ್

ಕಪಿಲ್ ದೇವ್ ಅವರು ಕರ್ನಲ್

ಕಪಿಲ್ ದೇವ್ ಅವರು ಕರ್ನಲ್

ಇಂಡಿಯನ್ ಟೆರಿಟೋರಿಯಲ್ ಆರ್ಮಿಯಲ್ಲಿ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಕ್ಯಾಪ್ಟನ್ ಆಗಿ ನೇಮಿಸಲಾಗಿದೆ.

ಎಂಎಸ್ ಧೋನಿ ಅವರು ಲೆಫ್ಟಿನೆಂಟ್

ಎಂಎಸ್ ಧೋನಿ ಅವರು ಲೆಫ್ಟಿನೆಂಟ್

ಎಂಎಸ್ ಧೋನಿ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿದ್ದಾರೆ.

ವಾಯುಸೇನೆ ಕ್ಯಾಪ್ಟನ್ ಆಗಿ ಸಚಿನ್

ವಾಯುಸೇನೆ ಕ್ಯಾಪ್ಟನ್ ಆಗಿ ಸಚಿನ್

ಕ್ರಿಕೆಟ್ ದಿಗ್ಗಜ ಸಚಿನ್ ಅವರು ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಪದವಿ ಹೊಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BCCI president Anurag Thakur became a part of the elite group of MS Dhoni and Kapil Dev after joining the Indian Army.
Please Wait while comments are loading...