ಬೆಂಗಳೂರು ಸೇರಿದಂತೆ ಎಲ್ಲೆಲ್ಲಿ 23 ಪಂದ್ಯಗಳು ನಡೆಯಲಿವೆ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 02: ಶ್ರೀಲಂಕಾ ಸರಣಿ ನಂತರ ಟೀಂ ಇಂಡಿಯಾ ತನ್ನ ತವರು ನೆಲದಲ್ಲಿ ಸರಿ ಸುಮಾರು 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಸೆಪ್ಟಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಈ ಪಂದ್ಯಗಳು ನಡೆಯಲಿವೆ.

ಆಸ್ಟ್ರೇಲಿಯಾ ವಿರುದ್ಧ ಐದು ಏಕದಿನ ಹಾಗೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಕೇರಳದ ತಿರುವನಂತಪುರಂ ಹಾಗೂ ಅಸ್ಸಾಂನ ಬರ್ಸಾಪರದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಅನುಮತಿ ಸಿಕ್ಕಿದೆ.

23 ಪಂದ್ಯಗಳು ಎಲ್ಲೆಲ್ಲಿ ನಡೆಯಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಆದರೆ, ಪಂದ್ಯಗಳು ಯಾವಾಗ ನಡೆಯಲಿವೆ ಎಂಬ ಮಾಹಿತಿ ನಂತರ ಸಿಗಲಿದೆ.

BCCI announces Team India's upcoming home season: Here's the schedule of 23 matches in 2017

ಎಲ್ಲೆಲ್ಲಿ ಪಂದ್ಯಗಳು:
ಆಸ್ಟ್ರೇಲಿಯಾ ಸರಣಿ
5 ಏಕದಿನ ಪಂದ್ಯಗಳು: ಚೆನ್ನೈ, ಬೆಂಗಳೂರು, ನಾಗ್ಪುರ್, ಇಂದೋರ್ ಹಾಗೂ ಕೋಲ್ಕತ್ತಾ.
3 ಟಿ20ಐ : ಹೈದರಾಬಾದ್, ರಾಂಚಿ ಹಾಗೂ ಗುವಾಹಟಿ.


ನ್ಯೂಜಿಲೆಂಡ್ ಸರಣಿ
3 ಏಕದಿನ ಪಂದ್ಯಗಳು: ಪುಣೆ, ಮುಂಬೈ ಹಾಗೂ ಕಾನ್ಪುರ್.
3 ಟಿ20ಐ : ದೆಹಲಿ, ಕಟಕ್ ಹಾಗೂ ರಾಜ್ ಕೋಟ್.


ಶ್ರೀಲಂಕಾ ಸರಣಿ

3 ಟೆಸ್ಟ್ : ಕೋಲ್ಕತ್ತಾ, ನಾಗ್ಪುರ್ ಹಾಗೂ ದೆಹಲಿ
3 ಏಕದಿನ ಪಂದ್ಯಗಳು: ಧರ್ಮಶಾಲ, ಮೋಹಾಲಿ ಹಾಗೂ ವಿಶಾಖಪಟ್ಟಣಂ.
3 ಟಿ20ಐ : ಕೊಚ್ಚಿ/ತಿರುವನಂತಪುರಂ, ಇಂದೋರ್ ಹಾಗೂ ಮುಂಬೈ.

India vs Sri Lanka: Hardik Pandya may play in first match says Virat Kohli

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virat Kohli and his boys will embark upon another long home season after returning from Sri Lanka tour to play 23 international games in between September and December.
Please Wait while comments are loading...